Drop Down Menus CSS Drop Down Menu #
>> Namaskaram..!! Welcome to Namma-Naadu.blogspot.com >> ಓದುಗ ಬಂದುಗಳಿಗೆ ಹೃದಯಪೂರ್ವಕ ನಮಸ್ಕಾರ!! ನಮ್ಮ-ನಾಡು ಅಂತರ್ಜಾಲ ಪುಟ ವೀಕ್ಷಕರು ನಮ್ಮನ್ನು ಇಲ್ಲಿಯವರೆಗೆ ಪ್ರೋತ್ಸಾಹಿಸಿ, ಅಭಿನಂದಿಸಿದ್ದೀರಿ. ಮುಂದೆಯೂ ಕೂಡಾ ಇದೇ ರೀತಿಯಲ್ಲಿ ನಮ್ಮೊಂದಿಗೆ ಜೊತೆಯಾಗಿದ್ದು, ನಮ್ಮ-ನಾಡಿನ ಸೊಗಡನ್ನು ಸಾರೋಣ... ಧನ್ಯವಾದಗಳೊಂದಿಗೆ : ರಾಘವ್ ಕೋಟೇಶ್ವರ. >> ನಮ್ಮ ಮುಂದಿನ ಲೇಕನಗಳು : • ಶ್ರೀ ಚಿಕ್ಕಮ್ಮ ದೇವಸ್ಥಾನ, ಚಿಕನ್ಸಾಲ್,ಕುಂದಾಪುರ • ಶ್ರೀ ಪಂಚದುರ್ಗಾಪರಮೇಶ್ವರೀ ದೇವಸ್ಥಾನ,ಮಠದಬೆಟ್ಟು. ಕೋಟೇಶ್ವರ. >> ಇನ್ನೂ ಹಲವಾರು ದೇವಾಲಯ, ದೈವಾಲಯಗಳ ಮಾಹಿತಿಗಾಗಿ ನಿರೀಕ್ಷಿಸಿ..' >> ಪ್ರಕಟವಾದ ಹೊಸ ಲೇಖನಗಳು : •   ಶ್ರೀ ಅಬ್ಬಗ-ದಾರಗ ದೇವಸ್ಥಾನ, ಮಣಿಕಲ್ಲು   •   ಶ್ರೀ ಕನ್ನಿಕಾ ದುರ್ಗಾ, ಜಪ್ತಿ  • ಶ್ರೀ ಮಾರಿಯಮ್ಮ, ಕಾಪು.....

Showing posts with label Sri Manikallu Arbaga_Daraga Temple. Show all posts
Showing posts with label Sri Manikallu Arbaga_Daraga Temple. Show all posts

Sri Manikallu Arbaka Darakeshwari(Abbaga_Daraga) Temple, Manikallu, Shiruru, Udupi-Dist

ಶ್ರೀ ಅರ್ಭಗ-ದಾರಗೇಶ್ವರೀ ದೇವಸ್ಥಾನ, ಮಣಿಕಲ್ಲು, ಉಡುಪಿ ತಾ|
Shree Abbaga-Daraga Temple, Manikallu, Udupi Tq|

