Drop Down Menus CSS Drop Down Menu #
>> Namaskaram..!! Welcome to Namma-Naadu.blogspot.com >> ಓದುಗ ಬಂದುಗಳಿಗೆ ಹೃದಯಪೂರ್ವಕ ನಮಸ್ಕಾರ!! ನಮ್ಮ-ನಾಡು ಅಂತರ್ಜಾಲ ಪುಟ ವೀಕ್ಷಕರು ನಮ್ಮನ್ನು ಇಲ್ಲಿಯವರೆಗೆ ಪ್ರೋತ್ಸಾಹಿಸಿ, ಅಭಿನಂದಿಸಿದ್ದೀರಿ. ಮುಂದೆಯೂ ಕೂಡಾ ಇದೇ ರೀತಿಯಲ್ಲಿ ನಮ್ಮೊಂದಿಗೆ ಜೊತೆಯಾಗಿದ್ದು, ನಮ್ಮ-ನಾಡಿನ ಸೊಗಡನ್ನು ಸಾರೋಣ... ಧನ್ಯವಾದಗಳೊಂದಿಗೆ : ರಾಘವ್ ಕೋಟೇಶ್ವರ. >> ನಮ್ಮ ಮುಂದಿನ ಲೇಕನಗಳು : • ಶ್ರೀ ಚಿಕ್ಕಮ್ಮ ದೇವಸ್ಥಾನ, ಚಿಕನ್ಸಾಲ್,ಕುಂದಾಪುರ • ಶ್ರೀ ಪಂಚದುರ್ಗಾಪರಮೇಶ್ವರೀ ದೇವಸ್ಥಾನ,ಮಠದಬೆಟ್ಟು. ಕೋಟೇಶ್ವರ. >> ಇನ್ನೂ ಹಲವಾರು ದೇವಾಲಯ, ದೈವಾಲಯಗಳ ಮಾಹಿತಿಗಾಗಿ ನಿರೀಕ್ಷಿಸಿ..' >> ಪ್ರಕಟವಾದ ಹೊಸ ಲೇಖನಗಳು : •   ಶ್ರೀ ಅಬ್ಬಗ-ದಾರಗ ದೇವಸ್ಥಾನ, ಮಣಿಕಲ್ಲು   •   ಶ್ರೀ ಕನ್ನಿಕಾ ದುರ್ಗಾ, ಜಪ್ತಿ  • ಶ್ರೀ ಮಾರಿಯಮ್ಮ, ಕಾಪು.....

Showing posts with label Sri Veerabadra Swamy. Show all posts
Showing posts with label Sri Veerabadra Swamy. Show all posts
ಶ್ರೀ ಶಿವಸುತ ವೀರಭದ್ರ ಸ್ವಾಮಿ ಚರಿತ್ರೆ.
Shree Veerabadra Swamy Charithre.

Sri Veerabadra Swamy
ಪುರಾಣ ಕಾಲದಲ್ಲಿ ಅಂದರೆ ಭಾಗವತ ಪುರಾಣದಲ್ಲಿ ತಿಳಿಸಿರುವಂತೆ ಶ್ರೀ ವೀರಭದ್ರ ಸ್ವಾಮಿಯು(Sri Veerabadra Swamy) ಪರಶಿವನ ಮಾನಸಪುತ್ರನೆಂಬುದಾಗಿ ತಿಳಿಯುತ್ತದೆ. ಶ್ರೀ ವೀರಭದ್ರಸ್ವಾಮಿಯು ಪರಶಿವನ ಜಟೆಯಿಂದ ಉದ್ಭವವಾಗಿ ಪರಶಿವನಷ್ಠೇ ಶಕ್ತಿಯನ್ನು ಹೊಂದಿ ಬಂದ ದೇವನಾಗಿದ್ದಾನೆ. ಪರಶಿವನನ ಸತಿ ದಕ್ಷಪ್ರಜಾಪತಿಯ ಪುತ್ರಿಯಾಗಿ ಅವತರಿಸಿದ ಪರಾಶಕ್ತಿಯಾದ ಪಾರ್ವತಿ ದಾಕ್ಷಾಯಿಣಿಯಾಗಿ ಪರಶಿವನನ್ನು ವರಿಸಿದಳು. ಹೀಗೆ ಪ್ರಜಾಪತಿ ದಕ್ಷನು ಒಮ್ಮೆ ದೇವಲೋಕಕ್ಕೆ ಬಂದಾಗ ಬ್ರಹ್ಮ-ವಿಷ್ಣು ಗೌರವ ಸೂಚಿಸುತ್ತಾರೆ. ಆದರೆ ಲೋಕದ ತಂದೆಯಾದ ಪರಶಿವನು ಧ್ಯಾನಮಗ್ನನಾಗಿರುತ್ತಾನೆ. ಆಗ ಪ್ರಜಾಪತಿ ದಕ್ಷನಿಗೆ ಸಿಟ್ಟು ಬರುತ್ತದೆ. ದಕ್ಷನ ಅಹಂಕಾರ -ಸಿಟ್ಟಿನ ಹಿಂದೆ ಯಾವುದೋ ಒಂದು ಶಕ್ತಿಯು ಉದಿಸುವ ಹಾಗೂ ಯಾವುದೋ ಸನ್ನಿವೇಶ ಇದ್ದಿರುತ್ತದೆ.

