Drop Down Menus CSS Drop Down Menu #
>> Namaskaram..!! Welcome to Namma-Naadu.blogspot.com >> ಓದುಗ ಬಂದುಗಳಿಗೆ ಹೃದಯಪೂರ್ವಕ ನಮಸ್ಕಾರ!! ನಮ್ಮ-ನಾಡು ಅಂತರ್ಜಾಲ ಪುಟ ವೀಕ್ಷಕರು ನಮ್ಮನ್ನು ಇಲ್ಲಿಯವರೆಗೆ ಪ್ರೋತ್ಸಾಹಿಸಿ, ಅಭಿನಂದಿಸಿದ್ದೀರಿ. ಮುಂದೆಯೂ ಕೂಡಾ ಇದೇ ರೀತಿಯಲ್ಲಿ ನಮ್ಮೊಂದಿಗೆ ಜೊತೆಯಾಗಿದ್ದು, ನಮ್ಮ-ನಾಡಿನ ಸೊಗಡನ್ನು ಸಾರೋಣ... ಧನ್ಯವಾದಗಳೊಂದಿಗೆ : ರಾಘವ್ ಕೋಟೇಶ್ವರ. >> ನಮ್ಮ ಮುಂದಿನ ಲೇಕನಗಳು : • ಶ್ರೀ ಚಿಕ್ಕಮ್ಮ ದೇವಸ್ಥಾನ, ಚಿಕನ್ಸಾಲ್,ಕುಂದಾಪುರ • ಶ್ರೀ ಪಂಚದುರ್ಗಾಪರಮೇಶ್ವರೀ ದೇವಸ್ಥಾನ,ಮಠದಬೆಟ್ಟು. ಕೋಟೇಶ್ವರ. >> ಇನ್ನೂ ಹಲವಾರು ದೇವಾಲಯ, ದೈವಾಲಯಗಳ ಮಾಹಿತಿಗಾಗಿ ನಿರೀಕ್ಷಿಸಿ..' >> ಪ್ರಕಟವಾದ ಹೊಸ ಲೇಖನಗಳು : •   ಶ್ರೀ ಅಬ್ಬಗ-ದಾರಗ ದೇವಸ್ಥಾನ, ಮಣಿಕಲ್ಲು   •   ಶ್ರೀ ಕನ್ನಿಕಾ ದುರ್ಗಾ, ಜಪ್ತಿ  • ಶ್ರೀ ಮಾರಿಯಮ್ಮ, ಕಾಪು.....

Showing posts with label Sri Neelavara Durga(Mahishamardini). Show all posts
Showing posts with label Sri Neelavara Durga(Mahishamardini). Show all posts

Sri Mahishamardini Ammanavara Temple, Neelavara.

ಶ್ರೀ ಮಹಿಷಮರ್ದಿನಿ ದೇವಸ್ಥಾನ, ನೀಲಾವರ, ಉಡುಪಿ |
Shree Mahishamardini Temple, Neelavara, Udupi |

