Drop Down Menus CSS Drop Down Menu #
>> Namaskaram..!! Welcome to Namma-Naadu.blogspot.com >> ಓದುಗ ಬಂದುಗಳಿಗೆ ಹೃದಯಪೂರ್ವಕ ನಮಸ್ಕಾರ!! ನಮ್ಮ-ನಾಡು ಅಂತರ್ಜಾಲ ಪುಟ ವೀಕ್ಷಕರು ನಮ್ಮನ್ನು ಇಲ್ಲಿಯವರೆಗೆ ಪ್ರೋತ್ಸಾಹಿಸಿ, ಅಭಿನಂದಿಸಿದ್ದೀರಿ. ಮುಂದೆಯೂ ಕೂಡಾ ಇದೇ ರೀತಿಯಲ್ಲಿ ನಮ್ಮೊಂದಿಗೆ ಜೊತೆಯಾಗಿದ್ದು, ನಮ್ಮ-ನಾಡಿನ ಸೊಗಡನ್ನು ಸಾರೋಣ... ಧನ್ಯವಾದಗಳೊಂದಿಗೆ : ರಾಘವ್ ಕೋಟೇಶ್ವರ. >> ನಮ್ಮ ಮುಂದಿನ ಲೇಕನಗಳು : • ಶ್ರೀ ಚಿಕ್ಕಮ್ಮ ದೇವಸ್ಥಾನ, ಚಿಕನ್ಸಾಲ್,ಕುಂದಾಪುರ • ಶ್ರೀ ಪಂಚದುರ್ಗಾಪರಮೇಶ್ವರೀ ದೇವಸ್ಥಾನ,ಮಠದಬೆಟ್ಟು. ಕೋಟೇಶ್ವರ. >> ಇನ್ನೂ ಹಲವಾರು ದೇವಾಲಯ, ದೈವಾಲಯಗಳ ಮಾಹಿತಿಗಾಗಿ ನಿರೀಕ್ಷಿಸಿ..' >> ಪ್ರಕಟವಾದ ಹೊಸ ಲೇಖನಗಳು : •   ಶ್ರೀ ಅಬ್ಬಗ-ದಾರಗ ದೇವಸ್ಥಾನ, ಮಣಿಕಲ್ಲು   •   ಶ್ರೀ ಕನ್ನಿಕಾ ದುರ್ಗಾ, ಜಪ್ತಿ  • ಶ್ರೀ ಮಾರಿಯಮ್ಮ, ಕಾಪು.....

Showing posts with label Sri Bennekudru Kulamahasthri. Show all posts
Showing posts with label Sri Bennekudru Kulamahasthri. Show all posts

Sri Bennekudru Kulamasthri

ಶ್ರೀ ಕುಲಮಹಾಸ್ತ್ರೀ ಅಮ್ಮನವರ ದೇವಸ್ಥಾನ, ಬೆಣ್ಣೆಕುದ್ರು, ಉಡುಪಿ|
Shree Kulamahasthree Temple, Bennekudru, Udupi.