ಹೀಗೆ ತನ್ನ ಅಳಿಯನಾದ ಪರಶಿವನು ತನಗೆ ಅಗೌರವತೋರಿದನೆಂದು ಅಹಂಕಾರದಿಂದ ಕುಪಿತನಾದ ದಕ್ಷ ಒಂದು ಮಹಾಯಾಗವನ್ನು ಮಾಡಲು ನಿರ್ಧರಿಸಿ ಲೋಕಪಾಲಕನಾದ ಪರಶಿವನನ್ನು ಹೊರತುಪಡಿಸಿ ಇನ್ನುಳಿದ ದೇವಾನುದೇವತೆಗಳನ್ನು ಯಾಗಕ್ಕೆ ಕರೆಯುತ್ತಾನೆ. ಆದರೆ ದಕ್ಷನ ಸಭೆಯಲ್ಲಿ ಪರಮೇಶ್ವರನು ಇಲ್ಲದಿದ್ದನ್ನು ಕಂಡು ದೇವಾನು ದೇವತೆಗಳು ದಕ್ಷನಿಗೆ ಪರಶಿವನು ಇಲ್ಲದ ಯಾಗ ಪೂರ್ಣವಾಗಲಾರದು. ಇದರಲ್ಲಿ ಪರಶಿವನಿಗೆ ಹವಿರ್ಭಾಗ ಸಲ್ಲದೆ ಇದ್ದರೆ ಯಜ್ಞದ ಫಲ ಸಿಗಲಾರದು ಎಂದು ತಿಳಿಹೇಳಿದರು ದಕ್ಷನು ತನ್ನ ಅಳಿಯನನ್ನು ಕೀಳಾಗಿ ಕಂಡು ದೇವಾದಿ ದೇವನನ್ನು ಹೀಗಳೆಯುತ್ತಾನೆ. ಹಾಗೆ ಅಹಂಕಾರ ಮದದಿಂದ ಪರಮೇಶನ ಬಗ್ಗೆ ತುಚ್ಛವಾಗಿ ಮಾತನಾಡುತ್ತಾನೆ.
ದಾಕ್ಷಾಯಿಣಿ ಯಜ್ಞಕುಂಡದಲ್ಲಿ ಹಾರಿದುದು
          ಹೀಗೆ ಈ ವಿಚಾರ ದಾಕ್ಷಾಯಿಣಿಗೆ ತಿಳಿದು ಆದಿಶಕ್ತಿಯಾದ ಮಹಾದೇವಿ ಕುಪಿತಳಾಗಿ ಪರಮೇಶ್ವರನಿಲ್ಲದ ಯಜ್ಞ ಹೇಗೆ ತಾನೇ ತಾನೇ ನಡೆದೀತು ಎಂದು ಹೇಳುತ್ತಾಳೆ. ಪರಮೇಶನನ್ನು ಯಜ್ಞಕ್ಕೆ ಹೋಗೊಣವೆಂದು ಹೇಳುತ್ತಾಳೆ. ಪರಶಿವ ಅದಕ್ಕೆ ತಾನು ಕರೆಯದೆ ಎಲ್ಲಿಗೂ ಬರಲಾರೇನು ದೇವಿ, ನೀನು ಹೋಗಿ ಬಾ ಎಂದು ಹೇಳುತ್ತಾನೆ. ಆದರೆ ಮಹಾದೇವಿ ತನ್ನ ತಂದೆಯಲ್ಲಿ ನ್ಯಾಯ ಕೇಳುವ ಸಲುವಾಗಿ ದಕ್ಷನ ಯಜ್ಞಕ್ಕೆ ಹೋಗುತ್ತಾಳೆ. ಅಲ್ಲಿಗೆ ತೆರಳಿದ ಆದಿಶಕ್ತಿಯಾದ ಮಹಾದೇವಿಯನ್ನು ಕಂಡು ದೇವಾನುದೇವತೆಗಳು ವಂದಿಸುತ್ತಾರೆ. ಆದರೆ ದಕ್ಷನು ಕಂಡುರೂ -ಕಾಣದಂತೆ ಮಾಡುತ್ತಾನೆ. ಅಲ್ಲದೆ ತನ್ನ ತಂದೆಯಲ್ಲಿ ನ್ಯಾಯವನ್ನು ಕೇಳಿದಾಗ ದಕ್ಷನು ನಿನ್ನ ಪತಿಯು