Drop Down Menus CSS Drop Down Menu #
>> Namaskaram..!! Welcome to Namma-Naadu.blogspot.com >> ಓದುಗ ಬಂದುಗಳಿಗೆ ಹೃದಯಪೂರ್ವಕ ನಮಸ್ಕಾರ!! ನಮ್ಮ-ನಾಡು ಅಂತರ್ಜಾಲ ಪುಟ ವೀಕ್ಷಕರು ನಮ್ಮನ್ನು ಇಲ್ಲಿಯವರೆಗೆ ಪ್ರೋತ್ಸಾಹಿಸಿ, ಅಭಿನಂದಿಸಿದ್ದೀರಿ. ಮುಂದೆಯೂ ಕೂಡಾ ಇದೇ ರೀತಿಯಲ್ಲಿ ನಮ್ಮೊಂದಿಗೆ ಜೊತೆಯಾಗಿದ್ದು, ನಮ್ಮ-ನಾಡಿನ ಸೊಗಡನ್ನು ಸಾರೋಣ... ಧನ್ಯವಾದಗಳೊಂದಿಗೆ : ರಾಘವ್ ಕೋಟೇಶ್ವರ. >> ನಮ್ಮ ಮುಂದಿನ ಲೇಕನಗಳು : • ಶ್ರೀ ಚಿಕ್ಕಮ್ಮ ದೇವಸ್ಥಾನ, ಚಿಕನ್ಸಾಲ್,ಕುಂದಾಪುರ • ಶ್ರೀ ಪಂಚದುರ್ಗಾಪರಮೇಶ್ವರೀ ದೇವಸ್ಥಾನ,ಮಠದಬೆಟ್ಟು. ಕೋಟೇಶ್ವರ. >> ಇನ್ನೂ ಹಲವಾರು ದೇವಾಲಯ, ದೈವಾಲಯಗಳ ಮಾಹಿತಿಗಾಗಿ ನಿರೀಕ್ಷಿಸಿ..' >> ಪ್ರಕಟವಾದ ಹೊಸ ಲೇಖನಗಳು : •   ಶ್ರೀ ಅಬ್ಬಗ-ದಾರಗ ದೇವಸ್ಥಾನ, ಮಣಿಕಲ್ಲು   •   ಶ್ರೀ ಕನ್ನಿಕಾ ದುರ್ಗಾ, ಜಪ್ತಿ  • ಶ್ರೀ ಮಾರಿಯಮ್ಮ, ಕಾಪು.....

Showing posts with label Sri Kshethra Udupi. Show all posts
Showing posts with label Sri Kshethra Udupi. Show all posts

Sri Rajathapeeta, Udpi

ಶ್ರೀ ಮದನಂತೇಶ್ವರ ಚಂದ್ರಮೌಳೀಶ್ವರ ದೇವಸ್ಥಾನ, ರಜತಪೀಠ, ಉಡುಪಿ|
Shree Madanantheshwara Chandramoulishwara Temple, Udupi.


Sri Anantheshwara Chandramowlishwara

ಇತಿಹಾಸಪೂರ್ವದ ರಜತಪೀಠ ಶ್ರೀ ಮದನಂತೇಶ್ವರ ಶ್ರೀ ಚಂದ್ರಮೌಳೀಶ್ವರ ಸನ್ನಿಧಿ.

