Drop Down Menus CSS Drop Down Menu #
>> Namaskaram..!! Welcome to Namma-Naadu.blogspot.com >> ಓದುಗ ಬಂದುಗಳಿಗೆ ಹೃದಯಪೂರ್ವಕ ನಮಸ್ಕಾರ!! ನಮ್ಮ-ನಾಡು ಅಂತರ್ಜಾಲ ಪುಟ ವೀಕ್ಷಕರು ನಮ್ಮನ್ನು ಇಲ್ಲಿಯವರೆಗೆ ಪ್ರೋತ್ಸಾಹಿಸಿ, ಅಭಿನಂದಿಸಿದ್ದೀರಿ. ಮುಂದೆಯೂ ಕೂಡಾ ಇದೇ ರೀತಿಯಲ್ಲಿ ನಮ್ಮೊಂದಿಗೆ ಜೊತೆಯಾಗಿದ್ದು, ನಮ್ಮ-ನಾಡಿನ ಸೊಗಡನ್ನು ಸಾರೋಣ... ಧನ್ಯವಾದಗಳೊಂದಿಗೆ : ರಾಘವ್ ಕೋಟೇಶ್ವರ. >> ನಮ್ಮ ಮುಂದಿನ ಲೇಕನಗಳು : • ಶ್ರೀ ಚಿಕ್ಕಮ್ಮ ದೇವಸ್ಥಾನ, ಚಿಕನ್ಸಾಲ್,ಕುಂದಾಪುರ • ಶ್ರೀ ಪಂಚದುರ್ಗಾಪರಮೇಶ್ವರೀ ದೇವಸ್ಥಾನ,ಮಠದಬೆಟ್ಟು. ಕೋಟೇಶ್ವರ. >> ಇನ್ನೂ ಹಲವಾರು ದೇವಾಲಯ, ದೈವಾಲಯಗಳ ಮಾಹಿತಿಗಾಗಿ ನಿರೀಕ್ಷಿಸಿ..' >> ಪ್ರಕಟವಾದ ಹೊಸ ಲೇಖನಗಳು : •   ಶ್ರೀ ಅಬ್ಬಗ-ದಾರಗ ದೇವಸ್ಥಾನ, ಮಣಿಕಲ್ಲು   •   ಶ್ರೀ ಕನ್ನಿಕಾ ದುರ್ಗಾ, ಜಪ್ತಿ  • ಶ್ರೀ ಮಾರಿಯಮ್ಮ, ಕಾಪು.....

Showing posts with label Sri Maranakatte Bramhalinga. Show all posts
Showing posts with label Sri Maranakatte Bramhalinga. Show all posts

Sri Maranakatte Bramhalingeshwara

ಶ್ರೀ ಬ್ರಹ್ಮಲಿಂಗೇಶ್ವರ ದೇವಸ್ಥಾನ, ಮಾರಣಕಟ್ಟೆ, ಕುಂದಾಪುರ ತಾಲೂಕು.
Shree Brahmalingeshwara Temple, Maranakatte, Kundapura Tq

