Drop Down Menus CSS Drop Down Menu #
>> Namaskaram..!! Welcome to Namma-Naadu.blogspot.com >> ಓದುಗ ಬಂದುಗಳಿಗೆ ಹೃದಯಪೂರ್ವಕ ನಮಸ್ಕಾರ!! ನಮ್ಮ-ನಾಡು ಅಂತರ್ಜಾಲ ಪುಟ ವೀಕ್ಷಕರು ನಮ್ಮನ್ನು ಇಲ್ಲಿಯವರೆಗೆ ಪ್ರೋತ್ಸಾಹಿಸಿ, ಅಭಿನಂದಿಸಿದ್ದೀರಿ. ಮುಂದೆಯೂ ಕೂಡಾ ಇದೇ ರೀತಿಯಲ್ಲಿ ನಮ್ಮೊಂದಿಗೆ ಜೊತೆಯಾಗಿದ್ದು, ನಮ್ಮ-ನಾಡಿನ ಸೊಗಡನ್ನು ಸಾರೋಣ... ಧನ್ಯವಾದಗಳೊಂದಿಗೆ : ರಾಘವ್ ಕೋಟೇಶ್ವರ. >> ನಮ್ಮ ಮುಂದಿನ ಲೇಕನಗಳು : • ಶ್ರೀ ಚಿಕ್ಕಮ್ಮ ದೇವಸ್ಥಾನ, ಚಿಕನ್ಸಾಲ್,ಕುಂದಾಪುರ • ಶ್ರೀ ಪಂಚದುರ್ಗಾಪರಮೇಶ್ವರೀ ದೇವಸ್ಥಾನ,ಮಠದಬೆಟ್ಟು. ಕೋಟೇಶ್ವರ. >> ಇನ್ನೂ ಹಲವಾರು ದೇವಾಲಯ, ದೈವಾಲಯಗಳ ಮಾಹಿತಿಗಾಗಿ ನಿರೀಕ್ಷಿಸಿ..' >> ಪ್ರಕಟವಾದ ಹೊಸ ಲೇಖನಗಳು : •   ಶ್ರೀ ಅಬ್ಬಗ-ದಾರಗ ದೇವಸ್ಥಾನ, ಮಣಿಕಲ್ಲು   •   ಶ್ರೀ ಕನ್ನಿಕಾ ದುರ್ಗಾ, ಜಪ್ತಿ  • ಶ್ರೀ ಮಾರಿಯಮ್ಮ, ಕಾಪು.....

Showing posts with label Sri Annapoorneshwari. Show all posts
Showing posts with label Sri Annapoorneshwari. Show all posts

Sri Annapoorna Charithre

ಶ್ರೀ ಅನ್ನಪೂರ್ಣದೇವಿ ಚರಿತ್ರೆ(ಕಾಶೀಪುರದಿಂದ)
Shree Annapoorna Devi Charithre(Kashipuram)


|| ಅನ್ನಪೂರ್ಣೇ ಸದಾ ಪೂರ್ಣೆ, ಶಂಕರ ಪ್ರಾಣ ವಲ್ಲಭೇ ||
Sri Annapoorna Devi
ಶ್ರೀ ಅನ್ನಪೂರ್ಣದೇವಿ

ಶ್ರೀ ಮಾತೆ ಅನ್ನಪೂರ್ಣೇಯ ಚರಣಾರವಿಂದಗಳಿಗೆ ನಮಿಸುತ್ತಾ, ಶ್ರೀ ದೇವಿ ಮಹಾಮಂಗಳೆ ಅಂಬಿಕೆಯನು ಸೇವಿಸುತ್ತಾ, ಸರ್ವ ದೇವಾನು ದೇವಾನು ದೇವತೆಗಳು ಮಹಾತಾಯಿಯಿಂದ ಅನ್ನವನ್ನು ಪಡೆದು ಸಂತುಷ್ಟರಾಗಿರಲು ಜಗವೇ ಮಾತೆಯ ಕರಕಮಲಗಳಿಗೆ ಎರಗುತ್ತಿರೆ ಮಹಾಮಾತೆಯು ಮಂದಸ್ಮಿತೆಯಾಗಿ ಜಗವ ಹರಸುವಳು. ಅಂತೆಯೇ 'ಅನ್ನ' ಎಂದರೆ 'ಆಹಾರ'. 'ಪೂರ್ಣ' ಎಂದರೆ 'ಪರಿಪೂರ್ಣ' ಎಂಬರ್ಥವನ್ನು ನೀಡುತ್ತದೆ.