ಡುಪಿ(udupi) ಕನ್ನಡ ಕರಾವಳಿಯ ಹಾಗೂ ತೌಳ ಸಂಸ್ಕೃತಿಯ ನೆರೆವೀಡು. ಪೊಡವಿಗೊಡೆಯ ಶ್ರೀ ಕೃಷ್ಣನು ನಿಂದ ಪವಿತ್ರ ಬೀಡು. ಬುದ್ದಿವಂತರ ನಾಡಾದ ಉಡುಪಿ ಇಂದು ಶ್ರೀ ಕೃಷ್ಣನಿಂದ ಪ್ರಸಿದ್ದಿಯನ್ನು ಪಡೆದರು ಇದಕ್ಕಿಂತ ಮೊದಲು ಈ ಕ್ಷೇತ್ರವು ಪರಶಿವನ ಸಾನಿಧ್ಯದಿಂದ ‘ರಜತಪೀಠಪುರ’ ಅಥವಾ ‘ಶಿವಳ್ಳಿ’ ಎಂಬ ಹೆಸರಿನಿಂದ ಕರೆಯಲ್ಪಡುತ್ತಿತ್ತು. ಅದೇ ರೀತಿ ಶ್ರೀ ಚಂದ್ರಮೌಳೀಶ್ವರನು ಇಲ್ಲಿ ನೆಲೆಸಿದುದು ಮಹೊನ್ನತವೇ ಸರಿ. ಉಡುಪಿಯು ಸಪ್ತಕ್ಷೇತ್ರಗಳಲ್ಲಿ ಒಂದಾಗಿದೆ. ಅಂದರೆ ಪರಶುರಾಮನು ಸೃಷ್ಟಿಸಿದ ಸಪ್ತ ಕ್ಷೇತ್ರದಲ್ಲಿ ಈ ಪರಶಿವನ ಸಾನಿಧ್ಯವೂ ಕೂಡಾ ಒಂದು. ಇಲ್ಲಿಗೆ ಉಡುಪಿ ಎಂದು ಹೆಸರು ಬರಲು  ಪುರಾಣದಲ್ಲಿ ಒಂದು ಉಲ್ಲೇಖಗಳಿವೆ. ಹಿಂದೆ ದಕ್ಷ ಪ್ರಜಾಪತಿಯ ಶಾಪದಿಂದ  ಚಂದ್ರನು ವಿಚಲಿತನಾದನು. ನಂತರ ಚಂದ್ರನಿಗೆ ಮೋಕ್ಷವಾಗಲು ನೀನು ಪರಮೇಶ್ವರನನ್ನು ಕುರಿತು ತಪಸ್ಸು ಮಾಡು, ಅದರಿಂದ ನಿನ್ನ ಶಾಪ ವಿಮೋಚನೆ ಆಗುತ್ತದೆ ಎಂದು ಹೇಳಿದನು.
ಶ್ರೀ ಚಂದ್ರಮೌಳೀಶ್ವರ
ದರಂತೆ ಚಂದ್ರನು ಪರಮೇಶನನ್ನು ಕುರಿತು ಇಂದಿನ ಉಡುಪಿಯಲ್ಲಿ ತಪಸ್ಸು ಮಾಡಿ ಪರಮೇಶನನ್ನು ಒಲಿಸಿಕೊಳ್ಳುತ್ತಾನೆ. ಚಂದ್ರನು ಶಿವನ ಆಭರಣವಾಗಿ ‘ಶ್ರೀ ಚಂದ್ರಮೌಳೀಶ್ವರ’ ಎಂದು ಕರೆಸಿಕೊಂಡು ಉಡುಪಿಯಲ್ಲಿ ನೆಲೆಯಾಗುತ್ತಾನೆ. ಅಂತೆಯೇ ಸಂಸ್ಕೃತದಲ್ಲಿ ‘ಉಡು’ ಎಂದರೆ ‘ನಕ್ಷತ್ರ’, ‘ಪ’ ಎಂದರೆ ‘ಒಡೆಯ’ ಎಂಬ ಅರ್ಥವನ್ನು ಕೊಡುತ್ತದೆ. ಅಂದರೇ ನಕ್ಷತ್ರದ ಒಡೆಯನಾದ ಚಂದ್ರನ ತಪದಿಂದ ಇಂದು ಈ ಕ್ಷೇತ್ರವು ‘ಉಡುಪಿ’ ಎಂದಾಗಿದೆ.  ಹೀಗೆ ಇಲ್ಲಿ ನೆಲೆಯಾದ ಶಿವನನ್ನು ಪರಶುರಾಮರು ಅನಂತೇಶ್ವರ ದೆಂಬುದಾಗಿಯೂ ಪೂಜಿಸುತ್ತಾರೆ.