Sri Bramhalingeshwara Sametha Yakshini & Chikkamma
ಶ್ರೀ ಬ್ರಹ್ಮಲಿಂಗೇಶ್ವರ ಸಮೇತ ಯಕ್ಷಿಣಿ ಮತ್ತು ಚಿಕ್ಕಮ್ಮ ದೇವರು.
           ತುಳುನಾಡ ಜನರ ಆರಾಧ್ಯ ದೈವ, ಮಕರ ಸಂಕ್ರಮಣ ದಿನದಂದು ವಿಜೃಂಭಣೆಯಿಂದ ಪೂಜೆಗೊಳ್ಳುವ ದೇವ, ಮೂಲೋಕದೊಡತಿ ಮೂಕಾಂಬಿಕೆಯಿಂದ ಮಡಿದು ಭೂಲೋಕದ ದರೆಯಲ್ಲಿ ಕಾರಣೀಕ ದೈವವಾಗಿ ಮಾರಣಕಟ್ಟೆಯ ಧರೆಯಲಿ ನೆಲೆಸಿ ನಿಂದವನೇ ಶ್ರೀ ಬ್ರಹ್ಮಲಿಂಗೇಶ್ವರ ದೇವರು. ಶ್ರೀ ದೇವನು ನೆಲೆಯಾದ ಬಗ್ಗೆ ಪುರಾಣಗಳ ಪ್ರಕಾರ ಪ್ರಚಲಿತವಿರುವ ಕಥೆಯೆಂದರೆ ‘ಮೂಕಾಸುರನೆ’ ಮುಂದೆ ‘ಮೂಕಾಂಬಿಕೆಯಿಂದ’ ಮಡಿದು ‘ಶ್ರೀ ಬ್ರಹ್ಮಲಿಂಗೇಶ್ವರ’ ನಾದನು ಎಂಬುದು.
ಪರಾಶಕ್ತಿಯಾದ ಅಂಬಿಕೆಯು ಮೂಕಾಸುರನು ತನ್ನ ಭಕ್ತರ, ಋಷಿಮುನಿಗಳ ಮೇಲೆ ಆಗುತ್ತಿದ್ದ  ಉಪಟಳವನ್ನು ತಾಳದೇ ಹಾಗೂ ಕೋಲ ಮಹರ್ಷಿಗಳು ಮಾಡಿದ ತಪಕ್ಕೆ ಭೂಮಂಡಲದಲ್ಲಿ ಅವತರಿಸಿ ಕೊಲ್ಲೂರ ಪುಣ್ಯ ಭೂಮಿಯಲ್ಲಿ ಅವತರಿಸಿದಳು. ಮುಂದೆ ಮರಾಶಕ್ತಿಯಾದ ಅಂಬಿಕೆಯಿಂದ ಮಡಿದು ದುಷ್ಟ ಮೂಕಾಸುರನಿಂದ ಅಂಬಿಕೆಯು ಮುಂದೆ ಕೊಲ್ಲೂರ(Kolluru) ಮಣ್ಣಿನಲ್ಲಿ ‘ಮೂಕಾಂಬಿಕೆ’ ಯಾದರೆ, ಅಸುರನಾದ ಮೂಕಾಸುರ(Mookasura) ತಾನು ಸಾಯುವ ಕೊನೆ ಕ್ಷಣದಲ್ಲಿ ಜ್ಞಾನೋದಯವಾಗಿ ಪರಾಶಕ್ತಿ ಸ್ವರೂಪಿಣಿಯಾದ ಮೂಕಾಂಬಿಕೆ(Mookambika) ಯಲ್ಲಿ ತಾಯೆ ನನಗೆ ಮೋಕ್ಷವನ್ನು ಕರುಣಿಸು, ನನ್ನ ಹೆಸರು ನಿನ್ನಲ್ಲಿ ಕೊನೆಯವರೆಗೂ ಅಜರಾಮರವಾಗಿ ಉಳಿಯುವಂತೆ ಮಾಡು ಎಂದು ಅಂಗಲಾಚಿ ಬೇಡಿದನು. ಇದನ್ನು ಕಂಡು ಮೂಕನ ಆರ್ತನಾದಕ್ಕೆ ಮರುಗಿ “ಮೂಕಾಸುರ ನಿನ್ನನ್ನು ವಧಿಸಿದ ನಾನು ಮುಂದೆ ಮೂಕಾಂಬಿಕೆ ಎಂದು ಪ್ರಸಿದ್ಧಿ ಪಡೆದು, ನಿನ್ನ ನಾಮವು ನನ್ನ ಅನ್ವರ್ಥವಾಗುತ್ತದೆ. ಹಾಗೇ ನೀನು ಮುಂದೆ ಈ ನಾಡಿನ ದೈವವಾಗು, ನಿನ್ನನ್ನು ಭಕ್ತರು ‘ಬ್ರಹ್ಮಲಿಂಗೇಶ್ವರ’ ಎಂಬುದಾಗಿ ಕರೆದು ಪಾಡಲಿ ಎಂದು ಆಶಿರ್ವದಿಸಿದಳು. ಹಾಗೇ ಕೆಲವರ ಪ್ರಕಾರ ಮಾರಣಕಟ್ಟೆಯಲ್ಲಿ ಇರುವ ಬೃಹತ್ ಮರದ ಕಟ್ಟೆಯ ಬಳಿ ಮೂಕಾಂಬಿಕೆಯು ಮೂಕನನ್ನು ಮರ್ಧಿಸಿ, ಅದು ಮುಂದೆ ಮೂಕನ ಮಾರಣವಾದ ಕಟ್ಟೆ ಮಾರಣಕಟ್ಟೆ(Maranakatte) ಎಂಬುದಾಗಿ ಪ್ರಸಿದ್ಧಿಯಾಯಿತು ಹೇಳಲಾಗುತ್ತದೆ.
ಹೀಗೆ ಮೂಕಾಸುರನು ಮೂಕಾಂಬಿಕೆಯ ವರದಂತೆ ‘ಬ್ರಹ್ಮಶಿಲೆಯಾಗಿ’ ಚಿತ್ತೂರು ಸಮೀಪದ ಬ್ರಹ್ಮಕುಂಡದ ಬಳಿ ಉದಿಸಿದನು. ಹೀಗೆ ಒಮ್ಮೆ ಶ್ರೀ ಶಂಕರಾಚಾರ್ಯರು ತಮ್ಮ ಯಾತ್ರೆಯನ್ನು ಕೈಗೊಂಡ ವೇಳೆಯಲ್ಲಿ ಈ ಸ್ಥಳಕ್ಕೆ ಬಂದಾಗ ಅಲ್ಲಿ ರಾತ್ರಿ ವೇಳೇಯಲ್ಲಿ ಮಲಗಿದ್ದಾಗ “ಶ್ರೀ ಬ್ರಹ್ಮಲಿಂಗೇಶ್ವರ ಸಮೇತ ಹಲವಾರು ದೈವಗಳು” ಬೋಬ್ಬಿಡುವುದನ್ನು ಕಂಡರು. ಮುಂದೆ ಶ್ರೀ ಶಂಕಕರು ಅಲ್ಲಿ ಶ್ರೀ ಬ್ರಹ್ಮಲಿಂಗೇಶ್ವರನ ಸಮೇತ ಕಾಶಿಯ ಹೈಗುಳಿ ಮತ್ತು ಉಲ್ಲಾಳದ ಚಿಕ್ಕಮ್ಮ ಮತ್ತು ಹಲವಾರು ಪರಿವಾರ ದೈವಗಳೊಂದಿಗೆ ದೇವಾಲಯ ನಿರ್ಮಿಸಿ ಪ್ರತಿಪ್ಠಾಪನೆ ಮಾಡಲು ಅಲ್ಲಿನ ರಾಜನಿಗೆ ಸೂಚಿಸಿದರು. ಮುಂದೆ ರಾಜನಿಂದ ದೇವಾಯಲ ನಿರ್ಮಾಣವಾಗಿ ಶ್ರೀ ಬ್ರಹ್ಮಲಿಂಗೇಶ್ವರನು ಪ್ರಧಾನ ದೈವವಾಗಿ, ಕಾರಣೀಕ ಶಕ್ತಿಯಾಗಿ ನೆಲೆಸಿದನು.

