Drop Down Menus CSS Drop Down Menu #
>> Namaskaram..!! Welcome to Namma-Naadu.blogspot.com >> ಓದುಗ ಬಂದುಗಳಿಗೆ ಹೃದಯಪೂರ್ವಕ ನಮಸ್ಕಾರ!! ನಮ್ಮ-ನಾಡು ಅಂತರ್ಜಾಲ ಪುಟ ವೀಕ್ಷಕರು ನಮ್ಮನ್ನು ಇಲ್ಲಿಯವರೆಗೆ ಪ್ರೋತ್ಸಾಹಿಸಿ, ಅಭಿನಂದಿಸಿದ್ದೀರಿ. ಮುಂದೆಯೂ ಕೂಡಾ ಇದೇ ರೀತಿಯಲ್ಲಿ ನಮ್ಮೊಂದಿಗೆ ಜೊತೆಯಾಗಿದ್ದು, ನಮ್ಮ-ನಾಡಿನ ಸೊಗಡನ್ನು ಸಾರೋಣ... ಧನ್ಯವಾದಗಳೊಂದಿಗೆ : ರಾಘವ್ ಕೋಟೇಶ್ವರ. >> ನಮ್ಮ ಮುಂದಿನ ಲೇಕನಗಳು : • ಶ್ರೀ ಚಿಕ್ಕಮ್ಮ ದೇವಸ್ಥಾನ, ಚಿಕನ್ಸಾಲ್,ಕುಂದಾಪುರ • ಶ್ರೀ ಪಂಚದುರ್ಗಾಪರಮೇಶ್ವರೀ ದೇವಸ್ಥಾನ,ಮಠದಬೆಟ್ಟು. ಕೋಟೇಶ್ವರ. >> ಇನ್ನೂ ಹಲವಾರು ದೇವಾಲಯ, ದೈವಾಲಯಗಳ ಮಾಹಿತಿಗಾಗಿ ನಿರೀಕ್ಷಿಸಿ..' >> ಪ್ರಕಟವಾದ ಹೊಸ ಲೇಖನಗಳು : •   ಶ್ರೀ ಅಬ್ಬಗ-ದಾರಗ ದೇವಸ್ಥಾನ, ಮಣಿಕಲ್ಲು   •   ಶ್ರೀ ಕನ್ನಿಕಾ ದುರ್ಗಾ, ಜಪ್ತಿ  • ಶ್ರೀ ಮಾರಿಯಮ್ಮ, ಕಾಪು.....

Showing posts with label Sri Japthi Kannikadurga. Show all posts
Showing posts with label Sri Japthi Kannikadurga. Show all posts

Sri Kannikadurgaparameshwari Temple, Japthi, Kundapura_TQ

Shree Chittheri Kannika Durgaparameshwari Temple, Japthi.
ಶ್ರೀ ಚಿತ್ತೇರಿ ಕನ್ನಿಕಾ ದುರ್ಗಾಪರಮೇಶ್ವರೀ ದೇವಸ್ಥಾನ, ಜಡ್ಡು-ಜಪ್ತಿ, ಕುಂದಾಪುರ ತಾ||