Shree Kulamahasthree Ammanavaru, bennekudru, Udupi

|| ಬೆಣ್ಣೆಕುದ್ರು ನಿವಾಸಿನಿಮ್, ಪಂಚಶಕ್ತಿ ಸ್ವರೂಪಿಣಿಮ್ ;
ಸಮಸ್ತ ಮೋಗವೀರ ಕುಲದೇವೀಮ್, ವಂದೇ ಶ್ರೀ ಕುಲಮಹಾಸ್ತ್ರೀ ನಮಸ್ತುಭ್ಯಂ ||
            ಮೊಗವೀರ ಸಮಾಜದ ಆರಾಧ್ಯ ದೇವಿಯಾಗಿಯೂ, ನಂಬಿ ಬಂದವರಿಗೆ ಬೆಂಬಿಡದೆ ಕಾಯುವ ಮಾತೆಯಾಗಿಯೂ; ಭವ್ಯವು-ದಿವ್ಯವೂ ಆದಂತಹ ಬಾರ್ಕೂರು ಸಿಮೇಯ ‘ಬೆಣ್ಣೆಕುದ್ರು(Bennekudru)’ ವಿನಲ್ಲಿ ನೆಲೆಸಿ ನಿಂತ ಮಾಹದೇವಿಯೇ ಶ್ರೀ ಕುಲಮಹಾಸ್ತ್ರೀ ಅಮ್ಮನವರು. ಶ್ರೀ ದೇವಿ ಮೊಗವೀರ ಕುಲಬಾಂಧವರ ಕುಲಮಾತೆಯಾಗಿ ಆರಾದಿಸಲ್ಪಡುತ್ತಾ ಇದ್ದಾಳೆ. ಕುಲಬಾಂಧವರು ಒಂದಾಗಿ ಮಾತೆಯ ಆಲಯವನ್ನು ಮಹೊನ್ನತವಾಗಿ ಮತ್ತು ಕಾರಣೀಕವಾಗಿ ನಿರ್ಮಿಸುವಲ್ಲಿ ಒಂದಾಗಿ ಶ್ರಮಿಸಿದ್ದಾರೆ. ಮಾತೆಯು ನೆಲೆಸಿದ ಪುಣ್ಯಭೂಮಿಯು ಝುಳು-ಝುಳು ಹರಿಯುವ ನದಿ ತೀರದಲ್ಲಿ ರಮ್ಯ ಮನೋಹರವಾಗಿ ಕಂಗೊಳಿಸುತ್ತಿದೆ.
ಶ್ರೀ ಕುಲಮಹಾಸ್ತ್ರೀ ಅಮ್ಮನವರು
ಬೆಣ್ಣೆಕುದ್ರು ದೇವಾಲಯದ ಹೊರನೋಟ
Outer view of Bennekudru Temple
         ವಿಜಯನಗರದ ಅರಸರ ಕಾಲಕ್ಕಿಂತಲೂ ಪೂರ್ವದಲ್ಲಿ ಬೆಣ್ಣೆಕುದ್ರು, ಬಾರ್ಕೂರು ಸಂಸ್ಥಾನದ ಸೇವಾ ಠಾಣೆಯಗಿತ್ತು. ಅಂತೆಯೇ ಸೇನಾಪತಿಗಳು ಆರಾಧಿಸಿಕೊಂಡು ಬರುತ್ತಿದ್ದ ವೀರಭದ್ರ ದೇವಸ್ಥಾನವೂ ಮೂಲದಲ್ಲಿತ್ತು ಎನ್ನುವ ಮಾಹಿತಿ ಸ್ಥಳ ಪುರಾಣದಿಂದ ತಿಳಿದುಬರುತ್ತದೆ. ಉತ್ತರದಿಕ್ಕಿನಿಂದ ಆಗಮಿಸಿದ ಮೊಗವೀರ ಸಮಾಜದ ತಪಸ್ವಿನಿ ಮಹಿಳೆಯೋರ್ವಳು ತನ್ನ ದಿವ್ಯ ಶಕ್ತಿಯಿಂದ ಜನ ಸಾಮಾನ್ಯರ ನೋವು ದು:ಖಗಳನ್ನು ಸಂತೈಸುತ್ತಾ ಜನಪ್ರಿಯಳಾದಳು. ಮುಖ್ಯವಾಗಿ ಸೇನಾಧಿಪತಿಯು ಯಾವುದೋ ಗಂಡಾಂತರದಲ್ಲಿ ಸಿಲುಕಿಕೊಂಡಾಗ ತನ್ನ ಪವಾಡದಿಂದ ಅವನನ್ನು ಪಾರುಮಾಡಿ ರಾಜಮರ್ಯಾದೆಗೆ ಪಾತ್ರಳಾದಳು ಎನ್ನುವುದು ಪ್ರತೀತಿ.
