Drop Down Menus CSS Drop Down Menu #
>> Namaskaram..!! Welcome to Namma-Naadu.blogspot.com >> ಓದುಗ ಬಂದುಗಳಿಗೆ ಹೃದಯಪೂರ್ವಕ ನಮಸ್ಕಾರ!! ನಮ್ಮ-ನಾಡು ಅಂತರ್ಜಾಲ ಪುಟ ವೀಕ್ಷಕರು ನಮ್ಮನ್ನು ಇಲ್ಲಿಯವರೆಗೆ ಪ್ರೋತ್ಸಾಹಿಸಿ, ಅಭಿನಂದಿಸಿದ್ದೀರಿ. ಮುಂದೆಯೂ ಕೂಡಾ ಇದೇ ರೀತಿಯಲ್ಲಿ ನಮ್ಮೊಂದಿಗೆ ಜೊತೆಯಾಗಿದ್ದು, ನಮ್ಮ-ನಾಡಿನ ಸೊಗಡನ್ನು ಸಾರೋಣ... ಧನ್ಯವಾದಗಳೊಂದಿಗೆ : ರಾಘವ್ ಕೋಟೇಶ್ವರ. >> ನಮ್ಮ ಮುಂದಿನ ಲೇಕನಗಳು : • ಶ್ರೀ ಚಿಕ್ಕಮ್ಮ ದೇವಸ್ಥಾನ, ಚಿಕನ್ಸಾಲ್,ಕುಂದಾಪುರ • ಶ್ರೀ ಪಂಚದುರ್ಗಾಪರಮೇಶ್ವರೀ ದೇವಸ್ಥಾನ,ಮಠದಬೆಟ್ಟು. ಕೋಟೇಶ್ವರ. >> ಇನ್ನೂ ಹಲವಾರು ದೇವಾಲಯ, ದೈವಾಲಯಗಳ ಮಾಹಿತಿಗಾಗಿ ನಿರೀಕ್ಷಿಸಿ..' >> ಪ್ರಕಟವಾದ ಹೊಸ ಲೇಖನಗಳು : •   ಶ್ರೀ ಅಬ್ಬಗ-ದಾರಗ ದೇವಸ್ಥಾನ, ಮಣಿಕಲ್ಲು   •   ಶ್ರೀ ಕನ್ನಿಕಾ ದುರ್ಗಾ, ಜಪ್ತಿ  • ಶ್ರೀ ಮಾರಿಯಮ್ಮ, ಕಾಪು.....

Showing posts with label Sri Kateelu Durga. Show all posts
Showing posts with label Sri Kateelu Durga. Show all posts

Sri Kateelu Durgaparameshwari

ಶ್ರೀ ದುರ್ಗಾಪರಮೇಶ್ವರೀ ಅಮ್ಮನವರ ದೇವಸ್ಥಾನ, ಕಟೀಲು, ದ.ಕ.
Shree Durgaparameshwari Temple, Kateel, D.K


ಶ್ರೀ ಕಟೀಲು ದುರ್ಗಾಪರಮೇಶ್ವರೀ ಅಮ್ಮನವರ ದೇವಸ್ಥಾನ,
ಶ್ರೀ ಕ್ಷೇತ್ರ ಕಟೀಲು, ದಕ್ಷಿಣ ಕನ್ನಡ.
Sri Kateelu Durgaparameshwari Ammanavru
               ರಾಶಕ್ತಿಯಾದ ದುರ್ಗಾದೇವಿಯು ಧರೆಯಲಿ ಒಂದಲ್ಲ ಒಂದು ಕಾರಣದಿಂದ ಅವತರಿಸಿ ಭುವಿಯ ಜನರ ಕಷ್ಟ-ನಷ್ಟಗಳನ್ನು ಪರಿಹರಿಸಿ ಸಕಲರ ಆರಾಧ್ಯ ಮಾತೆಯಾಗಿ ನೆಲೆಸಿ, ಪೂಜೆಗೊಳ್ಳುವವಳಾಗಿದ್ದಾಳೆ. ಅಮ್ಮನ ಶಕ್ತಿಯನ್ನು ಕಂಡು - ಕೇಳದೆ ಇರುವ ಮನುಜರು ಈ ಭರತ ಖಂಡದಲ್ಲಿರಲು ಸಾಧ್ಯವಿಲ್ಲ. ಏಕೆಂದರೆ ದುರುಳ ರಕ್ಕಸಾದಿಗಳನ್ನು ಕೊಂದು ಭುವಿಯಲ್ಲಿ ಶಾಂತತೆಯು ನೆಲೆಸುವಂತೆ ಮಾಡಿ ಭಕ್ತ ಜನರ ಪಾಲಿನ ಮಹಾಮಾತೆಯಾಗಿದ್ದಾಳೆ.
          ಪುರಾಣದಲ್ಲಿ ಹಲವಾರು ರಕ್ಕಸರ ಮರ್ದನಕ್ಕಾಗಿ ಅವತರಿಸಿ ವಿಧ-ವಿಧ ನಾಮದಿಂದ ಕರೆಸಿಕೊಂಡು, ವಿಧ ವಿಧ ಸ್ಥಳದಲ್ಲಿ ಒಂದೊಂದು ಶಕ್ತಿಯ ರೂಪದಲ್ಲಿ ನೆಲೆಸಿ ಆರಾಧಿಸಲ್ಪಡುವ ಅಂಬಿಕೆಯ ಮಹಿಮೆ ಅಪಾರ. ಅದೇ ರೀತಿಯಲ್ಲಿ ಆದಿಶಕ್ತಿಯು ಸರ್ವವ ಪಾಲಿಗೂ ಮಾತೆಯಾಗಿದ್ದಾಳೆ. ಶ್ರೀ ದೇವಿಯು ಭರತ ಖಂಡದುದ್ದಕ್ಕೂ ಹಲವಾರು ಪುಣ್ಯಕ್ಷೇತ್ರಗಳಲ್ಲಿ ನೆಲೆಸಿ ನಿಂದು ಭಕ್ತರ ಅಭಿಷ್ಟಪ್ರದಾಯಿನಿಯಾಗಿದ್ದಾಳೆ.
          ತುಳುನಾಡ ಸಿರಿದೇವಿ ಕಟೀಲ ಪುರನಿಲಯೆಯಾದ ದುರ್ಗಾಂಬೆಯು ನಂದಿನಿ ನದಿಯ ತಟಿಯಲ್ಲಿ ಹೇಗೆ ನೆಲೆಸಿದಳು ಎಂಬುದಕ್ಕೆ ಪುರಾಣದಲ್ಲಿ ಹಲವು ಉಲ್ಲೇಖಗಳಿವೆ. ಸಿರಿದೇವಿಯಾದ ದುರ್ಗಾಂಬೆಯು ದುರುಳ ಅರುಣಾಸುರನನ್ನು ಮದರ್ಿಸಲು ಕಟೀಲಿನ ನಂದಿನಿ ನದಿಯಲಿ ಉದಿಸಿ ಪರಮ ಶಕ್ತಿಯಾದಳು.

ಸ್ಥಳ ಪುರಾಣ : ದೇವಿಯು ಶುಂಭ ನಿಶುಂಭ, ಅರುಣಾಸುರ ಈ ಮಂತ್ರಿಗಳನ್ನು ಸ್ಥಾನ ಪಲ್ಲಟದಿಂದ ಯುದ್ದ ಭೂಮಿಯಿಂದ ರಕ್ಷಿಸಿದಳು. ನಂತರ ಅರುಣಾಸುರನು ರಾಕ್ಷಸರ ದೊರೆಯಾದನು ಇವನು ಋಷಿಮುನಿಗಳ ಯಜ್ಞಯಾಗಾದಿಗಳಿಗೆ ತಡೆಯುಂಟು ಮಾಡುತ್ತಿದ್ದನು. ಇದರಿಂದ ದೇವತೆಗಳು ಮಳೆಯನ್ನು ಸುರಿಸಲಿಲ್ಲ ಇದರಿಂದ ಬರಗಾಲದಿಂದ ಜನರು ನೀರಿಲ್ಲದೆ, ಬೆಳೆಯಿಲ್ಲದೆ ತತ್ತರಿಸಿದರು. ಆಗ ಮಹರ್ಷಿ ಜಾಬಿಲಿಯು