Drop Down Menus CSS Drop Down Menu #
>> Namaskaram..!! Welcome to Namma-Naadu.blogspot.com >> ಓದುಗ ಬಂದುಗಳಿಗೆ ಹೃದಯಪೂರ್ವಕ ನಮಸ್ಕಾರ!! ನಮ್ಮ-ನಾಡು ಅಂತರ್ಜಾಲ ಪುಟ ವೀಕ್ಷಕರು ನಮ್ಮನ್ನು ಇಲ್ಲಿಯವರೆಗೆ ಪ್ರೋತ್ಸಾಹಿಸಿ, ಅಭಿನಂದಿಸಿದ್ದೀರಿ. ಮುಂದೆಯೂ ಕೂಡಾ ಇದೇ ರೀತಿಯಲ್ಲಿ ನಮ್ಮೊಂದಿಗೆ ಜೊತೆಯಾಗಿದ್ದು, ನಮ್ಮ-ನಾಡಿನ ಸೊಗಡನ್ನು ಸಾರೋಣ... ಧನ್ಯವಾದಗಳೊಂದಿಗೆ : ರಾಘವ್ ಕೋಟೇಶ್ವರ. >> ನಮ್ಮ ಮುಂದಿನ ಲೇಕನಗಳು : • ಶ್ರೀ ಚಿಕ್ಕಮ್ಮ ದೇವಸ್ಥಾನ, ಚಿಕನ್ಸಾಲ್,ಕುಂದಾಪುರ • ಶ್ರೀ ಪಂಚದುರ್ಗಾಪರಮೇಶ್ವರೀ ದೇವಸ್ಥಾನ,ಮಠದಬೆಟ್ಟು. ಕೋಟೇಶ್ವರ. >> ಇನ್ನೂ ಹಲವಾರು ದೇವಾಲಯ, ದೈವಾಲಯಗಳ ಮಾಹಿತಿಗಾಗಿ ನಿರೀಕ್ಷಿಸಿ..' >> ಪ್ರಕಟವಾದ ಹೊಸ ಲೇಖನಗಳು : •   ಶ್ರೀ ಅಬ್ಬಗ-ದಾರಗ ದೇವಸ್ಥಾನ, ಮಣಿಕಲ್ಲು   •   ಶ್ರೀ ಕನ್ನಿಕಾ ದುರ್ಗಾ, ಜಪ್ತಿ  • ಶ್ರೀ ಮಾರಿಯಮ್ಮ, ಕಾಪು.....

Showing posts with label Sri Prathyangira Devi. Show all posts
Showing posts with label Sri Prathyangira Devi. Show all posts

Sri Prathyangira Devi

ಶ್ರೀ ಮಹಾ ಪ್ರತ್ಯಂಗಿರ ದೇವಿ ಮಹಾತ್ಮೆ(ಅಥರ್ವಣ ಭದ್ರಕಾಳಿ)
Sri Prathyangira Devi Mahathmyam(Atharvana Badrakali)

Sri Prathyangira Devi
              ಪುರಾಣದಲ್ಲಿ ಶ್ರೀ ಪ್ರತ್ಯಂಗಿರ ದೇವಿ ಅಥವಾ ಅಥರ್ವಣ ಭದ್ರಕಾಳಿ ಎಂಬ ಹೆಸರಿನಿಂದ ಪ್ರಸಿದ್ದಿಯನ್ನು ಪಡೆದು ವಾಮವು ಹಾಗೂ ಶಾಕ್ತೇಯ ಪರಂಪರೆಯಲ್ಲಿ ಉಗ್ರ ಮಾತೆಯ ವರ್ಣನೆಯನ್ನು ಕಾಣಬಹದುದಾಗಿದೆ. ಮಾತೆಯು ಅತ್ಯುಗ್ರ ರೂಪಿಣಿಯಾಗಿದ್ದು ನೋಡುಗರಿಗೆ ಒಮ್ಮೆ ಭಯವನ್ನುಂಟು ಮಾಡಿದರು ನಿಜವಾದ ಭಕ್ರತಿಗೆ ಅಭಯದಾಯಿನಿಯೂ ಮಂದಸ್ಮಿತೆಯೂ ಆಗಿ ಕಾಣಬರುತ್ತಾಳೆ. ಮಾತೆಯನ್ನು ಭಜಿಸುವರಿಗೆ ಎಂತಹ ಕಷ್ಟ-ಕಾರ್ಪಣ್ಯಗಳು ಬಂದರೂ ಅವುಗಳನ್ನು ಹೊಡೆದೋಡಿಸುವ ಶಕ್ತಿ ಮತ್ತು ಆತ್ಮ ಸ್ಥೈರ್ಯವನ್ನು ನೀಡುತ್ತಾಳೆ. ಹಿಂದೆ ರಾಮಯಾಣದಲ್ಲಿ ರಾವಣನು ಕೂಡಾ ಪ್ರತ್ಯಂಗಿರ ದೇವಿಯ ಉಪಾಸನೆ ಮಾಡಿದ್ದನ್ನು ಎಂಬುದು ತಿಳಿದು ಬರುತ್ತದೆ.
          ಶ್ರೀ ಮಹಾ ಪ್ರತ್ಯಂಗಿರ ಮಾತೆಯ ಸ್ವರೂಪವು ಭೀಕರವಾದುದು. ಚತುರ್ಭುಜೆಯಾಗಿ ದೇವಿಯು ಕಪ್ಪು ಕಾಳಿಕೆಯ ರೂಪದಲ್ಲಿ ಇರುತ್ತಾಳೆ. ಸಹಸ್ರ ಸೂರ್ಯನ ಕಾಂತಿಯನ್ನು ಹೊಂದಿರುತ್ತಾಳೆ. ಗಾಢ ಕೆಂಪು ಬಣ್ಣದ ಕಂಗಳನ್ನು ಹೊಂದಿದ್ದು ಉಗ್ರ ಸಿಂಹದ ಮುಖವನ್ನು ಹೊಂದಿದ್ದಾಳೆ. ಒಂದು ಕೈಯ್ಯಲ್ಲಿ ತ್ರಿಶೂಲ ಹಾಗೇ ಕ್ರಮವಾಗಿ ಡಮರುಗ, ಹಾವು, ರುಂಡವನ್ನು ಧರಿಸಿದವಳಾಗಿದ್ದಾಳೆ. ರುಂಡಮಾಲೆಯನ್ನು ತನ್ನ ಮಾಲೆಯನ್ನಾಗಿ ಧಾರಣೆ ಮಾಡಿದವಳಾಗಿರುತ್ತಾಳೆ.
ಹೀಗೆ ಮಾತೆಯು ಶಿವನ ಮೂರನೇ ಕಣ್ಣಿನಿಂದ ಜನಿಸಿದವಳಾಗಿರುತ್ತಾಳೆ. ಇವಳು ಜನಿಸಿದಾಗ ಅತೀ ಉಗ್ರವಾದ ದೇವಿಯಾಗಿ ಜನಿಸಿದ್ದಾಳೆ. ಮಾತೆಯು ಅತೀ ಉಗ್ರಶಕ್ತಿಯಾಗಿದ್ದು ಮಾತೆಯನ್ನು ಉಪಾಸನೆ ಮಾಡುವವರಿಗೆ ದೇವಿಯು ಬೇಡಿದ್ದನ್ನು ನೀಡುತ್ತಾಳೆ.