ಭಾರತದ ಪ್ರಸಿದ್ಧ ಯಾತ್ರಾ ಸ್ಥಳಗಳಲ್ಲಿ ಒಂದಾಗಿ ಉಡುಪಿ ಕ್ಷೇತ್ರವು ಸರ್ವ ಸಜ್ಜಿತ ಪ್ರವಾಸಿ ತಾಣವಾಗಿ ಪ್ರಖ್ಯಾತವಾಗಿದೆ.  ಅಷ್ಠಮಠಗಳ ಕ್ಷೇತ್ರವಾಗಿ ಸುಂದರ ಮಂದಿರಗಳ ನಗರ ಉಡುಪಿ, ಸಾಂಸ್ಕೃತಿಕ ಐತಿಹಾಸಿಕ ಶಿಲ್ಪ ವೈಭವದ ಪಟ್ಟಣವಾಗಿದೆ. ವಿದ್ಯಾನಗರಿ ಎಂದು ಹೆಸರಿಸಲಾಗಿದೆ. ಜಾನಪದ ಕಲಾಕ್ಷೇತ್ರವಾಗಿ, ಅಂತರಾಷ್ಟ್ರೀಯ ಖ್ಯಾತಿಯ ವಿವಿಧ ವಿದ್ಯಾಸಂಸ್ಥೆಗಳ ಕೇಂದ್ರವಾಗಿ ಉಡುಪಿ ಪರಿಪೂರ್ಣ ಸೌಲಭ್ಯಗಳನ್ನು ಹೊಂದಿರುವ ಕರ್ನಾಟಕದ ಅತಿದೊಡ್ಡ ವೈವಿಧ್ಯಮಯ ಕ್ಷೇತ್ರ ಪಟ್ಟಣವಾಗಿ ಮುಂಚೂಣಿಯಲ್ಲಿದೆ. ಸಡಗರದ ಉಡುಪಿಯ ವಿವಿಧ ಪ್ರದೇಶಗಳನ್ನು ಸಂದರ್ಶಿಸಲು, ಪ್ರವಾಸಿಗಳು, ಯಾತ್ರಾರ್ತಿಗಳು ಸದಾ ಉತ್ಸುಕರಾಗಿರುತ್ತಾರೆ.
          ರಾವಳಿಯ ಹಂಪಿ ಎಂದು ಹೆಸರಾದ 365 ದೇವಾಲಯಗಳ ನಗರ ಬಾರಕೂರು ಇಲ್ಲಿಂದ ಬರೆ ಹದಿನಾರು ಕಿಲೋಮೀಟರ್ ದೂರದಲ್ಲಿದೆ. ಉಡುಪಿಯನ್ನು ನಿತ್ಯೋತ್ಸವದ ನಾಡು ಎಂದು ಸಾಮಾನ್ಯವಾಗಿ ಗುರುತಿಸುತ್ತಾರೆ. ಸಪ್ತಕ್ಷೇತ್ರಗಳಲ್ಲಿ ಒಂದಾದ ಉಡುಪಿ ರಜತಪೀಠ ಎಂದು ಹೆಸರಾಗಿದೆ.
          ಮದ್ವಾಚಾರ್ಯರು ಪ್ರತಿಷ್ಠಾಪನೆ ಮಾಡಿದ ಶ್ರೀ ಕೃಷ್ಣ ಪರಮಾತ್ಮನು ಲೋಕಪ್ರಿಯನೆಂದು ಹಾಡಿ ಹೊಗಳುತ್ತಾರೆ. ಈ ನೆಲದಲ್ಲಿ ಅರಳಿದ ಕಲೆ, ಸಾಹಿತ್ಯ, ಯಕ್ಷಗಾನ-ಶಿಲ್ಪ ಸಾಂಸ್ಕೃತಿಕ ಸಿರಿಗೆ ಜ್ಞಾನಪೀಠ ಪ್ರಶಸ್ತಿಯು ಅರಸಿ ಬಂತು. ಉಡುಪಿ ಇಂದು ಜೀವನದೊಳಗೆ ಏನೇನ್ ಕಂಡೆ ಎಂದು ಕೇಳುವವರಿಗೆ ಉಡುಪಿ ಕೃಷ್ಣನ ಕಂಡೆ, ಮಲ್ಪೆ ಬಂದರು ಕಂಡೆ, ಕಾಪು ದೀಪಸ್ತಂಭ ಮೂರು ಮಾರಿಗುಡಿ ಕಂಡೆ, ಬೃಹತ್ ಗಾತ್ರದ ಮೆಕ್ಕೆ ಕಟ್ಟೆಯ ಅರವತ್ತುಮೂರು ಮರದ ಮೂರ್ತಿಗಳನ್ನು ಕಂಡೆ, ಸಂಸ್ಕೃತ ಮಹಾ ಕಾಲೇಜು ಕಂಡೆ, ಎಲ್ಲೂ ಇಲ್ಲದಂತಹ ಎಂಟು ಮಠಗಳನ್ನು, ಪುರಾತನದ ದೇಗುಲಗಳಾದ ಮದನಂತೇಶ್ವರ, ಚಂದ್ರಮೌಳೇಶ್ವರರನ್ನು ಕಂಡೆ, ಮಣಿಪಾಲದ ವಿದ್ಯಾಮಂದಿರಗಳು, ಬೃಹತ್ ಆಸ್ಪತ್ರೆ, ಬ್ಯಾಂಕಿಂಗ್ ಕೇಂದ್ರಗಳನ್ನು ಕಂಡು ಖುಶಿಪಟ್ಟೆ ಎನ್ನಬಹುದು.