ಯಜ್ಞವನ್ನು ಮಾಡಲು ನಿರ್ಧರಿಸಿದನು. ಆಗ ಅವನು ದೇವೇಂದ್ರನನ್ನು ಕಾಮಧೇನುವನ್ನು ಕಳುಹಿಸಲು ಬೇಡಿಕೊಂಡು ಕಾಮಧೇನುವು ವರುಣನ ಲೋಕದಲ್ಲಿತ್ತು. ದೇವೇಂದ್ರನು ಋಷಿಗೆ ನಂದಿನಿಯನ್ನು ಕರೆದುಕೊಂಡು ಹೋಗಲು ಅನುಮತಿ ನೀಡಿದನು. ನಂದಿನಿಯು ಕಾಮಧೇನುವಿನ ಮಗಳು. ಆದರೆ ನಂದಿನಿ ಜಾಬಲಿ ಜೊತೆ ಬರುವುದಿಲ್ಲ ಎಂದು ಹಠ ಹಿಡಿದಳು. ಆಗ ಜಾಬಲಿಗೆ ಕೋಪಬಂದು ಅವಳಿಗೆ ಭೂಮಿಯಲ್ಲಿ ನದಿಯಾಗಿ ಹರಿಯುವಂತೆ ಶಾಪವಿತ್ತನು. ಆಗ ನಂದಿನಿಗೆ ತನ್ನ ತಪ್ಪಿನ ಅರಿವಾಗಿ ಋಷಿಯಲ್ಲಿ ತನ್ನನ್ನು ಕ್ಷಮಿಸುವಂತೆ ಬೇಡಿಕೊಂಡಳು. ಆಗ ಮುನಿಗೆ ಕರುಣೆ ಬಂದು ನಂದಿನಿಗೆ ಶಾಪ ವಿಮೋಚನೆಯಾಗಲು ಆದಿಶಕ್ತಿಯನ್ನು ಪೂಜಿಸುವಂತೆ ಹೇಳಿದಳು. ಆಗ ನಂದಿನಿಯು ಆದಿಶಕ್ತಿಯನ್ನು ಪ್ರಾರ್ಥಿಸಿದಳು. ಅವಳ ಭಕ್ತಿಗೆ ಮೆಚ್ಚಿ ಪ್ರತ್ಯಕ್ಷಳಾಗಿ ನಂದಿನಿಗೆ ಶಾಪ ಹಿಂತೆಗೆದುಕೊಳ್ಳಲು ಆಗುವುದಿಲ್ಲ. ಕಾರಣ ಋಷಿ ಮುನಿಗಳು ಕೊಟ್ಟ ಶಾಪಕ್ಕೆ ವಿಮೋಚನೆವಿದೆಯೇ ಹೊರತು ಹಿಂತೆಗೆದುಕೊಳ್ಳಲು ಆಗುವುದಿಲ್ಲ ಎಂದಳು. ಆದರೆ ನಾನು ನಿನ್ನ ಮಗಳಾಗಿ ಜನಿಸಿ ಈ ಶಾಪದಿಂದ ಮುಕ್ತಗೊಳಿಸುತ್ತೇನೆ ಎಂದು ಹೇಳಿದಳು. ಈ ಮಾತನ್ನು ಕೇಳಿ ನಂದಿನಿಗೆ ಸಮಾಧಾನವಾಯಿತು. ಆಗ ನಂದಿನಿಯು ಭೂಮಿಯಲ್ಲಿ ಕನಕಗಿರಿಯ ಹತ್ತಿರ ಮಾಘ ಪೌರ್ಣಮೆಯ ದಿವಸ ನದಿಯಾಗಿ ಹರಿದಳು.