ಪರಾಶಕ್ತಿಯಾದ ಮಹಾದೇವಿಯು ಅನ್ನಪೂರ್ಣೆಯಾಗಿ ಜಗಕ್ಕೆ ಅನ್ನದಾಯಿನಿಯೂ, ನಿತ್ಯಾನಂದಕರಿಯೂ, ಶಕ್ತಿದಾಯಿನಿಯೂ ಆಗಿ ಸಕಲ ಚರಾ-ಚರಾಗಳಲ್ಲೂ ಚೈತನ್ಯರೂಪಿಣಿಯಾಗಿದ್ದಾಳೆ. ಮಾತೆಯ ಈ ಪರಿಯ ಪ್ರೇಮವನ್ನು ನಾವೆಲ್ಲರೂ ಎಷ್ಟು ಕೊಂಡಾಡಿದರೂ ಸಾಲದು. ಶಿವನ ಮಡದಿಯಾದ ಪರಾಶಕ್ತಿ ಅಂಬಿಕೆಯು ಅನ್ನಪೂರ್ಣೇಯಾದ ಬಗ್ಗೆ ಒಂದು ಪೌರಾಣಿಕ ಉಲ್ಲೇಖ ಇಂತಿದೆ.
ಪರಮೇಶ್ವರ ಮತ್ತು ಪಾರ್ವತಿ ಪಗಡೆಯಾಡುವುದು
ಹಿಂದೇ ದೇವಲೋಕದಲ್ಲಿ ಎಲ್ಲಾರೂ ಸಂತೋಷದಿಂದಿರಲೂ, ಕೈಲಾಸದಲ್ಲಿ ಆದಿಶಕ್ತಿ ಪಾರ್ವತಿಯು ಮಹಾದೇವನೊಂದಿಗೆ ವೈಭದಿಂದ ಮೆರೆಯುತ್ತಿದ್ದ ಸಮಯ. ಒಂದು ದಿನ ಪಾರ್ವತಿ-ಪರಮೇಶ್ವನು ವನವಿಹಾರ ಮಾಡಲು ಮಾನಸ ಸರೋವರದತ್ತ ತೆರಳಿದರು. ಹೀಗೆ ಗೌರಿಶಂಕರ ಮಾತನಾಡುತ್ತಾ ಪಗಡೆಯಾಡುವ ಭಯಕೆಯನ್ನು ಶಂಕರನು ಗೌರಿಯಲ್ಲಿ ಹೇಳುತ್ತಾನೆ. ಇದಕ್ಕೆ ಒಪ್ಪಿದ ಜಗದಂಬೆಯು ಆಗಬಹುದು ಸ್ವಾಮಿ ಎಂದು ಒಪ್ಪುತ್ತಾಳೆ.
ಹೀಗೆ ಆದಿಮಾಯೆ ಗೌರಿಯು ಮತ್ತು ಮಹಾದೇವನು ಪಗಡೆಯಾಟದಲ್ಲಿ ತೊಡಗುತ್ತಾರೆ. ಹೀಗೆ ಪಗಡೆಯಲ್ಲಿ ತೊಡಗುವ ಮುನ್ನ ಗೌರಿಯು ತನ್ನ ಆಭರಣವನ್ನು, ಪರಮೇಶ್ವರನು ಅನ್ನ ತ್ರಿಶೂಲವನ್ನು ಆಟದಲ್ಲಿ ಪಣಕ್ಕಾಗಿ ಇಡುತ್ತಾರೆ. ಅಂತೇಯೇ ಮಾತೆಗೂ, ಪಿತನಿಗೂ ಆಟವೂ ಆರಂಭವಾಗಿ ಅದರಲ್ಲಿ ಜಗಜ್ಜನನಿ ಆದ ತ್ರಿಯಂಬಿಕೆ ಗೌರಿಯು ಜಯವನ್ನು ಪಡೆಯುತ್ತಾಳೆ. ನಿಯಮದಂತೆ ಪರಶಿವನ ತ್ರಿಶೂಲವನ್ನು ತಾನು ಪಡೆಯುತ್ತಾಳೆ. ಆದರೆ ಶಿವನು ಪುನಃ ಆಟ ಆಡಲು ಪಾರ್ವತಿಯನ್ನು