ಯಕ್ಷಗಾನ (Yakshaganam)
ಹೀಗೆ ಶಂಕರರು ಇಲ್ಲಿ ಬಹಳ ಶಕ್ತಿದಾಯಕವಾದ ‘ಶ್ರೀ ಚಕ್ರ’ ವನ್ನು ಸ್ಥಾಪಿಸಿದ್ದಾರೆ. ಇದು ಇಂದು ಬಹಳ ಶಕ್ತಶಾಲಿಯಾದ ದೇವಾಲುವಾಗಿ ಹೊರಹೊಮ್ಮಿದೆ. ಇಲ್ಲಿ ಶ್ರೀ ಬ್ರಹ್ಮಲಿಂಗೇಶ್ವರ ದೇವರಿಗೆ ಪ್ರತಿ ವರ್ಷ ಜನವರಿ – 14 ರ ಮಕರ ಸಂಕ್ರಮಣದಂದು ವಾರ್ಷೀಕ ಪೂಜೆಗಳು ನಡೆಯುತ್ತದೆ. ಈ ವೇಳೆಯಲ್ಲಿ ತುಳುನಾಡಿನ ಸಹಸ್ರಾರು ಭಕ್ತರು ಪೂಜೆಯಲ್ಲಿ ಪಾಲ್ಗೊಳ್ಳುತ್ತಾರೆ. ಈ ದೇವನ ಪೂಜೆಗೆ ವಿಷೇಶವಾಗಿ ಹೆಮ್ಮಾಡಿ(Hemmadi) ಯ ಸೇವಂತಿಯನ್ನು ಅರ್ಪಿಸುತ್ತಾರೆ. ಅಂತೆಯೇ ಇಲ್ಲಿ ಹೂವಿನ ಪೂಜೆ, ಬೆಳಕಿನ ಸೇವೆ ಮುಂತಾದವುಗಳು ವಿಷೇಶ ಪೂಜೆಗಳು ನಡುಯುತ್ತದೆ. ಹೀಗೆ ಇಲ್ಲಿ 2 ತಿರುಗಾಟದ ಯಕ್ಷಗಾನ ಮೇಳಗಳು ಇದ್ದು ಹರಕೆ ಬಯಲಾಟವನ್ನು ನಡೆಸಿ ಭಕ್ತರ ಬೆಡಿಕೆಗಳನ್ನು ಈಡೇರಿಸುತ್ತಾನೆ.  ಹಾಗೇ ರಂಗಫೂಜೆ ಇತ್ಯಾದಿ ಪೂಜಾದಿಗಳು ನಡೆಯುತ್ತದೆ. ಹೀಗೆ ಮೂಕಾಂಬಿಕೆಯಿಂದ ಮಡಿದ ಮೂಕಾಸುರ ಮುಂದೆ ಬ್ರಹ್ಮಲಿಂಗೇಶ್ವರನಾಗಿ ಮಾರಣಕಟ್ಟೆಯ ಧರೆಯಲಿ ನೆಲೆಸಿದ. ನೆಲೆಸಿ ಸಹಸ್ರಾರು ಭಕ್ತರನ್ನು ಪೊರೆಯುತ್ತಾ ನಿಂದಿದ್ದಾನೆ. ನೀವೂ ಕೂಡಾ ಒಮ್ಮೆ ಈ ದೇವನ ದರುಶನ ಪಡೆದು ಕೃತಾರ್ಥರಾಗಿ, ಧನ್ಯರಾಗಿ.


