Drop Down Menus CSS Drop Down Menu #
>> Namaskaram..!! Welcome to Namma-Naadu.blogspot.com >> ಓದುಗ ಬಂದುಗಳಿಗೆ ಹೃದಯಪೂರ್ವಕ ನಮಸ್ಕಾರ!! ನಮ್ಮ-ನಾಡು ಅಂತರ್ಜಾಲ ಪುಟ ವೀಕ್ಷಕರು ನಮ್ಮನ್ನು ಇಲ್ಲಿಯವರೆಗೆ ಪ್ರೋತ್ಸಾಹಿಸಿ, ಅಭಿನಂದಿಸಿದ್ದೀರಿ. ಮುಂದೆಯೂ ಕೂಡಾ ಇದೇ ರೀತಿಯಲ್ಲಿ ನಮ್ಮೊಂದಿಗೆ ಜೊತೆಯಾಗಿದ್ದು, ನಮ್ಮ-ನಾಡಿನ ಸೊಗಡನ್ನು ಸಾರೋಣ... ಧನ್ಯವಾದಗಳೊಂದಿಗೆ : ರಾಘವ್ ಕೋಟೇಶ್ವರ. >> ನಮ್ಮ ಮುಂದಿನ ಲೇಕನಗಳು : • ಶ್ರೀ ಚಿಕ್ಕಮ್ಮ ದೇವಸ್ಥಾನ, ಚಿಕನ್ಸಾಲ್,ಕುಂದಾಪುರ • ಶ್ರೀ ಪಂಚದುರ್ಗಾಪರಮೇಶ್ವರೀ ದೇವಸ್ಥಾನ,ಮಠದಬೆಟ್ಟು. ಕೋಟೇಶ್ವರ. >> ಇನ್ನೂ ಹಲವಾರು ದೇವಾಲಯ, ದೈವಾಲಯಗಳ ಮಾಹಿತಿಗಾಗಿ ನಿರೀಕ್ಷಿಸಿ..' >> ಪ್ರಕಟವಾದ ಹೊಸ ಲೇಖನಗಳು : •   ಶ್ರೀ ಅಬ್ಬಗ-ದಾರಗ ದೇವಸ್ಥಾನ, ಮಣಿಕಲ್ಲು   •   ಶ್ರೀ ಕನ್ನಿಕಾ ದುರ್ಗಾ, ಜಪ್ತಿ  • ಶ್ರೀ ಮಾರಿಯಮ್ಮ, ಕಾಪು.....

Showing posts with label Sri Horanadu Annapoorna. Show all posts
Showing posts with label Sri Horanadu Annapoorna. Show all posts

Sri Horanaadu Annapoorne

ಶ್ರೀ ಅನ್ನಪೂರ್ಣೇಶ್ವರೀ ದೇವಸ್ಥಾನ, ಹೊರನಾಡು. ಚಿಕ್ಕಮಗಳೂರು ಜಿ|
Shree Annapoorneshwari Temple, Horanaadu, Chikmagalur Dist.


Sri Annapoorneshwari Devi
  
ಹೊರನಾಡ ಪುರನಿಲಯೇ ಶ್ರೀ ಅನ್ನಪೂರ್ಣೆ, ಜಗಕ್ಕೆಲ್ಲ ಅನ್ನವ ನೀಡ್ವ ದೇವಿ ಕೃಪಾ ಪೂರ್ಣೇ ಎಂದು ಪಾಡುತ ಮಾತೆಯ ಕರುಣಾರವಿಂದಗಳನ್ನು ಕಂಡು ಪಾವನರಾದ ಜನರೆ ಧನ್ಯರು.
ದಿಶಕ್ತಿಯಾದ ಪಾರ್ವತಿಯು ಪರಶಿವನೊಂದಿಗೆ ಪಗಡೆಯಾಡಿ ಅದರ ಮೂಲಕ ಶಕ್ತಿಯ ಅರ್ಥಾಥ್ ಅನ್ನದ ಮಹತ್ವವನ್ನು ಜಗಕ್ಕೆ ತಿಳಿಸಿಕೊಡುವ ಉದ್ದೇಶದಿಂದ ಕಾಶಿ ಕ್ಷೇತ್ರದಲ್ಲಿ ಅನ್ನಪೂಣರ್ೇಯಾಗಿ ಉದ್ಬವಿಸಿ ಸಕಲ ಜೀವರಾಶಿಗಳಿಗೆ ಅನ್ನದಾತೆಯೂ, ಮಹಾಮಾತೆಯೂ ಆಗಿ ನಿಂದವಳೆ ಶ್ರೀ ಅನ್ನಪೂರ್ಣೇಶ್ವರೀ ದೇವಿ. ಹೀಗೆ ಮಾತೆಯ ಕಾಶಿಯಲ್ಲಿ ಉದಿಸಿ ಮುಂದೆ ಜಗದಗಲ ತನ್ನ ಶಕ್ತಿಯನ್ನು ಪಸರಿಸಿ ಮೆರೆದ ಮಹಾಮಾತೆಯಾಗಿದ್ದಾಳೆ. ಜಗದ್ದಾತ್ರಿಯೂ ಆದ ಆದಿಶಕ್ತಿ ಹೊರನಾಡಿನಲ್ಲಿ ನೆಲೆಸಿದುದುರ ಬಗೆ ಒಂದು ಐತಿಹ್ಯ(ಪುರಾಣ) ಇಂತಿದೆ.