ಆಹ್ವಾನಿಸಿ ತನ್ನ ಆಭರಣವಾದ ನಾಗೇಂದ್ರನನ್ನು ಪಣಕ್ಕಿಡುತ್ತಾನೆ. ಎರಡನೇ ಭಾರಿಯೂ ಪರಮೇಶ್ವರ ಆಟದಲ್ಲಿ ಸೋಲನ್ನು ಅನುಭವಿಸುತ್ತಾನೆ. ಹೀಗೆ ಕೊನೆಯಲ್ಲಿ ದೇವಿಯೊಂದಿಗೆ ಆಟವಾಡುತ್ತಾ ತನ್ನೆಲ್ಲ ವಸ್ತುಗಳನ್ನು ಕಳೆದುಕೊಳ್ಳುವುದರೊಂದಿಗೆ ತನ್ನ ಬಿಕ್ಷಾ ಪಾತ್ರೆಯನ್ನೂ ಕೂಡಾ ಕಳೆದುಕೊಂಡು ಸತಿಯೊಂದಿಗೆ ಮುಜುಗರಕ್ಕೆ ಈಡಾಗುತ್ತಾನೆ.
ಹೀಗೆ ಆಟದಿಂದ ತೇಜೋವಧೆಗೊಂಡ ಶಿವನು ದೇವದಾರು ಅರಣ್ಯವನ್ನು ಸೇರಿದನು. ಹೀಗೆ ಅರಣ್ಯದಲ್ಲಿದ್ದ ಪರಮೇಶ್ವರನನ್ನು ಸಂತೈಸಲು ಮಹಾವಿಷ್ಣುವು ಅಲ್ಲಿಗೆ ತೆರಳಿ ಪರಶಿವನಲ್ಲಿ ಪುನಃ ಪಾರ್ವತಿಯೊಡನೆ ಆಡಿ ನಿನ್ನೆಲ್ಲ ಆಭರಾಣಾದಿ ವಸ್ತುಗಳನ್ನು ಮರಳಿ ಪಡೆಯುವ ಉಪಾಯವನ್ನು ಹೇಳುತ್ತಾನೆ.
ಹೀಗೆ ಮರಳಿ ಪಾರ್ವತಿಯೊಂದಿಗೆ ಪುನಃ ಆಡುವ ಇಚ್ಛೆಯನ್ನು ಹೇಳಿದಾಗ ಪಾರ್ವತಿಯು ಪರಶಿವನಲ್ಲಿ ಅನುಮಾನಗೊಂಡು ಆಡಲು ನಿರ್ಧರಿಸುತ್ತಾಳೆ. ಆದರೆ ಇದರ ಹಿಂದೆ ಕೆಲವೊಂದು ಮರ್ಮವಿದೆಯೆಂದು ತಿಳಿದಿರುತ್ತಾಳೆ. ಅದಕ್ಕೆ ಗೌರಿಯು ತನ್ನ ಅಣ್ಣನಾದ ಮಹಾವಿಷ್ಣುವನ್ನು ನ್ಯಾಯತಿರ್ಮಾನ ಮಾಡಲು ಬರಬೇಕೆಂದು ಹೇಳುತ್ತಾಳೆ. ಅಂತೆಯೇ ಶಿವ-ಪಾರ್ವತಿಯರ ಆಟದ ಮದ್ಯೆ ಭಗವಾನ್ ಮಹಾವಿಷ್ಣುವು ಬರುತ್ತಾನೆ. ಹೀಗೆ ಆಡುತ್ತಾ ಇವೆಲ್ಲ ಭ್ರಮೆ ಅಷ್ಟೆ ಎಂದು ಶಿವನಿಂದ ವಾಕ್ಗಳು ಹೊರಳಿದವು. ಇದರಿಂದ ಮಾತೆಯು ಅದನ್ನು ತಾನು ಒಪ್ಪಿಕೊಳ್ಳದೆ ಮುಂದೆ ಮಹಾವಿಷ್ಣುವಿನ ಎದುರಲ್ಲೇ ಮೌಖಿಕ ಧ್ವಂದ್ವಯುದ್ದ ಆರಂಭವಾಯಿತು.