Sri Durga
Sri Neelavara Mahishamardini Ammanavaru

ರಶುರಾಮನು ನಿರ್ಮಿಸಿದ ಈ ಪುಣ್ಯಮಯನಾಡಿನಲ್ಲಿ ಹಲವಾರು ಪುಣ್ಯಸ್ಥಳಗಳಿಂದ ಈ ನಮ್ಮ ತುಳುವನಾಡು ಹಾಗೂ ಉತ್ತರದ ಕುಂದನಾಡು ಶಕ್ತಿಪ್ರದ ಸ್ಥಳಗಳ ನೆಲೆವೀಡು ಆಗಿದೆ. ಇಲ್ಲಿ ಹಲವಾರು ದೇವಾಲಯಗಳು ಮಹಾನ್ ಕಾರಣೀಕ ಶಕ್ತಿ ಸ್ಥಳಗಳಾಗಿ ಇಂದು ವಿಶ್ವವಿಖ್ಯಾತವಾಗಿವೆ, ಅಂತೆಯೆ ತಮ್ಮ ಶಕ್ತಿಯ ಮೂಲಕ ಭಕ್ತಾಧಿಗಳನ್ನು ತನ್ನತ್ತ ಸೆಳೆಯುತ್ತಾ ಇದೆ.
ಕಲಿಯುಗದಲ್ಲಿ ದುರ್ಗಾ ಮತ್ತು ಗಣೇಶ ಬಹುಬೇಗನೆ ಭಕ್ತಿಗೆ ಒಲಿಯುವ ದೇವರಾಗಿದ್ದಾರೆ ಎಂಬುದು ಪುರಾಣದಲ್ಲಿ ತಿಳಿದುಬರುತ್ತದೆ. ಅಂತೆಯೆ ಅಮ್ಮನ ಒಂದು ಶಕ್ತಿ ಕ್ಷೇತ್ರವಾದ ನೀಲಾವರ ಶ್ರೀ ಮಹಿಷಮರ್ದಿನಿ ಅಮ್ಮನವರ ದೇವಸ್ಥಾನವು ಇಂದು ಕಾರಣೀಕತೆಯನ್ನು ತೋರುತ್ತಿರುವ ಶಕ್ತಿ ಕೇಂದ್ರವಾಗಿದೆ.
ಶ್ರೀ ಕ್ಷೇತ್ರವು ಇಂದಿನ ದಿನಗಳಲ್ಲಿ ಜೀರ್ಣೋದ್ದಾರ ಹಾಗೂ ಹಲವಾರು ಅಭಿವೃದ್ದಿ ಕಾರ್ಯಗಳ ಮೂಲಕ ಉನ್ನತ ಮಟ್ಟದಲ್ಲಿ ಉನ್ನತಿಯನ್ನು ಕಾಣುತ್ತಿದೆ. ಈ ರೀತಿಯಲ್ಲಿ ಶಂಕ ಚೂಡನ ಕುವರಿಯರಾದ ಪಂಚನಾಗಕನ್ಯೆಯರ ಶಾಪವನ್ನು ವಿಮೋಚನೆ ಮಾಡಲು ದುರ್ಗಾ ನಾಗಕನ್ಯೆಯರ ಜೊತೆಯಲ್ಲಿ ನೆಲೆಸಿ ಪಂಚದಿವ್ಯಾಯುದ ಸ್ಥಳಗಳನ್ನು ಭೂಲೋಕದಲ್ಲಿ ನಿರ್ಮಾಣಗೈದು ನಾಗಕನ್ಯೆಯರ ಜೊತೆಯಲ್ಲಿ ನೆಲೆಸಿ ಭಕ್ತರ ಅಭಿಷ್ಠವನ್ನು ಈಡೇರಿಸುತ್ತಾ ಮಾತೆ ದುರ್ಗೆಯು ಮಾತೃಹೃದಯಿ ಎಂಬುದನ್ನು ತೋರುತ್ತಾ ಇದ್ದಾಳೆ.