Sri Arbaka_Darageshwari Temple, Manikallu


ಡುಪಿ ಜಿಲ್ಲೆಯಲ್ಲಿ ಹಲವಾರು ಸಿರಿಪರಿವಾರದ ಸನ್ನಿಧಾನ(ಅಲಡೆ)ಗಳಿದ್ದು, ಸಿರಿಯ ಪೀಳಿಗೆ ಮತ್ತು ಸಿರಿಯ ಪರಿವಾರವು ತುಳುನಾಡಿನ ಎಲ್ಲೆಡೆಗಳಲ್ಲಿ ನೆಲೆಸಿ, ತಮ್ಮ ಕಾರಣೀಕ ಶಕ್ತಿಗಳಿಂದ ಮೆರೆದು ಭಕ್ತರ ಪಾಲಿನ ಆರಾದೈವಗಳಾಗಿ ನಾಡಿನುದ್ದಕ್ಕೂ ನೆಲೆಸಿದ್ದಾರೆ. ಅಂಥಹ ಸಿರಿಯ ಅವಳಿ ಮೊಮ್ಮಕ್ಕಳಾದ ಶ್ರೀ ಅಬ್ಬಗ-ದಾರಗ(ಅರ್ಭಗ-ಧಾರಕೇಶ್ವರೀ Abbaga-Daraga) ನೆಲೆಸಿರುವ ಪುಣ್ಯ ತಾಣವೆ ಮಂದಾರ್ತಿ-ಶಿರೂರು ಸಮೀಪದ ಜಾನುವಾರುಕಟ್ಟೆಯ ಮಣಿಕಲ್ಲು ಕ್ಷೇತ್ರ. ಮಣಿಕಲ್ಲು(Manikallu) ಎಂಬುದು ಅನಾದಿಯಲ್ಲಿ ಶ್ರೀ ದುರ್ಗೆಯ ಸಾನ್ನಿಧ್ಯವಾಗಿದ್ದು ಇಂದು ಶಕ್ತಿದೇವತೆ ದುರ್ಗೆಯ ಮಡಿಲಲ್ಲಿ ಸಪ್ತಸಿರಿಯರಲ್ಲಿ (ತುಳು ನಾಡಿನ ಸಪ್ತಸಿರಿ ದೇವಿಯರು) ಕೊನೆಯ ಅವಳಿ ಕುವರಿಯರು ಈ ಕ್ಷೇತ್ರದಲ್ಲಿ ನೆಲೆಯಾದರು.   
ಈ ಕ್ಷೇತ್ರವು ಮಣಿಕಲ್ಲು ಎಂದು ಪ್ರಸಿದ್ಧಿ ಪಡೆಯಲು ಒಂದು ಪುರಾತನ ಹಿನ್ನಲೆ ಕಂಡುಬರುತ್ತದೆ. ಹಿಂದೆ ಈ ಸ್ಥಳದ ಕೆಂಪು ಕಲ್ಲಿನ ಪೊಟರೆಯಲ್ಲಿ ನಾಗರಹಾವೊಂದು ಮಣಿಯೊಂದಿಗೆ ಕಾಣಿಸಿಕೊಳ್ಳುತ್ತಿತ್ತು. ಈ ಕಾರಣದಿಂದ ಈ ಕ್ಷೇತ್ರಕ್ಕೆ 'ಮಣಿಕಲ್ಲು' ಎಂದು ಅನ್ವರ್ಥವಾಗಿ ಹೆಸರು ಬಂತು. ಹೀಗೆ ಇದು ದುರ್ಗಾದೇವಿಯ ಸನ್ನಿದಾನವಾಗಿದ್ದು ತರುವಾರು ಸಿರಿದೇವಿಯರಲ್ಲಿ ಅವಳಿ ಕುವರಿಯರಾದ ಶ್ರೀ ಅರ್ಭಗ-ಧಾರಕೇಶ್ವರೀ(ಅಬ್ಬಗ-ದಾರಗ)ಯರು ನಂದಳಿಕೆಯಿಂದ ಇಲ್ಲಿ ಬಂದು ನೆಲೆಯಾಗುತ್ತಾರೆ.