Gopuram
ಸ್ಥಳ ಪುರಾಣ : ಹೊರನಾಡು ಚಿಕ್ಕಮಗಳೂರು ಜಿಲ್ಲೆಯ 'ಭದ್ರಾ’ ನದಿಯ ತೀರದಲ್ಲಿದೆ. ಚಿಕ್ಕಮಗಳೂರು ಜಿಲ್ಲೆಯು ಅತೀ ರಮಣ-ಮನೋಹರವಾದ ಸಸ್ಯರಾಶಿಯನ್ನು ತನ್ನಲ್ಲಿ ಇರಿಸಿಕೊಂಡು ಹಲವಾರು ಜೀವರಾಶಿಗಳಿಗೆ ಆಶ್ರಯದಾತೆಯಾದ ಪ್ರಕೃತಿ ಮಾತೆಯ ಮಡಿಲಲ್ಲಿ ಹಾಗೂ ತಂಪಾದ ವಾತಾವರಣ ಹೊಂದಿರುವ ಸುಂದರ ಜಿಲ್ಲೆಯಾಗಿದೆ. ಈ ಸುಂದರ ಪರಿಸರದ ನಡುವೆ ಅಂಬಿಕೆಯಾದ ಅನ್ನಪೂಣರ್ಣೆಯು ನೆಲೆಸಿ ಜಗಪಾವನೆಯಾಗಿದ್ದಾಳೆ. ಇಲ್ಲಿನ ಶ್ರೀ ಆದಿಶಕ್ತ್ಯಾತ್ಮ ಅನ್ನಪೂರ್ಣೇಶ್ವರೀ ಅಮ್ಮನವರ(Sri Annapoorneshwari Ammanavaru) ಮೂರ್ತಿಯು ಅಗಸ್ತ್ಯ ಮಹರ್ಷಿಗಳಿಂದ ಸಾವಿರಾರು ವರ್ಷಗಳ ಹಿಂದೆ ಪ್ರತಿಷ್ಠಾಪಿಸಲ್ಪಟ್ಟಿದೆ. ನಂತರದಲ್ಲಿ ಅಂದರೆ ಸುಮಾರು 400 ವರ್ಷಗಳ ಹಿಂದಿನಿಂದ ವಂಶಪಾರಂಪರ್ಯ ಆಡಳಿತ ಧರ್ಮದರ್ಶಿತ್ವ ಪದ್ದತಿ ಇಲ್ಲಿ ಆರಂಭವಾಗಿದೆ. ಹೀಗೆ ಇಲ್ಲಿ ಅಂದಿನಿಂದ ಇಂದಿಗೂ ಉಚಿತ ಅನ್ನದಾನ ಸೇವೆ ಇಂದಿನ ತನಕವೂ ನಡೆದುಕೊಂಡು ಹೀಗೆ 5ನೇ ಧರ್ಮದರ್ಶಿಗಳಿಂದ ಶ್ರೀ ಕ್ಷೇತ್ರವು ಸಂಪೂರ್ಣ ನವಿಕರಣವಾದುದಲ್ಲದೆ ಊರನ್ನು ಕೂಡಾ ಆರ್ತಿಕವಾಗಿ ಉನ್ನತಿಯತ್ತ ಕೊಂಡೊಯ್ಯುವಲ್ಲಿ ಶ್ರಮಿಸಿದರು. ಅದೇ ರೀತಿಯಲ್ಲಿ ಈ ದೇವಾಲಯವನ್ನು ಸಂಪೂರ್ಣ ಶಿಲಾಮಯವನ್ನಾಗಿ ಮಾಡಲಾಯಿತು ಮತ್ತು ಮುಂದೆ ಇಲ್ಲಿ ಬ್ರಹ್ಮಕುಂಭಾಷೇಕ ಮತ್ತು ದೇವಿಯ ನೂತನ ಬಿಂಬವನ್ನು ಪ್ರತಿಷ್ಠಾಪಿಸಲಾಯ್ತು.
          ಅಂತೆಯೇ ಶ್ರೀ ಕ್ಷೇತ್ರವು ಇಂದು ಒಂದು ಮಹಾನ್ ಶಕ್ತಿಸ್ಥಳವಾಗಿ ಬದಲಾವಣೆ ಹೊಂದಿದೆಯಲ್ಲದೆ ಇಂದು ಸಾವಿರಾರು ಭಕ್ತಾದಿಗಳು ಈ ಕ್ಷೇತ್ರವನ್ನು ನಿತ್ಯವೂ ಸಂದರ್ಶಿಸುವಂತ ಕ್ಷೇತ್ರವಾಗಿದೆ. ಶ್ರೀ ಮಾತೆಯನ್ನು ನೋಡಲು ಎರಡು ಕಣ್ಣುಗಳು ಸಾಲದು ಎಂದು ಎಲ್ಲರ ಭಕ್ತರ ಮನದ ಮಾತು. ಏಕೆಂದರೆ ಮಾತೆಯ ಮುಖಾರವಿಂದದಲ್ಲಿ ಅಂತಹ ಒಂದು ಸೌಮ್ಯತೆಯು, ಮಂದಹಾಸವು, ಮಮತೆಯು ಹೊರಹೊಮ್ಮುತ್ತದೆ. ಮಾತೆಯು ಮಂದಸ್ಮಿತಳಾಗಿ ಶಂಖ-ಚಕ್ರ, ಅಭಯ-ವರದಗಳನ್ನು ಹೊಂದಿದವಳಾಗಿ ನಿಂತ ಭಂಗಿಯಲ್ಲಿ ದೇವಿಯ ವಿಗ್ರಹವನ್ನು ನಿಮರ್ಾಣ ಮಾಡಲಾಗಿದೆ.
          ಶ್ರೀ ಕ್ಷೇತ್ರದಲ್ಲಿ ನಿತ್ಯಾನ್ನ ಸೇವೆಯೊಂದಿಗೆ ಹಲವಾರು ಪೂಜಾ-ವಿನಿಯೋಗಾಧಿಗಳು ನಡೆಯುತ್ತದೆ. ಭಕ್ತಾದಿಗಳು ಇಲ್ಲಿ ಉಳಿಯಲು ಹಲವಾರು ವಸತಿಗೃಹಗಳು ಕೂಡಾ ಇದೆ. ಹೀಗೆ ಮಾತೆಯನ್ನು ಕಂಡು ನೀವು ಒಮ್ಮೆ ಧನ್ಯರಾಗಿ. ಮಾತೆಯ ಚರಣ ಕಮಲಗಳಲ್ಲಿ ಒಂದು ಬಾರಿ ಶಿರಭಾಗಿ ನಮಿಸಿ. ಅಮ್ಮನ ಸಿರಿಮುಡಿ ಗಂಧಪ್ರಸಾದವನ್ನು ಸೇವಿಸಿ ಅಮ್ಮನವರ ಕೃಪಾಶಿವರ್ಾದಕ್ಕೆ ಪಾತ್ರರಾಗಿ.