ವಿಳಾಸ :
ಶ್ರೀ ಬ್ರಹ್ಮಲಿಂಗೇಶ್ವರ ದೇವಸ್ಥಾನ,
ಮಾರಣಕಟ್ಟೆ, ಚಿತ್ತೂರು –ಗ್ರಾ||
ಕುಂದಾಪುರ – ತಾ|| ಉಡುಪಿ – ಜಿ ||

ದಾರಿಯ ವಿವರ : ಇಲ್ಲಿಗೆ ಬರಲು ಕುಂದಾಪುರದಿಂದ à ಹೆಮ್ಮಾಡಿ à ಕೊಲ್ಲೂರಿಗೆ ಸಾಗುವ ಮಾರ್ಗ ಮದ್ಯದಲ್ಲಿ ಚಿತ್ತೂರು ಎಂಬ ಗ್ರಾಮದ ಮದ್ಯೆ ಈ ದೇವಾಲಯವಿದೆ. ಇಲ್ಲಿಗೆ ಕುಂದಾಪುರದಿಂದ ಬಸ್ಸಿನ ವ್ಯವಸ್ಥೆಯಿದೆ. ಭಕ್ತಾದಿಗಳು ಕೊಲ್ಲೂರು ಮೂಕಾಂಬಿಕೆಯನ್ನು ಸಂದರ್ಶಿಸಿ ಇಲ್ಲಿಗೆ ಬರಬಹುದು.