ಇಲ್ಲಿ ಶ್ರೀ ಅಬ್ಬಗ-ದಾರಗರು ನೆಲೆಯಾಗಲು ಒಂದು ಜಾನಪದೀಯ ಹಿನ್ನಲೆಯನ್ನು ಕಾಣಬಹುದು. ಹಿರಿಯರ ಪ್ರಕಾರ ಸಿರಿದೇವಿಯರಾದ ಶ್ರೀ ಅರ್ಭಗ-ದಾರಕೇಶ್ವರಿಯರು ನೆಲೆಸುವ ಮೊದಲು ಇದು ದುರ್ಗೆಯ ಮೂಲ ಸ್ಥಾನವಾಗಿತ್ತು. ಅದೇ ತರುವಾಯ ಈ ಪರಿಸರದಲ್ಲಿ ನೈಲಾಡಿ ಮತ್ತು ಬಿಲ್ಲಾಡಿ ಎಂಬ ಎರಡು ಮನೆತನದವರು ನೆಲೆಸಿದರು. ಅಂತೆಯೇ ನೈಲಾಡಿ ಮನೆಯವರು ಅಕ್ಕ, ಬಿಲ್ಲಾಡಿ ಮನೆಯವರು ತಂಗಿ ಎಂಬುದಾಗಿ ಪ್ರತೀತಿ.
ನೈಲಾಡಿ ಮನೆಯಲ್ಲಿ ಓರ್ವ ದೈವ ಭಕ್ತರು, ಸಾತ್ವಿಕ ಗುಣದವರು ಇದ್ದು, ಅವರ ಹೆಂಡತಿಮನೆ ನಂದಳಿಕೆ ಆಗಿತ್ತಂತೆ. ಹೀಗೆ ಒಂದು ದಿನ ಅವರು ತಮ್ಮವರೊಡಗೂಡಿ ನಂದಳಿಕೆ ದೇವರ ಉತ್ಸವಕ್ಕೆ ಹೋದಾಗ ದಾರಿಯ ಮದ್ಯದಲ್ಲಿ ವಿಶ್ರಾಂತಿ ಪಡೆಯಲು ಎಲ್ಲರೂ ಕುಳಿತಾಗ ನಿದ್ರೆಯ ಮಾಯೆಯು ಇವರನ್ನು ಆವರಿಸಿತು. ಅದನಂತರ ಎಲ್ಲರೂ ಮುನ್ನಡೆದರೂ, ಈ ವ್ಯಕ್ತಿ ಕುಳಿತಲ್ಲೇ ನಿದ್ರೆ ಹೋದರಂತೆ. ಸ್ವಲ್ಪ ಸಮಯದ ಬಳಿಕ ಕಣ್ಣು ಬಿಟ್ಟು ನೋಡುವಾಗ ಅವರನ್ನು ಬಿಟ್ಟು ಎಲ್ಲರೂ ನಂದಳಿಕೆಗೆ ಹೋಗಿದ್ದರಂತೆ. ಇದನ್ನು ನೆನೆದು ದುಖಿಃತರಾದಾಗ ಅವರಲ್ಲಿ ಒಂದು ಅಗೋಚರ ಶಕ್ತಿ ಹೀಗೆ ನುಡಿಯಿತಂತೆ, 'ಮಡಿ ಹಾಕು, ನಾನು ನಿಲ್ಲುತ್ತೇನೆ, ನೀನು ಈಗಲೇ ಹೊರಡು'. ಹೀಗೆ ದೈವೀ ನುಡಿಯನ್ನು ಆಲಿಸಿದ ಆ ವ್ಯಕ್ತಿ ಅಲ್ಲಿಂದ ಮುಂದೆ ನಡೆದು ಬಿಲ್ಲಾಡಿ ಮನೆಯ ಹತ್ತಿರ ಬರುವಾಗ ಸಂಜೆ ಆಗಿತ್ತು. ಅಲ್ಲೇ ಪಕ್ಕದಲ್ಲೇ ಇದ್ದ ಮಲ್ಲಿಗೆ ಕಟ್ಟೆಯಲ್ಲಿ ಕುಳಿತು ವಿಶ್ರಾಂತಿ ಪಡೆಯುತ್ತಾರೆ. ಇದೆ ಇವರೊಂದಿಗೆ ಬಂದ ಅವಳಿ ಸಿರಿದೇವಿ ಶ್ರೀ ಅಬ್ಬಗ-ದಾರಗ(ಅರ್ಭಗ-ಧಾರಕೇಶ್ವರೀ) ನೆಲೆನಿಂತ ಮೊದಲ ಸ್ಥಾನವಾಗಿದೆ ಎಂದು ತಿಳಿದುಬರುತ್ತದೆ. ನಂತರ ಅವರು ನೈಲಾಡಿ ಮನೆಗೆ ಬಂದರು. ಹೀಗೆ ತರುವಾಯ ಇಲ್ಲಿ ಗೆಜ್ಜೆಯ ಸದ್ದು, ಹಲಗೆಯಲ್ಲಿ ಪಾದದ ಚಿಹ್ನೆ ಕಾಣಿಸಿಕೊಂಡಿತು. ಹೀಗೆ ಪ್ರಧಾನ ಶಕ್ತಿಯ ಜೊತೆಯಲ್ಲಿ ಪರಿವಾರಗಳು ಬಂದ ಕಾರಣದಿಂದ ಶ್ರೀ ಅರ್ಭಗ-ಧಾರಕೇಶ್ವರೀ, ವೀರಭದ್ರ, ನಂದಿಕೇಶ್ವರ ದೇವರನ್ನು ಶ್ರೀ ಆದಿಶಕ್ತಿ ದುರ್ಗೆಯ ಸನ್ನಿದಾನದಲ್ಲೇ ಸಂಕಲ್ಪಿಸಿದಂತೆ ಪ್ರತಿಷ್ಠೆ ಮಾಡಲಾಗುತ್ತದೆ.
ಹೀಗೆ ಉನ್ನತ ಆಧ್ಯಾತ್ಮ ಹಿನ್ನಲೆಯೊಂದಿಗೆ ಬೆಸೆದುಕೊಂಡ ಮಣಿಕಲ್ಲು ಶ್ರೀ ಅರ್ಭಗ-ಧಾರಕೇಶ್ವರೀ ಅಮ್ಮನವರ ದೇವಸ್ಥಾನವು ಬಿಲ್ಲಾಡಿ ಮತ್ತು ನೈಲಾಡಿ ಮನೆತನದೊಂದಿಗೆ ಅವಿನಾಭಾವ ಸಂಭಂದವನ್ನು ಬೆಸೆದುಕೊಂಡು, ಶಿರೂರಿನ ಗರಡಿ ಮನೆಯವರ ಮತ್ತು ಇಲ್ಲಿನ ಗರಡಿಯೊಂದಿಗೆ ಸುಸಂಬಂಧವನ್ನು ಹೊಂದಿರುವುದನ್ನು ಕಾಣಬಹುದು. ಇಲ್ಲಿನ ಕಾರಣೀಕತೆಯ ಕಂಪು ಇಲ್ಲಿಗೇ ಮಾತ್ರವೇ ಸೀಮಿತವಾಗದೆ ಅವಿಭಜಿತ ದಕ್ಷಿಣ ಕನ್ನಡ ಸಮೇತ ಘಟ್ಟದಿಂದಲೂ ಹಾಗೂ ಉತ್ತರಕನ್ನಡ ಕಡೆಯಿಂದಲೂ ಭಕ್ತರೂ ಆಗಮಿಸುತ್ತಾರೆ.