ದಾರಿಯ ವಿವರ : ಮಾತೆಯ ದೇವಾಯಲಯನ್ನು ಸಂದರ್ಶಿಸುವ ಭಕ್ತಾದಿಗಳು ಕಳಸವನ್ನು ತಲುಪಿ ಅಲ್ಲಿಂದ ಮಾತೆಯ ದೇವಾಲಯವನ್ನು ತಲುಪಬಹುದು. ಸ್ವಂತ ವಾಹನದಲ್ಲಿಯಾದರೆ ಹತ್ತಿರದಲ್ಲಿ ಇನ್ನಿತರ ದೇವಾಲಯಗಳು ಇವೆ. ಕಳಸದಲ್ಲಿ ಕಳಸೇಶ್ವರ ದೇವಾಲಯವು ಐತಿಹಾಸಿಕ ಮಹತ್ವವನ್ನು ಹೊಂದಿದ್ದು ನಯನ-ಮನೋಹರವಾಗಿದೆ.

ವಿಳಾಸ :-
          ಶ್ರೀ ಆದಿಶಕ್ತ್ಯಾತ್ಮಕ ಅನ್ನಪೂರ್ಣೇಶ್ವರೀ ಅಮ್ಮನವರ ದೇವಸ್ಥಾನ,
          ಹೊರನಾಡು, ಚಿಕ್ಕಮಗಳೂರು - ಜಿಲ್ಲೆ.

ದೇವಾಲಯದ ಬಗ್ಗೆ ಹೆಚ್ಚಿನ ಮಾಹಿತಿಗಾಗಿ ದೇವಾಲಯದ ವೆಬ್-ಪುಟ http://srikshetrahoranadu.com  ಗೆ log on ಆಗಿ.