Sri Kannikadurgaparameshwari, Japthi

ಕುಂದಾಪುರ ತಾಲೂಕಿನ ಹುಣ್ಸೆಮಕ್ಕಿ ಸಮೀಪದ ಜಪ್ತಿ(Japthi) ಒಂದು ಪುಟ್ಟ ಹಳ್ಳಿ. ಸುಂದರ ಪ್ರಕೃತಿಯ ಮಡಿಲಲ್ಲಿ ಹರಿಯುವ ವಾರಾಹಿಯ ಝುಳು-ಝುಳು ನಿನಾದದೊಂದಿಗೆ ಪಕ್ಷಿಗಳ ಇಂಚರದ ಕಲರವ ಕೇಳುವುದೇ ಒಂದು ಆನಂದ. ಈ ರಮಣೀಯ ಪ್ರಕೃತಿಯ ನಡುವೆ ನೆಲೆಸಿ ನಿಂದಿರುವ ಶಕ್ತಿದೇವತೆಯೇ ಜಪ್ತಿಯ ಜಡ್ಡು ಪ್ರದೇಶದಲ್ಲಿರುವ ಶ್ರೀ ಚಿತ್ತೇರಿ ಕನ್ನಿಕಾ ದುರ್ಗಾಪರಮೇಶ್ವರೀ ಅಮ್ಮನವರು.
ಜಪ್ತಿ ಪ್ರದೇಶದ ವ್ಯಾಪ್ತಿಯಲ್ಲಿ ಹಲವಾರು ದೇವಾಲಯಗಳು ರುದ್ರ-ರಮಣಿಯ ನಿಸರ್ಗದ ಮದ್ಯೆಯೆ ಇದ್ದು, ಇಲ್ಲಿ ಬರುವ ಭಕ್ತರ ಮನಸ್ಸುನ್ನು ಉಲ್ಲಾಸಗೊಳಿಸುವ ಜೊತೆಗೆ ಪರಮಾತ್ಮನಲ್ಲಿ ಏಕಾಗ್ರತೆಯನ್ನು ಹೊಂದಲು ಸಹಕರಿಸುತ್ತದೆ. ಜಪ್ತಿಯ ಶ್ರೀ ಕನ್ನಿಕಾ ದುರ್ಗಾಪರಮೇಶ್ವರೀ(Kannika Durgaparameshwari) ದೇವಸ್ಥಾನವು ಸರಿಸುಮಾರು 400 ವರ್ಷಗಳ ಇತಿಹಾಸವನ್ನು ಹೊಂದಿದೆ. ಈ ದೇವಸ್ಥಾನ ಮೂಲತಃ ಮೊಳಹಳ್ಳಿ(Molahalli) ಬಂಟರ ಒಂಭತ್ತು ಕುಟುಂಬದವರಿಗೆ ಸೇರಿದ್ದಾಗಿದ್ದು, ಹಿಂದೆ ಈ ದೇವಾಲಯವು ಅಜೀರ್ಣವಾಗಿದ್ದು ಕಾಲದಲ್ಲಿ ಲೀನವಾಗಿತ್ತು. ತದನಂತರ 2008 ಫೆಬ್ರವರಿ 28 ರಲ್ಲಿ ಇದಕ್ಕೆ ಸಂಬಂದಿಸಿದ ಕುಟುಂಬದವರಿಂದ ದೇವಾಲಯ ಜೀರ್ಣೋದ್ಧಾರ ಸಮೇತ ಪುನರ್ ನಿರ್ಮಾಣಗೊಂಡು ಇಂದು ಸುಂದರವಾಗಿ ಕಂಗೊಳಿಸುತ್ತಿದೆ.
Parivara : Nagayakshi, Nagadevatha, Darukeshwari