ಬೋಳೆಶಂಕರ, ಶ್ಮಶಾನವಾಸಿ, ಸದಾ ಕೀಳು ಜಂತುಗಳೊಂದಿಗೆ ವಾಸಿಸುವ ಭಿಕ್ಷುಕ ಎಂಬುದಾಗಿ ಕೀಳಾಗಿ ಹೀಗಳೆಯುತ್ತಾನೆ. ಈ ಎಲ್ಲಾ ಮಾತಿನಿಂದ ಅಗ್ನಿಯಂತೆ ಕುಪಿತವಾದ ಆದಿಶಕ್ತಿ ಶಿವನಸತಿ ದಾಕ್ಷಾಯಣಿಯು ನನ್ನ ಪತಿಯಿಲ್ಲದೆ ಹೇಗೆ ತಾನೇ ಯಜ್ಞ ನಡೆದೀತು ಎಂದು ನುಡಿತು, ಈ ಯಜ್ಞವನ್ನು ನಾನು ನಾಶಪಡಿಸುವೆ ಎಂದು ಶಪಥಮಾಡಿ ಯಜ್ಞಕುಂಡ ದಲ್ಲಿ ಧುಮುಖಿ ದಾಕ್ಷಾಯಣಿಯು ಮಹಾಸತಿಯಾಗುತ್ತಾಳೆ.
          ಹೀಗೆ ಈ ವಿಚಾರವನ್ನು ತಿಳಿದ ಪರಶಿವನು ಒಮ್ಮೆಲೇ ಕುಪಿತಗೊಂಡು ತಾಂಡವ ನೃತ್ಯವನ್ನಾಡುತ್ತಾನೆ. ಪರಶಿವನನ್ನು ಅಗಲಿದ ಸತಿಯ ವೇದನೆಯಿಂದ ಹಾಗೂ ಪರಮೇಶನ ಉಗ್ರದ ಕೋಪದಿಂದ ಸಮಸ್ತ ಜಗತ್ತು ಗಡ-ಗಡನೆ ನಡುಗುತ್ತದೆ. ಅದೇ ಕೋಪಾಗ್ನಿಯೊಂದಿಗೆ ಪರಶಿವನು ತನ್ನ ಜಟೆಯನ್ನು ನೆಲಕ್ಕೆ ಬಡಿದಾಗ ಒಂದು ಕಡೆಯಿಂದ ವೀರಭದ್ರನು ಇನ್ನೊಂದು ಕಡೆಯಿಂದ ಭದ್ರಕಾಳಿಯೂ ಜನಿಸಿ ಬರುತ್ತಾರೆ. ಜಟೆಯಿಂದ ಉದ್ಭವಿಸಿ ಬಂದ ವೀರಭದ್ರನು ಅತ್ಯುಗ್ರತೆಯಿಂದ ಹಲವಾರು ಹಸ್ತಗಳನ್ನು ಚಾಚಿ ಕಪಾಲ, ಖಡ್ಗ, ಡಮರು, ಕತ್ತಿ, ಬಿಲ್ಲು, ಬಾಣ ಇತ್ಯಾದಿಗಳಿಂದ ಅಲಂಕೃತನಾಗಿ ಕೋರೆಹಲ್ಲು, ದೊಡ್ಡದಾದ ಕಣ್ಣುಗಳನ್ನು ಹೊಂದಿ ಕ್ರೂರ ರೂಪದಿಂದ ಆರ್ಭಟಿಸುತ್ತಾ ತಂದೆಯೇ ನನ್ನ ಹುಟ್ಟಿಗೆ ಕಾರಣವೇನು ಎಚಿದು ಕೇಳುತ್ತಾನೆ. ಅದಕ್ಕೆ ಪರಶಿವನು ನಿನಗೆ ನಾನು ವೀರಭದ್ರ ಎಂಬ ನಾಮವನ್ನು ನೀಡುತ್ತೇನೆ. ನಿನ್ನ ತಾಯಿಯಾದ ನನ್ನ ಸತಿ ದಕ್ಷನ ಯಜ್ಞವನ್ನು ಹಾರಿ ವೀರಸತಿಯಾಗಿದ್ದಾಳೆ. ಆ ಮಹಾ ಅಹಂಕಾರಿ ದಕ್ಷನ ರುಂಡವನ್ನು ಕಡಿದು ತಾ ಎಂದು ಶಿವನು ಹೇಳುತ್ತಾನೆ.