       ಆ ತಪಸ್ವಿನಿಯ ಸಹೋದರ ಗುರು ದಂಪತಿಗಳು ತಮ್ಮ ತಪೋಃಶಕ್ತಿಯಿಂದ ಸಿದ್ಧಿಸಿದ ಶ್ರೀದೇವಿಯ ಅನುಗೃಹದೊಂದಿಗೆ ಇಲ್ಲಿಗೆ ಆಗಮಿಸಿದಾಗ ಅವರುಗಳಿಗೂ ರಾಜ ರಾಜಮರ್ಯಾದೆಯ ಸ್ವಾಗತ ಲಭಿಸಿತು. ಈ ಗುರುದಂಪತಿಗಳು ತಪಸ್ವಿನಿಯೊಂದಿಗೆ ನೆಲೆನಿಂತ ಮೂಲ ಮನೆಯೇ ಗುರುಮಠ. ತದನಂತರದಲ್ಲಿ ಸೇನಾಧಿಪತಿ ಹಾಗೂ ಕರಾವಳಿಯ ಮೊಗವೀರರ ಬೇಡಿಕೆಯಂತೆ ಗುರುದಂಪತಿಗಳು ಸ್ವತಃ ಶ್ರೀ ವೀರಭದ್ರ ದೇವರ ಸನಿಹದ ಪೀಠದಲ್ಲಿ ಜ್ಯೋತಿ ಬೆಳಗಿಸುವ ಮೂಲಕ ಪ್ರತಿಷ್ಠಾಪಿಸಿದ ದೇವಿಯೇ ಪಂಚಾಂಶಗಳ ಸಂಭೂತೆಯಾದ ಶ್ರೀ ಕುಲಮಹಾಸ್ತ್ರೀ ಅಮ್ಮನವರು ಎನ್ನುವುದು ಪ್ರತೀತಿ. ಆ ತಪಸ್ವಿನಿ ಮಹಿಳೆ ಬೇರಾರು ಆಗಿರದೇ ಈಗ ಪೂಜಿಸಲ್ಪಡುತ್ತಿರುವ ಅಜ್ಜಮ್ಮ ದೇವರು ಎನ್ನುವುದು ಕೆಲವರಿಗೆ ತಿಳಿದಿರಲಿಕ್ಕಿಲ್ಲ.
              ಅಂದಿನಿಂದ ಈ ದೇವಸ್ಥಾನದಲ್ಲಿ ಶ್ರೀ ಕುಲ ಮಹಾಸ್ತ್ರೀ ಅಮ್ಮನವರನ್ನು ಪ್ರಧಾನ ದೇವಿಯಾಗಿ ಮೊಗವೀರರು ಆರಾಧಿಸಿಕೊಂಡು ಬಂದರೆನ್ನುವುದು ಸ್ಥಳಪುರಾಣದಿಂದ ತಿಳಿದು ಬರುತ್ತದೆ. ಶ್ರೀಕುಲ ಮಹಾಸ್ತ್ರೀ ಅಮ್ಮನವರನ್ನು ಪ್ರತಿಷ್ಠಾಪಿಸಿದ ಗುರುಗಳಾದ ಶ್ರೀ ಮಂಗಳ ಪೂಜಾರ್ಯರು ನಮ್ಮ ಸಮಾಜದ ಕುಲಗುರುಗಳಾಗಿದ್ದು ಶ್ರೇಷ್ಠ ಗುರುಪರಂಪರೆಗೆ ಕಾರಣೀಭೂತರಾದರು. ಅಂದು ಬೆಳಗಿಸಿದ ಶ್ರೀಕುಲಮಹಾಸ್ತ್ರೀ ದೇವಿಯ ಜ್ಯೋತಿಯು ನಂದಾದೀಪವಾಗಿ ಬೆಳಗಬೇಕೆಂದು ಪ್ರತೀ ಗುಡಿಯಿಂದ ವಾರ್ಷಿಕ ದೀಪ ಕಾಣಿಕೆ ಸಂಗ್ರಹಿಸುವ ಪರಿಪಾಠ ಮೂಲಗುರುಗಳ ಕಾಲದಿಂದಲೂ ಬಂದ ಪದ್ಧತಿ.
          