ಅಂತೆಯೇ ವಾಗ್ವುದ್ದ ಆರಂಭವಾಗಿ ಜೀವನವೇ ಒಂದು ಭ್ರಮೆ ಎಂದು ಶಿವನು ಹೇಳಿದನು. ಹೀಗೆ ವಾಗ್ವುದ್ದವು ಮುಂದುವರೆದು ತಾತ್ವಿಕತೆಗೆ ತೆರಳಿ ಜೀವನ ದಾಳಗಳು ಆಟದ ಹಾಗೆ. ಶಿವನು ಯನ್ನೆಲ್ಲಾ ಆಸ್ತಿ ತಾತ್ಕಾಲಿಕ ಎಂದು, ಎಲ್ಲವೂ ಭ್ರಮೆ ಎಂದು ಹೇಳಿದನು. ಅಲ್ಲದೇ ತಿನ್ನುವ ಆಹಾರ ಕೂಡಾ ಯನ್ನ ಮಾಯೆ ಎಂದು ಹೇಳಿದನು. ಆದರೆ ಮಹಾದೇವಿಯು ಆಹಾರ ಭ್ರಮೆ ಎಂಬುದನ್ನು ಒಪ್ಪಿಕೊಳ್ಳುವುದಿಲ್ಲ. ದೇವಿಯು ಹೇಳುತ್ತಾಳೆ ಅನ್ನವು(ಆಹಾರ) ಭ್ರಮೆ ಎಂದಾದರೆ ನಾನು ಕೂಡಾ ಭ್ರಮೆ ಎಂದಾಂತಾಯಿತು ಎಂದಳು. ಅಂಬಿಕೆಯು ಹೇಗೆ ತಾನೇ ಜಗತ್ತು ಅನ್ನಹಾರವಿಲ್ಲದೆ ಚೈತನ್ಯವನ್ನು ಪಡೆದೀತು ಎಂದು ಪರೀಕ್ಷಿಸಲು ಹೊರಟಳು.
ಬರಡಾದ ಭೂಮಿ ಮತ್ತು ಬಸವಳಿದ ಜೀವಜಂತುಗಳು
ಅಂತೆಯೇ ಮಾತೆಯ ಕಣ್ಮರೆ(ದುಃಖ)ಯು ಸಂಪೂರ್ಣ ಪೃಕೃತಿಯು ತಟಸ್ಥವಾಗುವಂತೆ ಮಾಡಿತು. ಜಗತ್ತೆ ಮಂದವಾಯಿತು. ಎಲ್ಲೇಲ್ಲೂ ಹಸಿವೂ, ಹಾಹಾಕಾರ ಆರಂಭವಾಯಿತು. ವನಸಿರಿಗಳು ಬರಡಿ ಹೋದವು. ಸಕಲ ಜೀವಚರಗಳು ಬರಡಿ ಬೆಂಡಾದವು. ಆನರೆಲ್ಲರೂ ಶಕ್ತಿ ಹೀನರಾದರೂ, ಸಕಲ ಜೀವ ಜಂತುಗಳು ನಿಸ್ತೇಜವಾಗಿ ತಮ್ಮ ಚೈತನ್ಯವನ್ನು ಕಳೆದುಕೊಂಡವು. ಜಗತ್ತೇ ವಿನಾಶವನ್ನು ತಲುಪುವ ಹಂತವನ್ನು ತಲುಪಿತು. ಸಾಕ್ಷಾತ್ ಪರಶಿವನೆ ನಿಸ್ತೆಜನಾದನು.
ಹೀಗೆ ಜಗವೇ ಬರಡಾಗಲು ಶಿವನಿಗೆ ಜ್ಞಾನೋದಯವಾಯಿತು. ತನ್ನ ಅಹಂಕಾರದ ಅರಿವಾಗಿ, ಶಕ್ತಿ ಇಲ್ಲದೆ ಯಾವುದು ಕೂಡಾ ಚಲಿಸಲು ಸಾಧ್ಯವಿಲ್ಲ ಎಂಬುದನ್ನು ಮನಗಂಡನು. ಹೀಗೆ ದೇವಲೋಕವೂ ಕೂಡಾ ಬರಡಾಯಿತು. ಆಹಾವಿಲ್ಲದೆ ದೇವಾನು ದೇವನುದೇವತೆಗಳು, ರಾಕ್ಷಸರು ಕೂಡಾ ನಿಸ್ತೇಜರಾದರು.