ಇಲ್ಲಿ ಪ್ರತಿನಿತ್ಯ ತ್ರಿಕಾಲ ಪೂಜೆ ನಡೆಯುತ್ತದೆ. ಅಮ್ಮನವರಿಗೆ ಪ್ರತಿವರ್ಷ ಮಾರ್ಚ್ ತಿಂಗಳಲ್ಲಿ ಮೂರುದಿನ ವಾರ್ಷಿಕ ಮಹೋತ್ಸವ ನಡೆಯುತ್ತದೆ. ಇಲ್ಲಿ ಹಲವಾರು ಪರಿವಾರಶಕ್ತಿಗಳನ್ನು ನಾವು ಕಾಣಬಹುದಾಗಿದೆ. ಆ ಸಮಯದಲ್ಲಿ ವಿಶೇಷ ಪೂಜೆ, ಅನ್ನಸಂತರ್ಪಣೆ, ಗೆಂಡಸೇವೆ, ಹಾಲಿಟ್ಟು, ತುಲಾಭಾರ ಹಾಗೂ ಹಲವಾರು ಸೇವಾ-ಕೈಂಕರ್ಯಗಳು ನಡೆಯುತ್ತವೆ. ಪ್ರತಿ ಸಂಕ್ರಮಣ ಕಾಲದಲ್ಲಿ ಬೆಳಿಗ್ಗೆ 10.00 ಗಂಟೆಯಿಂದ ದರ್ಶನ ಸೇವೆ ನಡೆಯುತ್ತದೆ. ಸಿರಿ ಆರಾಧನೆಯಲ್ಲಿ ಸಿರಿಪುಷ್ಪ(ಹಿಂಗಾರ)ಕ್ಕೆ ಅತ್ಯಂತ ಮಹತ್ವವಿದ್ದು, ಅಂದು ಶ್ರೀ ದೇವರಿಗೆ ಮುಡಿಬಿಟ್ಟ ಭಕ್ತರಿಂದ ಆವೇಶ ಕಂಡುಬರುತ್ತದೆ.
ಈ ರೀತಿಯಲ್ಲಿ ತುಳುನಾಡಿನ ಸಿರಿದೇವಿಯರಾದ ಶ್ರೀ ಅರ್ಭಗ-ಧಾರಕೇಶ್ವರೀ ಅವಳಿ ಸೋದರಿಯರ ವಿಶಿಷ್ಠ ಕ್ಷೇತ್ರಕ್ಕೆ ಒಮ್ಮೆ ತಾವೂ ಭೇಟಿ ನೀಡಿ, ಶ್ರೀ ಅವಳಿ ಸೋದರಿಯರ ಸಮೇತ ಪರಿವಾರ ಶಕ್ತಿಗಳ ಕೃಪೆಗೆ ಪಾತ್ರರಾಗಿ, ಸಕಲವನ್ನು ಹೊಂದಿ ಸಂತೃಪ್ತ ಜೀವನವನ್ನು ಸಾಗಿಸಿ, ಪುಣ್ಯಕ್ಕೆ ಬಾಜನರಾಗಿ.

ವಿಳಾಸ :-
ಶ್ರೀ ಅರ್ಭಗ-ಧಾರಕೇಶ್ವರೀ(ಅಬ್ಬಗ-ದಾರಗ) ದೇವಸ್ಥಾನ,
ಮಣಿಕಲ್ಲು, ಜಾನುವಾರುಕಟ್ಟೆ, ಉಡುಪಿ ತಾ||

ದಾರಿಯ ವಿವರ : ಕುಂದಾಪುರದಿಂದ ಕೋಟ ಮೂರುಕೈ ಮೂಲಕ ಸಾಬ್ರಕಟ್ಟೆ ಸಾಗಿ ಅಲ್ಲಿಂದ ಶಿರೂರು ಮೂರುಕೈ ಸಮೀಪದ ಶ್ರೀ ದೇವಿಯ ಮಂದಿರದ ಸ್ವಾಗತ ಗೋಪುರದಲ್ಲಿ ಮುಂದೆ ಸಾಗಿದರೆ ಭವ್ಯ ದೇವಾಲಯ ದರ್ಶನವಾಗುತ್ತದೆ. ಇಲ್ಲವೇ ಉಡುಪಿ-ಬಹ್ಮಾವರದ ಮೂಲಕ ಸಾಬ್ರಕಟ್ಟೆಗೆ ಬಂದು ಅಲ್ಲಿಂದ ಮುಂದೆ ಸಾಗಿದರೆ ದೇವಿಯ ಸಾನ್ನಿಧ್ಯವನ್ನು ತಲುಪಬಹುದು.

ಲೇಖನ ಕೃಪೆ : ಜನಪ್ರತಿನಿಧಿ ವಾರಪತ್ರಿಕೆ (ಕುಂದಾಪುರ)