ಹೀಗೆ ಇನ್ನೊಂದು ಉಲ್ಲೇಖದ ಪ್ರಕಾರ ಶ್ರೀ ಮಹಾವಿಷ್ಣುವು ಉಗ್ರನರಸಿಂಹ ಅವತಾರವನ್ನು ಧಾರಣೆ ಮಾಡಿದಾಗ ಮಹಾವಿಷ್ಣುವನ್ನು ಸಮಾಧಾನಿಸಿ ಶಾಂತ ರೂಪಕ್ಕೆ ತರುವಲ್ಲಿ ದೇವಾನುದೇವತೆಗಳು ವಿಫಲರಾದರು. ಮುಂದೆ ಪರಶಿವನು ಶರಭ (2 ದೊಡ್ಡ ರೆಕ್ಕೆ ಮತ್ತು ಮಾನವ ದೇಹದಲ್ಲಿ ಇರುವ ಒಂದು ಪಕ್ಷಿಯಾಗಿದೆ) ರೂಪವನ್ನು ತಾಳಿ ಮಹಾವಿಷ್ಣುವನ್ನು ಸಮಾಧಾನಗೊಳಿಸಿದನು. ಈ ಅವತಾರವನ್ನು ತಾಳಿದಾಗ ಆ ಎರಡು ರೆಕ್ಕೆಗಳು ಶೂಲಿನ ಮತ್ತು ಪ್ರತ್ಯಂಗಿರ ದೇವಿಯರಿಂದ ಆಗಿದೆ.
Sri Sharabeshwara
ಹೀಗೆ ಶರಭ ನರಸಿಂಹ ಸ್ವಾಮಿಯನ್ನು ಸಮಾಧಾನ ಮಾಡಲು ಪ್ರಯತ್ನಿಸಿದಾಗ ಮುಂದೆ ಶರಭೇಶ್ವರನು ಅಷ್ಟಮುಖವನ್ನು ಧಾರಣೆ ಮಾಡಿ ಗಂಡಬೇರುಂಡ ರೂಪ ತಾಳಿ ಮುಂದೆ ಉಗ್ರ ನರಸಿಂಹನ ರೂಪದಿಂದ ಉಗ್ರವಾದ ರೂಪಿಣಿಯಾಗಿ ಅವತರಿಸಿದಳು ಎಂದು ಹೇಳಲಾಗುತ್ತದೆ. ಹೀಗೆ ಮಾತೆಯು ಒಂದು ಉಗ್ರಶಕ್ತಿಯಾದರೂ ಮುಂದೆ ಮಹಾನ್ ತಾಂತ್ರಿಕ ದೇವಿಯಾಗಿದ್ದಾಳೆ. ಈ ಮಾತೆಯನ್ನು ಭಕ್ತಿ, ಶ್ರದ್ಧೆಗಳಿಂದ ಪೂಜೆ ಮಾಡಿದಲ್ಲಿ ಮಾತೆಯು ಒಲಿದು ಬರುತ್ತಾಳೆ.
ರಾಮಾಯಣದಲ್ಲಿ ಶ್ರೀ ರಾಮನ ವಿರುದ್ದ ಹೋರಾಡಲು ರಾವಣನು ಶ್ರೀ ಪ್ರತ್ಯಂಗಿರ ದೇವಿಯನ್ನು ಆರಾಧಿಸಿ ಉಪಾಸನೆ ಮಾಡಿ ಹೋರಾಟ ಮಾಡಿದನು ಎಂಬುದು ತಿಳಿದುಬರುತ್ತದೆ. ಮಾತೆಯು ಅತೀ ಉಗ್ರ ಸ್ವರೂಪಳು ಆದರೂ ಕೂಡಾ ಭಕ್ತರ ಪಾಲಿಗೆ ಶಾಂತಳೂ ಮತ್ತು ಮಂದಸ್ಮಿತಳೂ ಆಗಿ ಕಂಡು ಬರುತ್ತಾಳೆ. ಈ ಮಾತೆಯನ್ನು ಭದ್ರಕಾಳಿ ಎಂದೂ ಕೂಡಾ ಕರೆಯುತ್ತಾರೆ.
ಶ್ರೀ ಪ್ರತ್ಯಂಗಿರ ದೇವಿಯ ಕಥನವನ್ನು ಭಕ್ತಿಯಿಂದ ಓದಿದ ನಿಮಗೆಲ್ಲರಿಗೂ ಮಾತೆಯು ಸನ್ಮಂಗಳಗಳನ್ನು ಅನುಗ್ರಹಿಸಲಿ, ಸುಖ-ಸೌಭಾಗ್ಯಾಧಿಗಳನ್ನು ನೀಡಲಿ.

“ಶ್ರೀ ಪ್ರತ್ಯಂಗಿರ ಮಾತೆಯು ಸರ್ವರಿಗೂ ಸನ್ಮಂಗಳವನ್ನುಂಟು ಮಾಡಲಿ”