ಅದೇ ತೆರನಾಗಿ ಶ್ರೀ ದೇವಿಯು ಇಲ್ಲಿ ನಿತ್ಯ ಕನ್ನಿಕೆ ಅಂದರೆ ದುರ್ಗೆ, ಪರಮೇಶ್ವರೀ ಎಂದರೆ 'ತಾಯಿ' ಯ ರೂಪದಲ್ಲಿ ಚಿರಯವ್ವನೆಯಾಗಿ ಸದಾ ಕಂಗೊಳಿಸುತ್ತಾಳೆ ಎಂಬುದು ಇಲ್ಲಿನ ಅರ್ಚಕರಾದ ಶ್ರೀಯುತ ನರಸಿಂಹ ಹೆಬ್ಬಾರ್ ಅವರ ಅಭಿಪ್ರಾಯವಾಗಿದೆ.
ಇಲ್ಲಿನ ವಾರ್ಷಿಕ ಮಹೋತ್ಸವವು ಪ್ರತೀ ವರ್ಷ ಫೆಬ್ರವರಿ 28ರಂದು ಸಂಪನ್ನಗೊಳ್ಳುತ್ತದೆ. ಅದೇ ದಿನ ಈ ದೇವಸ್ಥಾನಕ್ಕೆ ಸಂಬಂದಿಸಿದ ಮೊಳಹಳ್ಳಿ ಶಿವರಾಯ ಗರಡಿಯಲ್ಲಿ(Molahalli Shivaraya Garadi) ರಾತ್ರಿ ಗೆಂಡಮಹೋತ್ಸವ ಕೂಡಾ ನಡೆಯುತ್ತದೆ. ಶ್ರೀ ಕನ್ನಿಕಾ ದುರ್ಗಾಪರಮೇಶ್ವರೀಯ ದೇವಸ್ಥಾನದಲ್ಲಿ ವಾರ್ಷಿಕ ಮಹೋತ್ಸವದ ದಿನ ದೇವಿಗೆ ವಿಶೇಷ ಅಲಂಕಾರ ಸಮೇತ ಚಂಡಿಕಾಹೋಮ, ಕಲಾಹೋಮ, ಸಾರ್ವಜನಿಕ ಅನ್ನಸಂತರ್ಪಣೆ ನಡೆಯುತ್ತದೆ. ಅಲ್ಲದೇ ನಾಗ ಸಾನ್ನಿಧ್ಯದಲ್ಲಿ ದರ್ಶನ ಸೇವೆ, ತುಲಾಭಾರಗಳು ನಡೆಯಲ್ಪಡುತ್ತದೆ.
ಶ್ರೀ ಅಮ್ಮನನವರಿಗೆ ಇಲ್ಲಿ ವಿಶೇಷವಾಗಿ ಹರಿವಾಣ ನೈವೇಧ್ಯ ಸಮರ್ಪಣೆಯಾಗುತ್ತದೆ. ಭಕ್ತಿಯಿಂದ ಅಮ್ಮಾ ಎಂದು ದೇವಿಗೆ ಹರಿವಾಣ ನೈವೇಧ್ಯ ಸಲ್ಲಿಸಿದರೆ ದೇವಿಯು ಬಹುಬೇಗನೆ ಒಲಿದು ನಮ್ಮ ಕಾರ್ಯವನ್ನು ಕೈಗೂಡಿಸಿಕೊಡುತ್ತಾಳೆ ಎಂಬುದು ಇಲ್ಲಿ ಒಳಿತನ್ನು ಕಂಡು ಭಕ್ತರ ಅಭಿಪ್ರಾಯವಾಗಿದೆ. ಅಲ್ಲದೇ ಇಲ್ಲಿ ಇತ್ತೀಚಿನ ದಿನಗಳಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ವಿವಾಹಕ್ಕೆ ಸಂಬಂದಿಸಿದಂತೆ 'ಪ್ರಸಾದ ನೋಡುವ' ಪೂಜೆಯು ನಡೆಯುತ್ತದೆ. ದೇವಿಯ ಮುಡಿಯಲ್ಲಿ ಹೂ ಇರಿಸಿ ಮಂಗಳಾರತಿಯಾಗುವ ವೇಳೆಯಲ್ಲಿ ಪ್ರಸಾದವಾದರೆ(ಹೂ ಕೆಳಗೆ ಬಿದ್ದರೆ) ಶುಭ ಎಂದು, ಕಾರ್ಯವು ಜಯವೆಂದು ಸೂಚನೆ ಸಿಗುತ್ತದೆ. ಅದೇ ತೆರನಾಗಿ ಇಲ್ಲಿ ಹಲವಾರು ಜನರು ಕಂಕಣ ಭಾಗ್ಯವನ್ನು ಕಂಡು, ದೇವಿಯನ್ನು ನಿತ್ಯ ನೆನೆಯುವ ಭಕ್ತಾದಿಗಳು ಅನೇಕರಿದ್ದಾರೆ. ಇವಲ್ಲದೇ ದೇವಿಗೆ ಅಷ್ಠದ್ರವ್ಯ ಸಮೇತ ಬಾಗೀನ ಕೋಡುವ ಸಂಪ್ರದಾಯಬದ್ದ ಪೂಜೆ ಕೂಡಾ ಇಲ್ಲಿದ್ದು, ಇದರಿಂದ ಸಕಲ ಮಂಗಳ ಕಾರ್ಯಗಳು ಜಯವಾಗುತ್ತದೆ ಎಂಬುದು ಅರ್ಚಕರ ಅಭಿಪ್ರಾಯವಾಗಿದೆ.
Temple View, Shree Kannika Durgaparameshwari Temple, Japthi