          ಪರಶುರಾಮ ಸೃಷ್ಟಿ ಎಂದು ಪರಿಗಣಿಸಲಾಗಿರುವ ಕನ್ನಡ ನಾಡಿನ ಪಡುಗಡಲ ಪ್ರದೇಶದಲ್ಲಿ ಏಳು ಮೋಕ್ಷದಾಯಕ ಕ್ಷೇತ್ರಗಳಿವೆ. ಅವುಗಳಲ್ಲಿ ಉಡುಪಿ ಅತ್ಯಂತ ವಿಶಿಷ್ಟವಾದ ಕ್ಷೇತ್ರ ಎಂದು ಭಾರತದಾದ್ಯಂತ ಹೆಸರಾಗಿದೆ.
          ಉಡುಪಿಯಲ್ಲಿರುವ ಕೃಷ್ಣಮಠ ಪ್ರಸಿದ್ಧ ಯಾತ್ರಾ ಸ್ಥಳವಾಗಿದೆ. ಇಲ್ಲಿರುವ ಶ್ರೀ ಕೃಷ್ಣನ ದೇವಸ್ಥಾನವನ್ನು ಕೃಷ್ಣ ಮಠ ಎಂದು ಕರೆಯುತ್ತಾರೆ. ಈ ದೇವಸ್ಥಾನದ ಸುತ್ತಲೂ ಎಂಟು ಯತಿಗಳನ್ನೊಳಗೊಂಡ ಅಷ್ಟ ಮಠಗಳಿವೆ.
          ಶ್ರೀ ಅನಂತೇಶ್ವರ ( ಶ್ರೀ ಮದನಂತೇಶ್ವರ) ಮತ್ತು ಶ್ರೀ ಚಂದ್ರಮೌಳೀಶ್ವರ ದೇವಾಲಯಗಳು, ಶ್ರೀ ಕೃಷ್ಣ ಮಂದಿರ ಮತ್ತು ಅಷ್ಟ ಮಠಗಳನ್ನೊಳಗೊಂಡ ರಥಬೀದಿ ಉಡುಪಿಯ ಕೇಂದ್ರಸ್ಥಾನ. ಶ್ರೀ ಅನಂತೇಶ್ವರ ದೇವಾಲಯಕ್ಕೆ ಸಂಬಂಧಿಸಿದಂತೆ ನಾಲ್ಕು ದಿಕ್ಕುಗಳಲ್ಲಿ ನಾಲ್ಕು ಶಕ್ತಿಯ ಆರಾಧನಾ ಕೇಂದ್ರಗಳು ಇವೆ. ಪೂರ್ವದಲ್ಲಿ ಕಡಿಯಾಳಿ ಮಹಿಷಮರ್ದಿನಿ, ಪಶ್ಚಿಮದಲ್ಲಿ ಕನ್ನರ್ಪಾಡಿಯ ಜಯದುರ್ಗಾ, ಉತ್ತರದ ಅಂಬಾಗಿಲು ಪುತ್ತೂರಿನಲ್ಲಿ ದುರ್ಗಾಪರಮೇಶ್ವರಿ, ದಕ್ಷಿಣದಲ್ಲಿ ಬೈಲೂರು ಮಹಿಷಮರ್ದಿನಿ ದೇವಾಲಯಗಳಿವೆ.
          ಅನಂತೇಶ್ವರ ದೇವಸ್ಥಾನದ ಎದುರಿಗೆ ಪೂರ್ವಾಭಿಮುಖವಾಗಿ ಇರುವ ನೆಲಮಟ್ಟಕ್ಕಿಂತ ತಗ್ಗಿನಲ್ಲಿರುವ ವಿಶಿಷ್ಟ ಶೈಲಿಯ ದೇಗುಲ ಚಂದ್ರ ಮೌಳೀಶ್ವರ ಮಂದಿರ. ಇದು ಉಡುಪಿಯ ಅತ್ಯಂತ ಪ್ರಾಚೀನ ದೇವಸ್ಥಾನ ಎನ್ನಲಾಗಿದೆ.