          ರುಣಾಸುರನು ಬ್ರಹ್ಮನಿಂದ ವರವನ್ನು ಪಡೆದನು. ಆದ್ದರಿಂದ ಸಾವಿನ ಭಯವಿರಲಿಲ್ಲ. ದೇವತೆಗಳಿಂದ, ಮನುಷ್ಯರಿಂದ, ಹೆಂಗಸರಿಂದ ಎರಡು ಕಾಲು, ನಾಲ್ಕು ಕಾಲು ಇರುವ ಪ್ರಾಣಿಗಳಿಂದಲೂ, ಯಾರಿಂದಲೂ ಸಾವು ಬಾರದಂತೆ ವರ ಬೇಡಿದ ಸರಸ್ವತಿಯು ಕೂಡ ಇವನಿಗೆ ಗಾಯಿತ್ರಿ ಮಂತ್ರವನ್ನು ಹೇಳಿಕೊಟ್ಟಳು. ಇವೆಲ್ಲದರಿಂದ ಇವನಿಗೆ ಅತಿಶಕ್ತಿ ಬಂದಿತು. ಇದರಿಂದ ಅವನು ದೇವತೆಗಳಿಗೆ ಮತ್ತು ದೇವಲೋಕವನ್ನು ವಶಪಡಿಸಿಕೊಂಡನು. ದೇವತೆಗಳೆಲ್ಲ ಆದಿಶಕ್ತಿಯ ಹತ್ತಿರ ಹೋಗಿ ತಮ್ಮನ್ನು ಅರುಣಾಸುರನಿಂದ ಬಿಡುಗಡೆ ಮಾಡಿಸುವಂತೆ ಬೇಡಿಕೊಂಡರು. ಅರುಣಾಸುರನು ಗಾಯಿತ್ರಿ ಮಂತ್ರವನ್ನು ಪಠಿಸುವುದನ್ನು ನಿಲ್ಲಿಸುವರೆಗೂ ತಾನು ಏನು ಮಾಡಲು ಸಾಧ್ಯವಿಲ್ಲ ಎಂದು ಹೇಳಿದಳು. ಅವಳು ಒಂದು ಉಪಾಯವನ್ನು ದೇವತೆಗಳಿಗೆ ಹೇಳಿದಳು. ಏನೆಂದರೆ ದೇವತೆಗಳ ಗುರುವಾದ ಬೃಹಸ್ಪತಿಯನ್ನು ಕಳುಹಿಸಿ ಗಾಯಿತ್ರಿ ಮಂತ್ರವನ್ನು ಪಠಿಸುವುದನ್ನು ನಿಲ್ಲಿಸುವಂತೆ ಮಾಡಬೇಕು ಆಗ ಮಾತ್ರ ನಾನು ಅವನನ್ನು ಕೊಲ್ಲಬಹುದು. ಬೃಹಸ್ಪತಿಯು ಅರುಣಾಸುರನ ಬಳಿ ಹೋಗಿ ಅವನನ್ನು ಅತಿಯಾಗಿ ಹೊಗಳಿ ಅವನಿಗೆ ಮನಸ್ಸನ್ನು ಕೆಡಿಸಿ ಆ ಮಂತ್ರವನ್ನು ಪಠಿಸುವುದನ್ನು ನಿಲ್ಲಿಸುವಂತೆ ಪ್ರೇರಪಿಸಿದನು.                             
Sri Raktheshwari Ammanavaru
          ಗ ಅವನ ಹೊಗಳಿಕೆಯಿಂದ ತಾನೆ ದೇವರಿಗಿಂತ ಮೇಲು ಎಂದುಕೊಂಡನು. ಇದರಿಂದ ಅವನು ಋಷಿಮುನಿಗಳನ್ನು ಯಜ್ಞಗಳನ್ನು ವಿನಾಶಮಾಡುತ್ತಾ ಬಂದನು. ಆಗ ದೇವತೆಗಳೆಲ್ಲರು ಆದಿಶಕ್ತಿಯನ್ನು ಬೇಡಿಕೊಂಡರು ಆಗ ಆದಿಶಕ್ತಿಯು ಅತಿಸುಂದರಿಯಾದ ಯುವತಿಯ ರೂಪದಲ್ಲಿ (ಮೋಹಿನಿ) ಪ್ರತ್ಯಕ್ಷವಾದಳು. ಅರುಣಾಸುರನು ಇವಳನ್ನು ನೋಡಿ ಅವಳನ್ನು ಮದುವೆಯಾಗಬೇಕೆಂದು ಆಸೆ ಉಂಟಾಯಿತು. ಮೋಹಿನಿ ಹತ್ತಿರ ಹೋಗಿ ಮದುವೆಯಾಗುವಂತೆ ಒತ್ತಾಯಿಸಿದನು. ಆದರೆ ಅವಳು ಅವನ ಮಾತಿಗೆ ಕಿವಿಗೊಡಲಿಲ್ಲ ಮತ್ತು ಅವನನ್ನು ಚೇಡಿಸಿದಳು. ಇದರಿಂದ ಕೋಪಗೊಂಡ ಅರುಣಾಸುರನು ಮೋಹಿನಿಯನ್ನು ಹಿಡಿಯಲು ಹೋದನು. ಆಗ ದೇವತೆಯು ಒಂದು ಕಲ್ಲನ್ನು ಸೇರಿಕೊಂಡಳು. ಅರುಣಾಸುರನು ಆ ಬಂಡೆಯನ್ನು ತನ್ನ ಕತ್ತಿಯಿಂದ ಸೀಳಿದನು. ಆಗ ಅಲ್ಲಿ ದೇವತೆಯು ಭ್ರಮರ ರೂಪದಲ್ಲಿ ಕಾಣಿಸಿದಳು. ಅವನನ್ನು ಕೊಂದಳು. ಆಗ ದೇವತೆಗಳು ಮತ್ತು ಋಷಿಮುನಿಗಳು ಜಾಬಲಿಗೆ ದೇವಿಗೆ ಅಭಿಷೇಕ ಮಾಡುವಂತೆ ಹೇಳಿದರು. ಆಗ ದೇವಲೋಕದಿಂದ ಕಲ್ಪವೃಕ್ಷವನ್ನು (ತೆಂಗಿನ ಮರ) ತರಿಸಿ ಎಳನೀರಿನಿಂದ ಅಭಿಷೇಕ ಮಾಡಿ ದೇವಿಯನ್ನು ಸೌಮ್ಯರೂಪಕ್ಕೆ ತಂದರು. ಆದ್ದರಿಂದ ದೇವಿಯು ಲಿಂಗರೂಪದಲ್ಲಿ (ಕಲ್ಲಿನ ರೂಪದಲ್ಲಿ) ನಂದಿನಿ ನದಿಯ ಮಧ್ಯದಲ್ಲಿ ನೆಲೆನಿಂತಳು. ಆದ್ದರಿಂದ ಇವಳನ್ನು ಶ್ರೀ ದುರ್ಗಾಪರಮೇಶ್ವರಿ ಎಂದು ಕರೆದರು. ಕಟಿ ಎಂದರೆ ನಡು ಮತ್ತು ಭೂಮಿ ಎಂದರ್ಥ. ಆದ್ದರಿಂದ ಕಟೀಲನ್ನು ಭೂಮಿಯ ಭಾಗ ಎಂದು ಕರೆಯುತ್ತಾರೆ. ಇದರಿಂದ ನಂದಿನಿಯು ಸಹ ತನ್ನ ಶಾಪವನ್ನು ಕಳೆದುಕೊಂಡಳು.                                        
ಹೀಗೆ ದೇವಾಯಲಯದಲ್ಲಿ ಪರಿವಾರಶಕ್ತಿಗಳಾಗಿ ಮಹಾಗಣಪತಿ, ರಕ್ತೇಶ್ವರಿ, ಶಾಸ್ತಾರ, ನಾಗದೇವರು, ಕ್ಷೇತ್ರಪಾಲ, ಬ್ರಹ್ಮಸ್ಥಾನ, ಚಾಮುಂಡಿಯ ಗುಡಿಗಳಿವೆ. ಹೀಗೆ ಆದಿಶಕ್ತಿಯಾದ ಅಂಬಿಕೆಯು ನೆಲೆಸಿನಿಂತ ಈ ಭವ್ಯ ಭೂಮಿ ಇಂದು ಕಟೀಲು ಎಂಬುದಾಗಿ ಜಗತ್ವಿಖ್ಯಾತವಾಗಿದೆ.

“ಶ್ರೀ ಜಗದಂಬಿಕೆ ದುರ್ಗಾಪರಮೇಶ್ವರೀಯು ಸರ್ವರಿಗೂ ಸನ್ಮಂಗಳವನ್ನುಂಟು ಮಾಡಲಿ”

ವಿಳಾಸ : -
          ಶ್ರೀ ದುರ್ಗಾಪರಮೇಶ್ವರೀ ಅಮ್ಮನವರ ದೇವಸ್ಥಾನ,
          ಕಟೀಲು, ದಕ್ಷಿಣ ಕನ್ನಡ - ಜಿಲ್ಲೆ || ಕರ್ನಾಟಕ.

ದಾರಿಯ ವಿವರ : ಉಡುಪಿ - ಮಂಗಳೂರಿನಿಂದ ಶ್ರೀ ದೇವಿಯ ದೇವಾಲಯವನ್ನು ತಲುಪಲು ಮೂಲ್ಕಿ ಅಥವಾ ಮಂಗಳೂರಿನಿಂದ ಬಸ್ಸಿನ ವ್ಯವಸ್ಥೆಗಳು ಇವೆ.