ಸ್ಥಳ ಪುರಾಣ : -
ನಾಗಲೋಕದ ಶ್ರೀ ಶಂಕಚೂಡನೆಂಬ ನಾಗರಾಜನಿಗೆ ವರಪ್ರಸಾದದಿಂದ ಜನಿಸಿದ ದೇವರತಿ, ನಾಗರತಿ, ಚಾರುರತಿ, ಮಂದರತಿ ಮತ್ತು ನೀಲರತಿ ಎಂಬ ಐದು ಜನ ಹೆಣ್ಣುಮಕ್ಕಳು ಮಹೇಶ್ವರನ ಮಗ ಸುಬ್ರಮಣ್ಯಸ್ವಾಮಿಯನ್ನು ವಿವಾಹವಾಗುವ ಹಂಬಲದಿಂದ, ಸುಬ್ರಮಣ್ಯಸ್ವಾಮಿಯನ್ನು ಕಾಣಲು ಕೈಲಾಸಕ್ಕೆ ತೆರಳಿ ಅಲ್ಲಿಯ ದ್ವಾರಪಾಲಕ ನಂದಿಯ ಶಾಪದಿಂದಾಗಿ ಸರ್ಪರೂಪದಲ್ಲಿ ಭೂಲೋಕ ಸಹ್ಯಾದ್ರಿಪರತ್ವದ ಕಾಡ್ಗಿಚ್ಚಿನಲ್ಲಿಸಿಕ್ಕು ಪರಿತಪಿಸುತ್ತಿದ್ದರು. ವ್ಯಾಘ್ರವಾದ ಮಹರ್ಷಿಗಳು ಸಹ್ಯಾದ್ರಿ ಪರತ್ವದ ಬಳಿ ಸಂಚರಿಸುವಾಗ ಅವರನ್ನು ನೋಡಿದ ನಾಗಕನ್ಯೆಯರು ಅವಸರವಾಗಿ ಓಡಾಡಿದಾಗ ಉಂಟಾದ ಭರಭರ ಶಬ್ದಕ್ಕೆ ಹೌಹಾರಿದ ಮಹರ್ಷಿಗಳಿಂದ, ಗತಿ ಕುಂಟಿತವಾಗಿ ಬಿದಿರು ಮಳೆಗೆ ಶೀಮಿತವಾಗಿರುವಂತಹ ಶಾಪಕ್ಕೆ ಆ ನಾಗಕನ್ಯೆಯರು ಗುರಿಯಾಗುತ್ತಾರೆ. ರಾಜಪುರುಷನೊಬ್ಬನಿಂದ ಶಾಪ ವಿಮೋಚನೆಯಾಗುವದೆಂದು ಮಹರ್ಷಿಗಳು ಹರಸಿದಂತೆ ಆವಂತಿಯ ರಾಜ ದೇವವರ್ಮನು ರಾಜ್ಯಬ್ರಷ್ಠನಾಗಿ ವೇಷ ಮರೆಸಿಕೊಂಡು ಸಹ್ಯಾದ್ರಿ ಪರ್ವತದಲ್ಲಿ ತಿರುಗಿದಾಗ ಕಾಡ್ಗಿಚ್ಚಿನಲ್ಲಿ ಬೆಂದು ಹೋಗುತ್ತಿರುವ ಐದು ಸರ್ಪಗಳನ್ನು ಉಳಿಸಿ ಅವುಗಳನ್ನು ಒಂದು ಬಟ್ಟೆಯಲ್ಲಿ ಸುತ್ತಿಕೊಂಡು ಪಶ್ಚಿಮಾಭಿಮುಖವಾಗಿ ಹೋಗುತ್ತಿರುವಾಗ ಆ ಸರ್ಪಗಳು ಒಂದೊಂದಾಗಿ ಹುತ್ತದಲ್ಲಿ ಸೇರಿದವು. ಅವುಗಳಲ್ಲಿ ನೀಲರತಿ ನಾಗ ಸರ್ಪವು ಸೇರಿದ ಜಾಗವೇ ನೀಲಾವರ ಕಾನನವೆಂಬ ಹೆಸರಾಯಿತು.
ಕಾಲಾನಂತರದಲ್ಲಿ ಆ ನಾಗ ಕನ್ಯೆಯರು ದೇವವರ್ಮ ರಾಜನಿಗೆ ಸ್ವಪ್ನದಲ್ಲಿ ಕಾಣಿಸಿಕೊಂಡು ತಿಳಿಸಿದಂತೆ ದೇವವರ್ಮ ರಾಜನು, ಹೆಮಾದ್ರಿಯ ರಾಜಾದಿತ್ಯನ ಏಕೈಕ ಪುತ್ರಿ ಜಲಜಾಕ್ಷಿಯನ್ನ ಪ್ರಾಣಾಪಾಯದಿಂದ ಬದುಕಿಸಿದ್ದಕ್ಕೆ ಆ ರಾಜನು ರಾಜ್ಯವನ್ನು ಹಾಗೂ ಮಗಳನ್ನು ದಾರೆಯೆರೆಯುತ್ತಾನೆ.
          ಹೀಗೆ ಮುಂದೆ ಪಂಚಕನ್ಯೆಯರು ಪಂಚ ಸ್ಥಳದಲ್ಲಿ ನೆಲೆಸಿದರು. ಈ ನಾಗಕನ್ಯೆಯರು ನೆಲೆಸಿದ ಸ್ಥಳಗಳು ಪಂಚ ನಾಗಸ್ಥಳಗಳಾಗಿ ಮಾರ್ಪಟ್ಟವು. ಕೊನೆಯವಳಾದ ನೀಲರತಿಯು ನೆಲೆಸಿನಿಂದ ನೀಲಾವರದ ಪಂಚಮಿಕಾನು ಎಂಬ ಸ್ಥಳದಲ್ಲಿ ಬೃಹತ್ ಗಾತ್ರದ ಹುತ್ತಗಳು ಬೆಳೆದು ನಿಂದಿವೆ. ಅದೇ ರೀತಿಯಲ್ಲಿ ಅಲ್ಲಿ ಸರ್ವಮಂಗಳೆಯಾದ ದುರ್ಗಾದೇವಿಯು ನೆಲೆಸಿ ನಾಗಕನ್ನಿಕೆಯರ ಶಕ್ತಿಯನ್ನು ಇಮ್ಮಡಿಗೊಳಿಸುತ್ತಾಳೆ.
          ನೀಲಾವರ ಪ್ರದೇಶವು ಸೀತಾ ನದಿಯ ದಡದಲ್ಲಿ ನೀರಿನಿಂದ ಆವೃತವಾಗಿದ್ದ ಕಾರಣ 'ನೀರಾವರ ಎಂಬುದಾಗಿ' ಮುಂದೆ 'ನೀಲಾವರ'(Neelavara) ಎಂಬುದಾಗಿ ಬದಲಾವಣೆಯಾಯಿತು ಎಂದು ಅಭಿಪ್ರಾಯ ಪಡಲಾಗುತ್ತದೆ. ಇಲ್ಲಿ ದೇವಿಯು ಮಹಿಷಮರ್ದಿನಿ ಎಂಬ ನಾಮದಿಂದ ಕರೆಯಲ್ಪಡುತ್ತಾಳೆ. ಅದೇ ರೀತಿಯಲ್ಲಿ ಮಹಿಷಮರ್ದಿನಿಯ ದೇವಾಲಯದಲ್ಲಿ ಪರಿವಾರ ಶಕ್ತಿಗಳಾದ ಶ್ರೀ ವೀರಭದ್ರ, ಕಲ್ಲುಕುಟ್ಟಿಗ ಹಾಗೂ ವಿನಾಯಕ ದೇವರು ನೆಲೆಸಿ ನಿಂದಿದ್ದಾರೆ. ಶ್ರೀ ವೀರಭದ್ರ(Veerabadra) ದೇವರು ಬೆಳೆಯನ್ನು ರಕ್ಷಣೆ ಮಾಡುತ್ತಾ, ಕಲ್ಕುಡನು(Kalkuda) ಕಳ್ಳತನಕ್ಕೆ ಸಂಬಂದಿಸಿದ ಕಾವಲಿನ ಕಾರ್ಯವನ್ನು ನಡೆಸುತ್ತಾರೆ. ಕಲ್ಕುಡನು ನೆಲೆಸಿದ ಸ್ಥಳವು ಮನೋಹರವಾದ ಚಿಕ್ಕ ಬೆಟ್ಟದಂತ ಪ್ರದೇಶವಾಗಿದೆ. ಇಲ್ಲಿ ಭಕ್ತಾಧಿಗಳು ತಮ್ಮ ಮನದ ಹರಿಕೆಯನ್ನು ಬೇಡಿಕೊಂಡು ಒಂದು ಕಲ್ಲನ್ನು ಹಾಕಿ ಹೋಗುತ್ತಾರೆ. ಆ ಸಂಪ್ರದಾಯ ಇಂದು ಬೆಳೆದು ಇಲ್ಲಿ ಕಲ್ಲಿನ ಗುಡ್ಡವೆ ನಿರ್ಮಾಣ ಆಗಿದೆ.
Kalkuda(Kallukuttiga)
          ಶ್ರೀ ಕ್ಷೇತ್ರದಲ್ಲಿ ವಿನಾಯಕ ದೇವರು ಪ್ರದಕ್ಷಿಣಾ ಪಥದ ಆಗ್ನೇಯದ ಮೂಲೆಯಲ್ಲಿ ನಿರ್ಮಾಣ ಮಾಡಲಾಗಿದೆ. ಹಾಗೂ ದೇವಾಲಯದ ಒಳಗಡೆ ಕೆಲವೊಂದು ಲಿಂಗಗಳು ಉದ್ಬವವಾಗಿದೆ. ಹಾಗೇ ಹೊರಗಿನ ಪ್ರದಕ್ಷಿಣಾ ಪಥದಲ್ಲಿ ಶ್ರೀ ವೀರಭದ್ರ ಹಾಗೂ ವ್ಯಾಘ್ರಚಾಮುಂಡಿ ಗುಡಿಗಳು ಇವೆ. ಕ್ಷೇತ್ರದ ಹೊರಗಿನ ಗುಡ್ಡದ ಮೇಲೆ ನೆಲೆಯಾಗಿದ್ದಾನೆ.
          ಶ್ರೀ ಕ್ಷೇತ್ರದಲ್ಲಿ ಅನ್ನದಾನ ಸೇವೆಯು ನಡೆಯುತ್ತದೆ. ದೇವಾಲಯದ ಎದುರು ಭಾಗವನ್ನು ಸುತ್ತುವರಿದು ಸೀತಾ ನದಿಯು ಹರಿಯುತ್ತದೆ. ಸನೀಹದಲ್ಲೇ ನೀಲರತಿಯು ನೆಲೆಸಿನಿಂದ ಪಂಚಮಿಕಾನು (Panchamikanu) ಎಂಬ ನಾಗಸ್ಥಾನವಿದೆ. ಹೀಗೆ ಪರಮಪುಣ್ಯವಾದ ಮಾತೆಯ ಕ್ಷೇತ್ರವನ್ನು ಭಕ್ತಾಭಿಮಾನಿಗಳಾದ ತಾವೆಲ್ಲರೂ ಒಮ್ಮೆ ಕಂಡು ಅಮ್ಮನ ಕೃಪಾರ್ಶಿವಾದಕ್ಕೆ ಪಾತ್ರರಾಗಿ; ಪುನೀತರಾಗಿ.