ಶ್ರೀ ವೀರಭದ್ರ ಮತ್ತು ಭದ್ರಕಾಳಿಯ ಉದ್ಭವ
          ಹೀಗೆ ತಂದೆಯ ಅಪ್ಪಣೆಯನ್ನು ಪಡೆದು ವೀರಭದ್ರನು ತನ್ನ ಪರಿವಾರ ಶಕ್ತಿಯೊಂದಿಗೆ ಹೊರಡುತ್ತಾನೆ. ಅಂತೆಯೇ ಭದ್ರಕಾಳಿಯೂ ಕೂಡಾ ವೀರಭದ್ರನ ಜೊತೆಯಾಗಿ ತೆರಳುತ್ತಾಳೆ. ವೀರಭದ್ರನೊಂದಿಗೆ ಜನಿಸಿದ ಭದ್ರಕಾಳಿಯನ್ನು ವೀರಭದ್ರನ ಪ್ರೇಯಸಿ ಎಂಬುದಾಗಿ ಪುರಾಣ ಹೇಳುತ್ತದೆ. ಹೀಗೆ ಅಪಾರಶಕ್ತಿಯನ್ನು ಪಡೆದು ವೀರಭದ್ರ ಮುನ್ನುಗ್ಗಿ ಸಾಗಲು ದಕ್ಷನ ಸಭೆಯು ಕಂಗಾಲಾಗುತ್ತದೆ. ವೀರಭದ್ರನನ್ನು ಕಂಡು ದೇವಗಣಗಳ ಸಭೆಯು ಹೆದರಿ ಚಲ್ಲಾಪಿಲ್ಲಿಯಾಗುತ್ತದೆ. ಹೀಗೆ ಈ ಭಯಂಕರ ಶಕ್ತಿ ಯಾವ್ಯದೆಂದು ತಿಳಿಯದೇ ಬ್ರಹ್ಮ-ವಿಷ್ಣು ಕೂಡಾ ಕಂಗಾಲಾಗುತ್ತಾರೆ. ವಿಷ್ಣುವು ತನ್ನ ಸುದರ್ಶನ ಚಕ್ರವನ್ನು ವೀರಭದ್ರನ ಮೇಲೆ ಪ್ರಯೋಗ ಮಾಡಲು ಅದನ್ನು ವೀರಭದ್ರ ಪುಡಿ-ಪುಡಿ ಮಾಡುತ್ತಾನೆ. ಹಾಗೇ ಸಾಮಾನ್ಯರು ಸುದರ್ಶನ ಚಕ್ರವನ್ನು ಎದುರಿಸಲಾಗುದು ಎಂದು ಅರಿತ ವಿಷ್ಣುವು ಚಿಂತಾಮಗ್ನನಾಗುತ್ತಾನೆ. ಮುಂದೆ ಈಶನ ಮಾಯೆಯನ್ನು ಅರಿಯುತ್ತಾನೆ. ಹೀಗೆ ಮುಂದುವರೆದು ವೀರಭದ್ರನು ದಕ್ಷನ ರುಂಡವನ್ನು ಕಡಿದು ಹಾಕುತ್ತಾನೆ. ಅಂತೆಯೇ ಅದನ್ನು ತನ್ನ ತಂದೆಯಾದ ದಕ್ಷನಲ್ಲಿ ತರುತ್ತಾನೆ.