          ಶ್ರೀ ಕೃಷ್ಣ ಮಠದ ದಕ್ಷಿಣದ ಮಹಾದ್ವಾರದಿಂದ ದೇವಾಲಯವನ್ನು ಪ್ರವೇಶಿಸಿದಾಗ ಬಲ ಭಾಗದಲ್ಲಿ ಮಧ್ವ ಸರೋವರವನ್ನು ಕಾಣಬಹುದು. ಎಡಭಾಗದ ದ್ವಾರದಿಂದ ದೇವಾಲಯ ಪ್ರವೇಶಿಸಿ, ಪ್ರದಕ್ಷಿಣಾ ಪಥದಲ್ಲಿ ಮುನ್ನಡೆದು ಪಡುಭಾಗದಲ್ಲಿರುವ ನವಗ್ರಹದ ಕಿಂಡಿಯಿಂದ ಶ್ರೀ ಕೃಷ್ಣನ ದರ್ಶನವನ್ನು ಪಡೆಯಬಹುದು.
          ಉಡುಪಿ ಶ್ರೀ ಕೃಷ್ಣ ಮಠದ ವಿಶೇಷವೆಂದರೆ ದೇವರು ಮಹಾದ್ವಾರಕ್ಕೆ ಮುಖವಾಗಿ ಇರುವ ಬದಲು ವಿರುದ್ಧ ದಿಕ್ಕಿನಲ್ಲಿ ಪ್ರತಿಷ್ಠಾಪಿಸಲ್ಪಟ್ಟಿದ್ದಾನೆ.
          ಉಡುಪಿ ಶ್ರೀ ಕೃಷ್ಣನ ವಿಗ್ರಹ ಶ್ರೀ ಮದ್ವಾಚಾರ್ಯರಿಂದ ಪ್ರತಿಷ್ಠಾಪಿಸಲ್ಪಟ್ಟದ್ದು ಈ ಕುರಿತು ಕತೆಯೊಂದಿದೆ. ಸಮುದ್ರ ತಟದಲ್ಲಿ ಮಧ್ವಾಚಾರ್ಯರು ಪೂಜಾ ನಿರತರಾಗಿದ್ದಾಗ ಹಡಗೊಂಡು ಸಾಗರ ಮಧ್ಯದಲ್ಲಿ ಬಿರುಗಾಳಿಗೆ ಸಿಲುಕಿ ಸಂಕಟದಲ್ಲಿತ್ತು. ಆಚಾರ್ಯರ ದಿವ್ಯ ಶಕ್ತಿಯಿಂದ ಹಡಗನ್ನು ರಕ್ಷಿಸಿದರು. ದಡ ಸೇರಿದ ನಾವಿಕರು ವಿನೀತರಾದರು. ಮಥುರೆಯಿಂದ ಹಡಗಿನ ಪ್ರಯಾಣ ಸರಕು ಸಾಮಾಗ್ರಿಗಳೊಡನೆ ಆರಂಭಿಸುವಾಗ ಹಡಗಿನ ಸಮತೋಲನಕ್ಕಾಗಿ ದಡದಲ್ಲಿದ್ದ ಎರಡು ದೊಡ್ಡ ಗೋಪಿ ಉಂಡೆಗಳನ್ನು ಹಡಗಿಗೆ ಹೇರಿದ್ದರು.
          ದಡಸೇರಿದ ರಕ್ಷಿತ ಹಡಗಿನ ನಾವಿಕರು ಭಕ್ತಿಪೂರ್ವಕ ಈ ಎರಡು ಗೋಪಿಯ ಉಂಡೆಗಳನ್ನು ಮಧ್ವಾಚಾರ್ಯರಿಗೆ ಅರ್ಪಿಸಿದರು. ಈ ಗೋಪಿ ಚಂದನ ಉಂಡೆಯನ್ನು ಒಡೆದಾಗ ಒಂದರಲ್ಲಿ ಬಲರಾಮನ ವಿಗ್ರಹ ಮತ್ತು ಇನ್ನೊಂದರಲ್ಲಿ ಶ್ರೀ ಕೃಷ್ಣನ ಮೂರ್ತಿ ಇರುವುದು ಕಂಡು ಬಂತು.
          ಮಧ್ವಾಚಾರ್ಯರ ಆದೇಶದಂತೆ ಬಲರಾಮನ ಮೂರ್ತಿಯನ್ನು ಮಲ್ಪೆ ಸಮೀಪದ ವಡಭಾಂಡೇಶ್ವರ ಕಡಲ ತಡಿಯಲ್ಲಿ ಸ್ಥಾಪಿಸಲಾಯಿತು. ಶ್ರೀ ಕೃಷ್ಣನ ವಿಗ್ರಹವನ್ನು ಉಡುಪಿಗೆ ತಂದು ಮಧ್ವಾಚಾರ್ಯರು ಪ್ರತಿಷ್ಠಾಪಿಸಿದರು.
          ಶ್ರೀ ಕೃಷ್ಣನ ಅರ್ಚನೆಗಾಗಿ ಮಂದಿರದ ಅಷ್ಟದಿಕ್ಕುಗಳಲ್ಲಿ ಎಂಟು ಮಠಗಳನ್ನು ಸ್ಥಾಪಿಸಿ, ಎಂಟು ಜನ ಯತಿಗಳು ಪ್ರತಿ ಎರಡು ತಿಂಗಳಿಗೊಮ್ಮೆ ಪರ್ಯಾಯವಾಗಿ ಶ್ರೀ ಕೃಷ್ಣನನ್ನು ಪೂಜಿಸಬೇಕೆಂದು ನಿರ್ಣಯಿಸಿದರು. ಅದರಂತೆ ಬಹುಕಾಲ ನಡೆದು ಬಂದಿತ್ತು. ಮುಂದೆ ಶ್ರೀ ಕೃಷ್ಣನ ಪೂಜಾವಿಧಿಯ ಕ್ರಮವತ್ತಾದ ಕೈಂಕರ್ಯ ಪರ್ಯಾಯ ಪದ್ಧತಿಯಂತೆ ಪಟ್ಟಾಭಿಷಿಕ್ತ ಯತಿಗಳಿಂದ ಎರಡು ವರ್ಷಗಳ ಅವಧಿಯಲ್ಲಿ ನಡೆಯಬೇಕೆಂದಾಯಿತು.
          ಶ್ರೀ ಕೃಷ್ಣ ಮಠದಲ್ಲಿ ಒಂದು ವಿಶೇಷವೆಂದರೆ ಗರ್ಭಗುಡಿಯ ಉತ್ತರಭಾಗದ ಗೋಡೆಯ ಬಳಿ ಇನ್ನೊಂದು ತೈಲ ಕೃಷ್ಣ ಎಂಬ ಶ್ರೀ ಕೃಷ್ಣನ ವಿಗ್ರಹ ಇದೆ. ಇದು ಅಷ್ಟಾಗಿ ಜನರಿಗೆ ಕಾಣಿಸುವಂತಿಲ್ಲ. ಇತಿಹಾಸದಂತೆ ಶಂಕರಾಚಾರ್ಯರ ಶಿಷ್ಯರಾದ ಹಸ್ತಾಮಲಕರು ಉಡುಪಿಯಲ್ಲಿ ಶ್ರೀಕೃಷ್ಣನ ಪ್ರತಿಮೆಯೊಂದನ್ನು ಸ್ಥಾಪಿಸಿದ್ದರು. ಇದು ಪ್ರಾಯಶಃ ಆದಿ ಉಡುಪಿಯ ಕಂಗು ಮಠದಲ್ಲಿರಬೇಕು ಎನ್ನುತ್ತಾರೆ. ಈ ಮಠ ಜೀರ್ಣಾವಸ್ಥೆಗೆ ಬಂದಾಗ ಅಲ್ಲಿಯ ಕೃಷ್ಣನ ಪ್ರತಿಮೆಯನ್ನು ಶ್ರೀ ಕೃಷ್ಣಮಠಕ್ಕೆ ಒಪ್ಪಿಸಲಾಗಿದೆ. ಅಂದಿನಿಂದ ಈ ಕೃಷ್ಣನಿಗೂ ಪರ್ಯಾಯ ಯತಿಗಳಿಂದ ಪೂಜೆ ನಡೆಯುತ್ತಿದೆ.