“ನೀಲಾವರದೊಡತಿ ಮಹಿಷಮರ್ದಿನಿಯು ನಿಮಗೆಲ್ಲರಿಗೂ ಸನ್ಮಂಗಳವನ್ನುಂಟು ಮಾಡಲಿ”

ದಾರಿಯ ವಿವರ : ಶ್ರೀ ಕ್ಷೇತ್ರವನ್ನು ತಲುಪಲು ಬ್ರಹ್ಮಾವರದ ಮೂಲಕ ಬ್ರಹ್ಮಾವರ-ಹೆಬ್ರಿ ಸಾಗುವ ದಾರಿಯಲ್ಲಿ ಸಾಗಿದರೆ ಶ್ರೀ ಕ್ಷೇತ್ರದ ಭವ್ಯ ಸ್ವಾಗತ ಗೋಪುರವು ಕಾಣಸಿಗುತ್ತದೆ. ಅಲ್ಲಿಂದ ಸರಿಸುಮಾರು 4 ಕಿ.ಮೀ ಸಾಗಿದರೆ ಶ್ರೀ ಮಾತೆಯ ದೇವಾಲಯವು ಸೀತಾ ನದಿಯ ದಡದಲ್ಲಿ ವಿರಾಜಮಾನವಾಗಿ ಕಾಣಸಿಗುತ್ತದೆ.

ವಿಳಾಸ :-
          ಶ್ರೀ ಮಹಿಷಾಸುರ ಮರ್ದಿನಿ ಅಮ್ಮನವರ ದೇವಸ್ಥಾನ,
          ನೀಲಾವರ, ಉಡುಪಿ - ಜಿಲ್ಲೆ ||
          Sri Mahishamardini Ammanavara Temple,
          Neelavara, Udupi-Dist.