Drop Down Menus CSS Drop Down Menu #
>> Namaskaram..!! Welcome to Namma-Naadu.blogspot.com >> ಓದುಗ ಬಂದುಗಳಿಗೆ ಹೃದಯಪೂರ್ವಕ ನಮಸ್ಕಾರ!! ನಮ್ಮ-ನಾಡು ಅಂತರ್ಜಾಲ ಪುಟ ವೀಕ್ಷಕರು ನಮ್ಮನ್ನು ಇಲ್ಲಿಯವರೆಗೆ ಪ್ರೋತ್ಸಾಹಿಸಿ, ಅಭಿನಂದಿಸಿದ್ದೀರಿ. ಮುಂದೆಯೂ ಕೂಡಾ ಇದೇ ರೀತಿಯಲ್ಲಿ ನಮ್ಮೊಂದಿಗೆ ಜೊತೆಯಾಗಿದ್ದು, ನಮ್ಮ-ನಾಡಿನ ಸೊಗಡನ್ನು ಸಾರೋಣ... ಧನ್ಯವಾದಗಳೊಂದಿಗೆ : ರಾಘವ್ ಕೋಟೇಶ್ವರ. >> ನಮ್ಮ ಮುಂದಿನ ಲೇಕನಗಳು : • ಶ್ರೀ ಚಿಕ್ಕಮ್ಮ ದೇವಸ್ಥಾನ, ಚಿಕನ್ಸಾಲ್,ಕುಂದಾಪುರ • ಶ್ರೀ ಪಂಚದುರ್ಗಾಪರಮೇಶ್ವರೀ ದೇವಸ್ಥಾನ,ಮಠದಬೆಟ್ಟು. ಕೋಟೇಶ್ವರ. >> ಇನ್ನೂ ಹಲವಾರು ದೇವಾಲಯ, ದೈವಾಲಯಗಳ ಮಾಹಿತಿಗಾಗಿ ನಿರೀಕ್ಷಿಸಿ..' >> ಪ್ರಕಟವಾದ ಹೊಸ ಲೇಖನಗಳು : •   ಶ್ರೀ ಅಬ್ಬಗ-ದಾರಗ ದೇವಸ್ಥಾನ, ಮಣಿಕಲ್ಲು   •   ಶ್ರೀ ಕನ್ನಿಕಾ ದುರ್ಗಾ, ಜಪ್ತಿ  • ಶ್ರೀ ಮಾರಿಯಮ್ಮ, ಕಾಪು.....

Showing posts with label Sri Kundapura Bagalamba. Show all posts
Showing posts with label Sri Kundapura Bagalamba. Show all posts

ಶ್ರೀ ಬಗಳಾಂಬಾ ತಾಯಿ ದೇವಸ್ಥಾನ, ಕುಂದಾಪುರ (Sri Bagalamba Temple, Kundapura)

ಶ್ರೀ ಬಗಳಾಂಬಾ ತಾಯಿ ದೇವಸ್ಥಾನ, ಚಿಕ್ಕಮ್ಮನಸಾಲ್ ರಸ್ತೆ, ಕುಂದಾಪುರ |
Shree Bagalamba Temple, Chikansal Road, Kundapura|