ಈ ದೇವಾಯಲಕ್ಕೆ ಸ್ಥಿರಾದಾಯ ಇಲ್ಲವಾದರೂ, ಇಲ್ಲಿ ನಂಬಿದ ಕುಟುಂಬದವರು ಪ್ರತೀ ತಿಂಗಳೂ 'ಮಾಸಪೂಜೆ' ಯನ್ನು ನಡೆಸುತ್ತಾರೆ. ಪೂಜೆ ನಡೆಸುವವರ ಹೆಸರಿನಲ್ಲಿ ಒಂದು ಮಾಸಗಳವರೆಗೆ ಪೂಜೆ ನಡೆಯಲ್ಪಡುತ್ತದೆ. ಶ್ರೀ ಅಮ್ಮನವರಿಗೆ ಮತ್ತು ಪರಿವಾರ ಶಕ್ತಿಗಳಿಗೆ ಇದರಲ್ಲಿ ಪೂಜೆಯು ವಿನಿಯೋಗಿಸಲ್ಪಡುತ್ತದೆ. ಅದೇ ತೆರನಾಗಿ ತಿಂಗಳಲ್ಲಿ ಒಂದು ದಿನ ವಿಶೇಷ ಪೂಜೆಯನ್ನು, ಚಂಡಿಪಾರಾಯಣ ಸಮೇತ ಸೇವೆಮಾಡಿ ಸೇವಾಕರ್ತರಿಗೆ ಪ್ರಸಾದವನ್ನು ನೀಡಲಾಗುತ್ತದೆ.
ಶ್ರೀ ಕನ್ನಿಕಾ ದುರ್ಗಾಪರಮೇಶ್ವರೀ ಅಮ್ಮನವರ ಸಾನ್ನಿಧ್ಯದಲ್ಲಿ ಅಮ್ಮನವರ ಪರಿವಾರ ಶಕ್ತಿಗಳಾಗಿ ನಾಗದೇವರು, ನಾಗಯಕ್ಷಿ, ಬ್ರಹ್ಮ, ಧಾರುಕೇಶ್ವರೀ, ವೀರಭದ್ರ, ಕ್ಷೇತ್ರಪಾಲ, ರಕ್ತೇಶ್ವರೀ, ಚೌಡೇಶ್ವರೀ ಹಾಗೂ ಹಾಯ್ಗುಳಿ ಇದ್ದಾರೆ. ಇದರಲ್ಲಿ ಮೊದಲ 4 ಶಕ್ತಿಗಳಿಗೆ ಪಂಚೋಪಚಾರ ಪೂಜೆಯನ್ನು ನಂತರದ ಶಕ್ತಿಗಳಿಗೆ ಮಾಸಕ್ಕೊಮ್ಮೆ ಪೂಜೆಯನ್ನು ಸಲ್ಲಿಸಲಾಗುತ್ತದೆ. ಇಲ್ಲಿನ ದಾರುಕೇಶ್ವರೀಯ(Darukeshwari) ಬಿಂಬವು ಸುಂದರ ಶಿಲ್ಪಕಲೆಯನ್ನು ಹೊಂದಿದ್ದು ದೇವಿಯು ಕುದುರೆಯನ್ನು ಏರಿ ಕುಳಿತು ಇರುವುದನ್ನು ಕಾಣಬಹುದಾಗಿದೆ. ಅಮ್ಮನವರ ಬಿಂಬವು ಕೂಡಾ ಸರಿಸುಮಾರು 2 ಅಡಿಗಳಷ್ಟು ಇದ್ದು ಮಂದಸ್ಮಿತಳಾಗಿ ಕುಳಿತಭಂಗಿಯಲ್ಲಿ ದೇವಿಯು ಆರೂಢಳಾಗಿದ್ದಾಳೆ.
“ಶ್ರೀ ಕನ್ನಿಕಾ ದುರ್ಗಾಪರಮೇಶ್ವರೀಯನ್ನು ನೀವೂ ಕೂಡಾ ಒಮ್ಮೆ ಕಂಡು, ಶ್ರೀ ದೇವಿ ಮತ್ತು ಅವಳ ಪರಿವಾರ ದೇವರುಗಳ ಕೃಪೆಗೆ ಪಾತ್ರಾರಾಗಿ, ಸಕಲ ಸಂಪದಗಳನ್ನು ಹೊಂದಿ”
 
ವಿಳಾಸ :-
ಶ್ರೀ ಚಿತ್ತೇರಿ ಕನ್ನಿಕಾ ದುರ್ಗಾಪರಮೇಶ್ವರೀ ದೇವಸ್ಥಾನ,
ಜಡ್ಡು-ಜಪ್ತಿ, ಕುಂದಾಪುರ ತಾಲೂಕು ||

ದಾರಿಯ ವಿವರ : ಕುಂದಾಪುರದಿಂದ ಬಸ್ರೂರು ಮೂರುಕೈ ಮಾರ್ಗದಿಂದ ಸಾಗಿ ಬಿ.ಎಚ್ ಅಂದರೆ ಹುಣ್ಸೆಮಕ್ಕಿ ಮಾರ್ಗದಲ್ಲಿ ಸಾಗಿ ಬಂದರೆ ಜಪ್ತಿಯ ಸಮೀಪದ ಎಡಭಾಗದಲ್ಲಿ ನಿಮಗೆ ಶ್ರೀ ದೇವಿ ಮಂದಿರವನ್ನು ತಲುಪುವ ಮಾರ್ಗವು ಕಾಣಿಸುತ್ತದೆ. ಇಲ್ಲವೇ ಹುಣ್ಸೆಮಕ್ಕಿಯಿಂದ -ಜಪ್ತಿ ಸಾಗಿ ನಿಮ್ಮ ಬಲಕ್ಕೆ ಶ್ರೀ ದೇವಿಯ ಆಲಯಕ್ಕೆ ಹೋಗುವ ಮಾರ್ಗಸೂಚಿ ಅನುಸರಿಸಿ ಸುಮಾರು 2ಕಿ.ಮಿ ಸಾಗಿದರೆ ಅಮ್ಮನವರ ಭವ್ಯ ಮಂದಿರವನ್ನು ತಲುಪಬಹುದು.

ಹೆಚ್ಚಿನ ಮಾಹಿತಿಗಾಗಿ :-
• ಶ್ರೀ ನರಸಿಂಹ ಹೆಬ್ಬಾರ್(ಅರ್ಚಕರು) : 9481613197
• ಶ್ರೀ ಕಿಶೋರ್ ಶೆಟ್ಟಿ(ಆಡಳಿತ) : 9538729285