ಶ್ರೀ ವೀರಭದ್ರ ಮತ್ತು ಭದ್ರಕಾಳಿ ದೇವತೆಗಳೊಂದಿಗೆ ಭೀಕರ ಯುದ್ದದಲ್ಲಿ ತೊಡಗಿರುವುದು
          ಈ ರೀತಿಯಾಗಿ ದಕ್ಷನ ರುಂಡವನ್ನು ಕಡಿದಿದ್ದನ್ನು ಕಂಡು ಬ್ರಹ್ಮನು ದಕ್ಷನ ಪ್ರಾಣವನ್ನು ಉಳಿಸುವಂತೆ ಪರಶಿವನಲ್ಲಿ ಬೇಡಿಕೊಳ್ಳುತ್ತಾನೆ. ಆಗ ಪರಶಿವನು ಬ್ರಹ್ಮನ ಕೂಗಿಗೆ ಓಗೊಟ್ಟು ಅವನ ಪ್ರಾಣವನ್ನು ಉಳಿಸುತ್ತಾನೆ. ಮುಂದೆ ದಕ್ಷನ ಅಹಂಕಾರ ಇಳಿದು ತನ್ನ ತಪ್ಪಿನ ಅರಿವಾಗುತ್ತದೆ. ಎಲ್ಲಾ ದೇವಗಣಂಗಳೂ ಪರಶಿವನಲ್ಲಿ ಕ್ಷಮೆಯನ್ನು ಯಾಚಿಸುತ್ತಾರೆ. ಮುಂದೆ ಶಿವನು ಶಾಂತನಾಗಿ ಎಲ್ಲರಿಗೂ ಅಭಯವನ್ನು ನೀಡುತ್ತಾನೆ.
ಶ್ರೀ ವೀರಭದ್ರನ ಭಿಕರತೆಯ ಚಿತ್ರ
          ಹೀಗೆ ಸತಿಯ ವಿರಕ್ತಿ ಕಾಡಲು ಪರಶಿವ ಅರ್ದಬೆಂದ ಸತಿಯ ದೇಹವನ್ನು ಹೊತ್ತು ತಿರುಗುತ್ತಾನೆ. ಇದನ್ನು ಕಂಡ ದೇವಾನುದೇವತೆಗಳು ಮಹಾವಿಷ್ಣುವಿನಲ್ಲಿ ಮೊರೆ ಹೋಗುತ್ತಾರೆ. ಆಗ ಮಹಾವಿಷ್ಣು ಲೋಕಕಲ್ಯಾಣಾರ್ತವಾಗಿ ತನ್ನ ಸುದರ್ಶನ ಚಕ್ರದಿಂದ ಪರಶಿವೆಯಾದ ಆದಿಶಕ್ತಿಯ ದೇಹವನ್ನು ಚೂರು-ಚೂರು ಮಾಡುತ್ತಾನೆ. ಹೀಗೆ ಆದಿಶಕ್ತಿಯ ದೇಹವು 108 ತುಂಡುಗಳಾಗಿ ಭರತಖಂಡದ ಉದ್ದಗಲಕ್ಕೂ ಬೀಳುತ್ತದೆ. ಇದೇ ಇಂದು ಮಹಾನ್ ಶಕ್ತಿ ಪೀಠಗಳಾಗಿ ಕಂಗೊಳಿಸುತ್ತಾ ಇದೆ.
          ಹೀಗೆ ಮೇಲಿನ ಪುರಾಣಾನುಸಾರ ತನ್ನ ಸತಿಯ ಮರಣದಿಂದ ವಿರಕ್ತನಾದ ಪರಶಿವನ ಜಟೆಯಿಂದ ಜನಿಸಿಬಂದವನೇ ಶ್ರೀ ವೀರಭದ್ರಸ್ವಾಮಿ. ಮುಂದೆ ದಕ್ಷ ಸಂಹಾರವಾದ ನಂತರ ವೀರಭದ್ರನು ಘಟ್ಟದ ಬಾಳೆಹೊನ್ನೂರು ಎಂಬಲ್ಲಿ ನೆಲೆಸಿದ ಎಂಬುದು ಐತಿಹ್ಯ.
          ಹೀಗೆ ಮಹಾದೇವನ ಮಾನಸ ಕುವರ ಶ್ರೀ ವೀರಭದ್ರ ಸ್ವಾಮಿಯ ಚರಿತೆಯನ್ನು ಮನದುಂಬಿ ಓದಿದ ನಿಮಗೂ ನಿಮ್ಮ ಕುಟುಂಬದವರಿಗೂ ಭೂತ-ಪ್ರೇತ ಭಾದೆ ನಿವಾರಕನಾದ ಸಿರಿಗಳೊಂದಿಗೆ ಅಲಡೆಯಲ್ಲೂ, ಕುಮಾರರೊಂದಿಗೂ ನೆಲೆಸಿ ಇರುವ ದೇವನು ಸನ್ಮಂಗಾಲಾಧಿಗಳನ್ನು ನೀಡಲಿ.