Shree Bagalamba Devi, Kundapura
ಕುಂದಾಪುರ ನಗರ ಮದ್ಯಭಾಗದ ಚಿಕ್ಕಮ್ಮನಸಾಲಿನ ಶ್ರೀ ಬಗಳಾಂಬಾ ತಾಯಿ (Bagalamba Temple) ದೇವಸ್ಥಾನವು ಶಕ್ತಿದೇವತೆಯ ದೇವಸ್ಥಾನಗಳಲ್ಲಿ ಒಂದಾಗಿದೆ. ಸುಂದರವಾಗಿ ನಿರ್ಮಾಣವಾದ ದೇವಸ್ಥಾನವು ಸಂಪೂರ್ಣ ಶಿಲಾಮಯ ಗರ್ಭಗುಡಿಯನ್ನು ಹೊಂದಿದೆ. ಇತ್ತಿಚೆಗಷ್ಟೆ 2012 ರಲ್ಲಿ ಸುತ್ತುಪೌಳಿ ಕೂಡಾ ನಿರ್ಮಾಣಗೊಂಡು ಭಕ್ತರನ್ನು ತನ್ನತ್ತ ಸೂಜಿಗಲ್ಲಿನಂತೆ ಸೆಳೆಯುತ್ತಿದೆ.
ಅನಾದಿಯಲ್ಲಿ ಇಲ್ಲಿ ದೇವಿಯ ಮಂದಿರವಿದ್ದು ಸಹಸ್ರಾರು ವರ್ಷಗಳ ಇತಿಹಾಸದೊಂದಿಗೆ ರಾಜಾಶ್ರಯವನ್ನು ಪಡೆದಿತ್ತು ಎಂಬುದು ಪ್ರಶ್ನಾಚಿಂತನೆಯಲ್ಲಿ ಕಂಡುಬಂದಿರುವ ವಿಚಾರವನ್ನು ಈ ದೇವಾಲಯದ ಮುಖ್ಯ ಆಡಳಿತ ನಿರ್ವಾಹಕರಾದ ಶ್ರೀಯುತ ಗಣಪತಿ ಸುವರ್ಣರವರು ಹೇಳುತ್ತಾರೆ. ಇವರು ವರ್ಣಿಸುವಂತೆ ಈ ದೇವಾಲಯ ನಿರ್ಮಾಣಕ್ಕೆ ಮೊದಲು ಇಲ್ಲಿ 'ಗುರುಪೀಠ'ವು ಮೇಲೆ ಉದ್ಭವಿಸಿ ಬಂದು, ಅದನ್ನು ಗುರುಮಖೇನ ಪ್ರಾರಂಭದಲ್ಲಿ ಪ್ರತಿಷ್ಠಾನೆ ಮಾಡಲಾಯಿತು. ತದನಂತರ ದೇವಿಯ ಮಂದಿರವನ್ನು 21-02-2002ರಲ್ಲಿ ನಿರ್ಮಾಣ ಮಾಡಲಾಯಿತು ಎಂದು ಹೇಳುತ್ತಾರೆ.
Shree Bagalamba Devi temple
ಹೀಗೆ ಆದಿಶಕ್ತಿ ಸ್ವರೂಪಿಣಿಯೇ ಇಲ್ಲಿ ನೆಲೆಸಿರುವ ಶ್ರೀ ಬಗಳಾಂಬಾ ತಾಯಿಯಾಗಿದ್ದಾಳೆ. ಇವಳು ತ್ರಿಗುಣಾತ್ಮಿಕೆಯಾದ ಶಿವೆಯಾಗಿದ್ದು ತನ್ನಲ್ಲಿ ಮಹಾಲಕ್ಷ್ಮೀ, ಮಹಾಸರಸ್ವತೀ ದೇವಿಯ ಅಂಶವನ್ನು ಹೊಂದಿದ್ದಾಳೆ. ಈ ದೇವಾಲಯದಲ್ಲಿ ಶ್ರೀ ದೇವಿಯ ಬಿಂಬವೇ ಒಂದು ಆಕರ್ಷಣೆ. ಸುಂದರವಾದ ಮೂರ್ತಿಯನ್ನು ಕಣ್ಣಾರೆ ತುಂಬಿಕೊಳ್ಳಲು ಸಮಯವೇ ಸಾಲದು. ಅಮ್ಮನವರ ಬಿಂಬವು ಸುಂದರವಾಗಿ ನಿರ್ಮಾಣವಾಗಿದ್ದು ಶಂಖ-ಚಕ್ರ-ಗದಾ-ಹಸ್ತಳಾಗಿ, ಪದ್ಮಾಸನ ಭಂಗಿಯಲ್ಲಿ ಕುಳಿತಿರುವಂಥ ರೂಪವಾಗಿದೆ. ದೇವಿಯ ಅಲಂಕಾರವನ್ನು ನೋಡುವುದೇ ಭಕ್ತರಿಗೆ ಮಹಾಪುಣ್ಯ. ದೇವಿಯ ಬಿಂಬದಲ್ಲಿ ಅಷ್ಟೊಂದು ಮಂತ್ರಮುಗ್ದತೆ ಅಡಗಿದೆ.
ಈ ತೆರನಾಗಿ ಹಿಂದೆ ಸರಿಸುಮಾರು 62 ವರ್ಷಗಳ ಹಿಂದೆ ಇಲ್ಲಿ ಬಂದು ನೆಲೆಸಿದ ತಿಮ್ಮಪ್ಪ ಸುವರ್ಣರವರು ಇಲ್ಲಿ ದೇವಿಯ ಪ್ರೇರಣೆಯ ಮೇರೆಗೆ ನವರಾತ್ರಿ ಪೂಜೆಯನ್ನು ಪ್ರಾರಂಭಿಸುತ್ತಾರೆ. ಇವರ ಪುತ್ರ ಗಣಪತಿ ಸುವರ್ಣರವರು ಹೇಳುವಂತೆ ನವರಾತ್ರಿ ಪ್ರಾರಂಭಗೊಂಡು ಇಂದಿಗೆ ಸರಿಸುಮಾರು 45 ವರ್ಷಗಳು ಆಗಿದ್ದು, ಹಿಂದೆ ದೇವಿಯನ್ನು ಕಳಶದಲ್ಲಿ ಸ್ಥಾಪಿಸಿ ಪೂಜಿಸಲಾಗುತ್ತಿತ್ತು. ಕಾಲಕ್ರಮೇಣ ದೇವಿಯ ಶಕ್ತಿ ಮತ್ತು ಚೈತನ್ಯ ಹೆಚ್ಚಿ ಮಂದಿರವನ್ನು ನಿರ್ಮಾಣ ಮಾಡಲಾಯಿತು ಎಂಬುದಾಗಿ ತಿಳಿದುಬರುತ್ತದೆ.
Shree Gurupeetham & Kalabairava
ಈ ದೇವಸ್ಥಾನವು ಪೂರ್ವಾಭಿಮುಖವಾಗಿ ನಿರ್ಮಾಣಗೊಂಡು, ಶಾಸ್ತ್ರಬದ್ದವಾಗಿ ರಚಿತಗೊಂಡಿದೆ. ಇಲ್ಲಿ ಪ್ರತಿ ವರ್ಷ ನಡೆಯುವ ವಾರ್ಷಿಕ ಪೂಜೆಯ ಸಂದರ್ಭದಲ್ಲಿ ಚಂಡಿಕಾಹೋಮ, ಅನ್ನಸಂತರ್ಪಣೆ ಹಾಗೂ ಯಕ್ಷಗಾನ ಸೇವೆಯು ನಡೆಯಲ್ಪಡುತ್ತದೆ. ಅಲ್ಲದೆ ಪ್ರತೀ ಮಾಸದಲ್ಲೂ ದುರ್ಗಾಹೋಮ ನಡೆಯುತ್ತದೆ. ನವರಾತ್ರಿಯ 9 ದಿವಸವೂ ವಿಶೇಷ ಪೂಜೆಯ ಸಮೇತ ದೇವಿಗೆ ನವವಿಧವಾದ ಅಲಂಕಾರವನ್ನು ಮಾಡಲಾಗುತ್ತದೆ. ಅಲ್ಲದೇ ದೇವಿಗೆ ಪ್ರತಿನಿತ್ಯ ತ್ರಿಕಾಲ ಪೂಜೆಯ ಜೊತೆ ಮಧ್ಯಾಹ್ನ ಅನ್ನನೈವೇದ್ಯ ಸಮರ್ಪಣೆಯಾಗುತ್ತದೆ. ಶ್ರೀ ದೇವಿಯ ಪರಿವಾರದಲ್ಲಿ ಗುರುಪೀಠ, ಕಾಲಭೈರವ, ಮುಖ್ಯಪ್ರಾಣ ಹಾಗೂ ನಾಗದೇವರು ಪಶ್ಚಿಮಾಭಿಮುಖವಾಗಿ ಪ್ರತಿಷ್ಠಾಪನೆಗೊಂಡಿದೆ. ಅಲ್ಲದೇ ನವರಾತ್ರಿಯ 9ನೇ ದಿನ 9 ಜನ ಸುಹಾಸಿನಿಯರಿಗೆ ಮಡಿಲು ತುಂಬುವ ಸಂಪ್ರದಾಯವು ಕೂಡಾ ಇದೆ. ಗದ್ದುಗೆ ತಿಮ್ಮಯ್ಯ ಸ್ವಾಮಿಗಳಿಂದ ಇಲ್ಲಿನ ಗುರುಪೀಠದ ಹಾಗೂ ಅಮ್ಮನವರ ದೈವಿ ಚೈತನ್ಯವು ಇನ್ನುಷ್ಟು ಸ್ಪುರಣೆಗೊಳ್ಳತ್ತದೆ.
Shree Mukyaprana& Nagadevatha
ಇಲ್ಲಿ ವಿಶೇಷವಾಗಿ ಅಮ್ಮನವರಿಗೆ ಹಲವಾರು ಸೇವೆಗಳು ಸಲ್ಲುತ್ತದೆ. ಅದರಲ್ಲಿ ಸೀರೆ ಸಮರ್ಪಣೆ, ರಂಗಪೂಜೆ, ಸೋಣೆಯಾರತಿ, ಮಡಿಲು ತುಂಬುವುದು, ಹೂವಿನ ಪೂಜೆ ಇತ್ಯಾದಿಗಳು ನಡೆಸಲ್ಪಡುತ್ತದೆ. ನಾಗದೇವರಿಗೆ ಪ್ರತಿ ವರ್ಷ ಆಶ್ಲೇಷಾಬಲಿ ನಡೆಯುತ್ತದೆ. ಪ್ರತಿ ದಿನ ರಾತ್ರಿ ಮಂಗಳಾರತಿಯಲ್ಲಿ ಶ್ರೀ ಚಿಕ್ಕಮ್ಮ ದೇವಿ ಮತ್ತು ಬಗಳಾಂಬಾ ತಾಯಿ ಚಂಡೆ ಬಳಗದವರಿಂದ ಚಂಡೆ ವಾದನ ಸೇವೆಯು ಸಲ್ಲ್ಲುತ್ತದೆ. ಈ ಬಳಗದ ಸದಸ್ಯರಾದ ಮಿಥುನ್ ಸುವರ್ಣರವರು ಧನ್ಯತೆಯಲ್ಲಿ ಈ ಮಾತನ್ನು ಹೇಳುತ್ತಾರೆ. 
ಹೀಗೆ ಆದಿಶಕ್ತಿ ಸ್ವರೂಪಿಣಿಯಾದ ಶ್ರೀ ಬಗಳಾಂಬಾ ತಾಯಿಯನ್ನು ಒಮ್ಮೆ ನೀವೂ ಕಂಡು ನಿಮ್ಮ ಜೀವನವನ್ನು ಸಾರ್ಥಕ ಮಾಡಿಕೊಳ್ಳಿ. ಸಿರಿದೇವಿಯ ಮತ್ತು ಶ್ರೀ ಪರಿವಾರದ ಕೃಪೆಗೆ ಪಾತ್ರರಾಗಿ. ಸರ್ವರಿಗೂ ಶ್ರೀ ಬಗಳಾಂಬೆ ಅನುಗ್ರಹಿಸಲಿ.

ವಿಳಾಸ :-
ಶ್ರೀ ಬಗಳಾಂಬಾ ತಾಯಿ ದೇವಸ್ಥಾನ,
ಚಿಕ್ಕಮ್ಮನಸಾಲ್ ರಸ್ತೆ, ಕುಂದಾಪುರ ||

ದಾರಿಯ ವಿವರ : ಕುಂದಾಪುರ ನಗರದ ಮುಖ್ಯ ಅಂಚೇ ಕಛೇರಿಯ ಚಿಕನ್ಸಾಲ್ ರಸ್ತೆಯಲ್ಲಿ ಸರಿಸುಮಾರು 1ಕಿ.ಮೀ ಸಾಗಿದರೆ ಶ್ರೀ ಅಮ್ಮನವರ ದೇವಸ್ಥಾನವು ರಸ್ತೆಯ ಮಗ್ಗುಲಲ್ಲೇ ನಮಗೆ ಕಾಣಸಿಗುತ್ತದೆ.

ಹೆಚ್ಚಿನ ಮಾಹಿತಿಗಾಗಿ :-
• ಮಿಥುನ್ ಸುವರ್ಣ : 9008854800