ಅನ್ನಪೂರ್ಣೆಯಿಂದ ಶಿವನಿಗೆ ಅನ್ನ ನೀಡುವುದು
ಎಲ್ಲರೂ ಒಂದಾಗಿ ಆದಿಶಕ್ತಿಯನ್ನು ಬೇಡಿಕೊಂಡರು. ಶಿವನು ಕೂಡಾ ತನ್ನ ಅಹಂಕಾರಕ್ಕೆ ಮರುಗಿ ಸತಿಯಾದ ಪಾರ್ವತಿಯಲ್ಲಿ ತನ್ನ ತಪ್ಪನ್ನು ಒಪ್ಪಿಕೊಂಡನು. ಶಕ್ತಿಯಿಲ್ಲದೆ(ಆದಿಶಕ್ತಿ - ಅನ್ನ) ಯಾವುದು ಅಸಾಧ್ಯವೆಂದು ತಿಳಿದನು. ಹೀಗೆ ದೇವಾನುದೇವತೆಗಳು, ಮಾನವರು ಅಲ್ಲದೇ ಸಕಲ ಜೀವಜಂತುಗಳು ಬೇಡಲು ಮಾತೆಯ ಹೃದಯ ಕರಗಿ ಶಿವೆಯಾದ ಗೌರಿಯು ಅನ್ನಪೂರ್ಣೇಯಾಗಿ ಕಾಶಿ ಕ್ಷೇತ್ರದಲ್ಲಿ ಪ್ರತ್ಯಕ್ಷಳಾದಳು. ಅಲ್ಲಿ ತಾನು ಅನ್ನ ಪಾತ್ರೆಯನ್ನು ಹಿಡಿದು ತನ್ನ ಸರ್ವ ಜೀವಜಂತುಗಳಿಗು ಕೂಡಾ ಅನ್ನವನ್ನು ನೀಡುವ ಮೂಲಕ ಮಹಾಮಾತೆಯಾದಳು. ದೇವತೆಗಳು ಮಾತೆಯನ್ನು 'ಅನ್ನಪೂರ್ಣೆಶ್ವರೀ’ ಎಂದು ಕೂಗಿ ಪುಷ್ಪವೃಷ್ಠಿಯನ್ನು ಗೆರೆದರು.
ಮಾತೆಯು ಪ್ರಸನ್ನಳಾಗಲು ಸಕಲ ಜಗವೇ ಪುನಃ ಚೈತನ್ಯದಿಂದ ನಳನಳಿಸಿತು. ಎಲ್ಲೇಲ್ಲೂ ದವಸ-ಧಾನ್ಯಗಳು ಬೆಳೆದಿ ನಿಂತವು. ಸಕಲರ ಮಂದವಾದ ಪೃಕೃತಿ ತುಂಬಿ ನಿಂತಿತು. ಎಲ್ಲರಲ್ಲೂ ಶಕ್ತಿಯೂ ಹೊರಹೊಮ್ಮಿ ಮಾತೆಯನ್ನು ಹಾಡಿ ಕೊಂಡಾಡಿದರು.
ಹೀಗೆ ಮಾತೆಯು ಗೌರಿಯಾಗಿ ಕಾಶಿಯಲ್ಲಿ ವಿಶ್ವನಾಥನೊಂದಿಗೆ ಅನ್ನಪೂರ್ಣೆಯಾಗಿ ಅವತರಿಸಿದಳು. ಇಂತು ಶ್ರೀ ಅನ್ನಪೂರ್ಣೇಶ್ವರೀಯ ಕಥಾಮೃತವನ್ನು ಏಕಚಿತ್ತದಿಂದ ಓದಿದ ನಿಮಗೆಲ್ಲರಿಗೂ ಮಾತೆಯೂ ಸಕಲ ಭಾಗ್ಯದಿಗಳನ್ನು ಕರುಣಿಸಲಿ.

ಶ್ರೀ ಗೌರಿ  ಅನ್ನಪೂರ್ಣೇಯು ಸರ್ವರಿಗೂ ಸನ್ಮಂಗಳವನ್ನುಂಟು ಮಾಡಲಿ