          ಉಡುಪಿಯಲ್ಲಿ ಕನಕನ ಕಿಂಡಿ ಎಂಬುದು ವಿಶೇಷತೆಯನ್ನು ಹೊಂದಿದೆ. ಬ್ರಾಹ್ಮಣನಲ್ಲದ ಕನಕನೆಂಬ ಶ್ರೀ ಕೃಷ್ಣ ಭಕ್ತನು ಯಾತ್ರಾರ್ಥಿಯಾಗಿ ಉಡುಪಿಗೆ ಬಂದಾಗ ಆತನಿಗೆ ದೇವಾಲಯದೊಳಗೆ ಪ್ರವೇಶ ನಿರಾಕರಿಸಲಾಯಿತು.
          ಶ್ರೀ ವಾದಿರಾಜರ ಪ್ರಿಯ ಶಿಷ್ಯರಾದ ಕನಕದಾಸರು ಉಡುಪಿ ಕೃಷ್ಣನ ದರ್ಶನಕ್ಕಾಗಿಯೆ ಉಡುಪಿಗೆ ಬಂದಿದ್ದರು. ದೇವಸ್ಥಾನದ ಹಿಂಬದಿ ಗೋಡೆ ಭೂಕಂಪದಿಂದ ಕುಸಿದಿತ್ತು. ಪೂವರ್ಾಭಿಮುಖವಾಗಿದ್ದ ಶ್ರೀ ಕೃಷ್ಣ ವಿಗ್ರಹ ಪಶ್ಚಿಮಾಭಿಮುಖವಾಗಿ ತಿರುಗಿ ಕನಕನಿಗೆ ದರ್ಶನದ ಭಾಗ್ಯವನ್ನು ಅನುಗ್ರಹಿಸಿತು. ಮುಂದೆ ವಾದಿರಾಜರೂ ಈ ಕುಸಿದ ಗೋಡೆಯನ್ನು ಕಿಂಡಿಯೊಡನೆ ಪುನರ್ ನಿರ್ಮಾಣ ಮಾಡಲು ಸೂಚಿಸಿದರು. ಅಂತೆಯೆ ಈ ಕಿಂಡಿ ಕನಕನ ಕಿಂಡಿ ಎಂದು ಹೆಸರಾಗಿದೆ. ದೇವಸ್ಥಾನದ ಒಳಗಿನ ನವಗ್ರಹ ಕಿಂಡಿಯಿಂದ ಶ್ರೀ ಕೃಷ್ಣನ ದರ್ಶನವನ್ನು ಪಡೆಯುವಂತೆಯೆ ಭಕ್ತರು ಮೊದಲಾಗಿ ಕನಕನ ಕಿಂಡಿಯಿಂದ ಶ್ರೀ ಕೃಷ್ಣ ದರ್ಶನ ಮಾಡುತ್ತಾರೆ. ರಥ ಬೀದಿಯಲ್ಲಿ ಕನಕನ ಕಿಂಡಿಯ ಎದುರಿಗೆ ಕನಕದಾಸರ ವಿಗ್ರಹವನ್ನು ಸ್ಥಾಪಿಸಲಾಗಿದೆ.
          ಉಡುಪಿಯಲ್ಲಿ ವರ್ಷವಿಡೀ ಉತ್ಸವಗಳು ನಡೆಯುತ್ತಿರುತ್ತವೆ. ಅಂತೆಯೇ ನಿತ್ಯೋತ್ಸವದ ಕ್ಷೇತ್ರವೆಂದಾಗಿದೆ. ಉಡುಪಿಯ ಅಷ್ಟಮಠಗಳ ಕೆಲವು ಯತಿಗಳು ಆಧುನಿಕ ಜ್ಞಾನ ವಿಜ್ಞಾನ ಮತ್ತು ತಂತ್ರಜ್ಞಾನಗಳ ವಿಕಸನಕ್ಕಾಗಿ ಅನೇಕ ಶೈಕ್ಷಣಿಕ ಸಂಸ್ಥೆಗಳನ್ನು ಹುಟ್ಟು ಹಾಕಿ ಬೆಳೆಸುತ್ತಿದ್ದಾರೆ.

ವಿಳಾಸ :-
ಶ್ರೀ ಮದನಂತೇಶ್ವರ ಚಂದ್ರಮೌಳೀಶ್ವರ ದೇವಸ್ಥಾನ
ರಜತಪೀಠ, ಉಡುಪಿ ||