ಶ್ರೀಕುಲಮಹಾಸ್ತ್ರೀಯು ಪಂಚ ಶಕ್ತಿಯ ಅಂಶಗಳ ದೈವಸ್ವರೂಪಿಯಾಗಿದ್ದು ಅನ್ನಪೂರ್ಣ, ಭದ್ರಕಾಳಿ, ಮಾರಿಯಮ್ಮ , ದುರ್ಗೆ ಮತ್ತು ಪ್ರತಿಬಿಂಬ ಸ್ವರೂಪಿಣಿಯರ ಸಮಾಗಮವಾಗಿದೆ. ಅಂತೆಯೇ ವೀರಭದ್ರ ದೇವರೂ ಕೂಡಾ ನಾಗ, ಬ್ರಹ್ಮ, ರಕ್ತೇಶ್ವರಿ , ನಂದಿ ಹಾಗೂ ಕ್ಷೇತ್ರಪಾಲರನ್ನೊಳಗೊಂಡ ಪಂಚದೈವಿಕ ಸ್ಥಾನವಾಗಿದ್ದು ಬಹುಕಾರಣಿಕವಾಗಲು ಕಾರಣವಾಗಿರಬಹುದು. ಶ್ರೀಕುಲ ಮಹಾಸ್ತ್ರೀಯನ್ನು ಕುಲಗುರುಗಳೊಂದಿಗೆ ಋಷಿಮುನಿಗಳು ಆರಾಧಿಸಿಕೊಂಡು ಇಲ್ಲಿ ಸಾನಿಧ್ಯಪಡಕೊಂಡ ಕುರುಹು ಇದೆ.
ಇಲ್ಲಿರುವ ಪರಿವಾರ ದೈವಗಳು ಶ್ರೀಕುಲ ಮಹಾಸ್ತ್ರೀಯೊಂದಿಗೆ ಪ್ರತಿಷ್ಠಾಪಿಸಲ್ಪಟ್ಟಿವೆ ಎನ್ನುವುದು ತಿಳಿದುಬರುತ್ತದೆ. ಈ ದೇವಸ್ತಾನದಲ್ಲಿನ ಪ್ರತಿಷ್ಠಾ ವಿಧಿಯು ವಿಶಿಷ್ಠ ಪರಂಪರೆಯದಾಗಿದ್ದು ಪೀಠ ಮತ್ತು ಬಿಂಬ ಪ್ರತಿಷ್ಠೆಯನ್ನು ಕಾಣಬಹುದಾಗಿದೆ. ವಿಗ್ರಹಾರಾಧನೆ ತೀರಾ ಇತ್ತೀಚಿನ ಬೆಳವಣಿಗೆಯೆಂದು ತಿಳಿದುಬರುತ್ತದೆ. ಈಗ ಇರುವ ವಿಗ್ರಹದ ಹಿಂದಿರುವ ಬೃಹದಾಕಾರದ ಕನ್ನಡಿ ಭಕ್ತನ ಪ್ರತಿಬಿಂಬದಲ್ಲಿ ದೇವಿ ಸ್ವರೂಪವನ್ನು ಕಂಡುಕೊಳ್ಳುವ ವಿಶಿಷ್ಠ ತೆರನಾದ ಭಕ್ತಿಗಾಗಿ.
          ಗುರುಮಠದಲ್ಲಿ ಕುಲಗುರುಗಳ ಪಟ್ಟದ ದೇವರಾದ ನಂದಿ ಅಥವಾ ಹಾಯ್ಗುಳಿ ಪ್ರಧಾನ ದೇವರಾಗಿದ್ದು, ಗುರುಪತ್ನಿಯ ಪಟ್ಟದ ದೇವರಾದ ನವದುರ್ಗೆ ಪ್ರಧಾನವಾಗಿದ್ದು, ಇಲ್ಲಿಯೂ ದೈನಂದಿನ ಪೂಜಾವಿಧಿ ನಡೆಯುತಿತ್ತು. ಗುರುಪತ್ನಿಯನ್ನು ಸರ್ವೇಶ್ರೀ ಎನ್ನುವ ಗೌರವ ಸಂಭೋದನೆಯಿಂದ ಕರೆಯುತ್ತಿದ್ದರು. ನವರಾತ್ರಿಯ ಕಾಲದಲ್ಲಿ ನವದುರ್ಗೆಗೆ ವಿಶಿಷ್ಠವಾದ ಪೂಜೆ ನಡೆಯುತ್ತಿದ್ದು, ನಮ್ಮ ಸಮಾಜದ ಮಹಿಳೆಯರು ಸರ್ವೇಶ್ರೀ ಅಮ್ಮನವರ ನೇತೃತ್ವದಲ್ಲಿ ಈ ಪೂಜಾ ಕಾರ್ಯಗಳಲ್ಲಿ ಶೃದ್ಧಾ ಭಕ್ತಿಯಿಂದ ಭಾಗಿಯಾಗುತ್ತಿದ್ದರು. ಶ್ರೀಕುಲಮಹಾಸ್ತ್ರೀಯ ವಾರ್ಷಿಕ ಉತ್ಸವದಲ್ಲಿ ಬಾಳ ಭಂಡಾರ ಗುರುಮಠದಿಂದ ಹೊರಡುವ ಸಂಪ್ರದಾಯ ರೂಢಿಯಲ್ಲಿದ್ದು, ಇಂದಿಗೂ ಅನುಸರಿಸಲಾಗುತ್ತಿದೆ. ವೆಂಕಟರಮಣ ಮೂಲವಿಗ್ರಹ ಬಹಳ ಹಿಂದಿನಿಂದಲೂ ಇದ್ದಿದ್ದು ಗುಡಿ ರಚನೆಯಾಗಿದ್ದು, ಮಾಧವ ಪೂಜಾರ್ಯರ ಹಿಂದಿನ ಗುರುಗಳ ಕಾಲದಲ್ಲಿ ಎನ್ನುವುದು ತಿಳಿದುಬರುತ್ತದೆ. ಮಲಸಾವಿರ ದೈವಗಳ ಸಾನಿಧ್ಯದಲ್ಲಿ ತ್ರಿಶೂಲವಿರುವುದು ಇಲ್ಲಿನ ವಿಶೇಷ. ಹಸಲ ದೈವವು ಪಶ್ಚಿಮ ಕರಾವಳಿಯಿಂದ ಬಂದು ಅಜ್ಜಮ್ಮನವರ ರಕ್ಷಣೆಗೆ ಬೆಂಗಾವಲಾಗಿದ್ದಿದ್ದು ಎನ್ನುವುದು ಪ್ರತೀತಿ. ಎಲ್ಲಾ ವಿಷಯಗಳು ಅಷ್ಠಮಂಗಲ ಪ್ರಶ್ನೆಯಲ್ಲೂ ತಿಳಿದುಬಂದಿರುವುದು ನಮ್ಮ ಪೂರ್ವಜರ ಮಾಹಿತಿಗೆ ಪುಷ್ಠಿ ದೊರಕಿದಂತಾಗಿದೆ. ಬಾರಕೂರು ಸಂಸ್ಥಾನದ ಹೆ­ಚ್ಚಿನೆಲ್ಲಾ ದೇವಸ್ಥಾನಗಳು ಅನ್ಯರ ಆಕ್ರಮಣಗಳಿಗೆ ತುತ್ತಾಗಿ ಮೂಲ ಸ್ವರೂಪ ಕಳೆದು ಕೊಂಡರೂ ಈ ದೇವಸ್ಥಾನವು ಯಾರ ದಾಳಿಗೂ ತುತ್ತಾಗದಿರುವುದು ಒಂದು ವಿಶೇಷವೇ ಸರಿ.
          ಹೀಗೆ ಶ್ರೀ ಕುಲಮಹಾಸ್ತ್ರೀ ಅಮ್ಮನವರ ದೇವಾಲಯವು ಇಂದು ಜೀರ್ಣೋದ್ದಾರಗೊಂಡು ನೋಡಲು ಎರಡು ಕಣ್ಣುಗಳು ಸಾಲದು ಎಂಬಂತೆ ಭಾಸವಾಗುತ್ತದೆ. ದೇವಳದಲ್ಲಿ ಪದ್ದತಿಯಂತೆ ಮೆಲ್ವಸ್ತ್ರವನ್ನು ತೆಗೆದು(ಪುರುಷರು) ದೇವರ ಆಲಯದ ೊಳಗೆ ಹೋಗಬೇಕು. ಅಮ್ಮನನ್ನು ಕಣ್ತುಂಬಿಕೊಳ್ಳಲು ಕಂಗಳೇ ಸಾಲದು ಎಂದೆನಿಸುತ್ತದೆ. ಶ್ರೀ ಮಹಾಮಾತೆ ಸಮಸ್ತ ಜನರನ್ನು ಅನುಗ್ರಹಿಸಲಿ. ಬೇಡಿ ಬಂದ ಭಕ್ತರಿಗೆ ಅಭಿಷ್ಠವನ್ನು ಈಡೇರಿಸಲಿ. ತಾವೂ ಕೂಡಾ ಒಮ್ಮೆ ಶ್ರೀದೇವಿಯನ್ನು ಕಂಡು ಜನುಮ ಪಾವನವಾಗಿಸಿಕೊಳ್ಳಿ.

ಚಿತ್ರ ಕೃಪೆ ಮತ್ತು ಮಾಹಿತಿ  : ಶ್ರೀ ಕ್ಷೇತ್ರದ ವೆಬ್ ಸೈಟ್ ನಿಂದ.


ಹೆಚ್ಚಿನ ಮಾಹಿತಿಗಾಗಿ www.bennekudru.com ಗೆ log on ಆಗಿ.


ವಿಳಾಸ(Contact) :-
Sri Kulamahasthri Temple,
Bennekudru, Barkur – 576 210
Udupi-Dist.
Phone : 0820 – 2587121


ದಾರಿಯ ವಿವರ : ಶ್ರೀ ಕ್ಷೇತ್ರವನ್ನು ತಲುಪಲು ಉಡುಪಿ-ಕುಂದಾಪುರದ ಮೂಲಕ ಬಾರ್ಕೂರು ಪೇಟೆಯನ್ನು ತಲುಪಿ ಅಲ್ಲಿಂದ ಪೇಟೆ ಮದ್ಯದಲ್ಲಿ ದೇವರ ಕಲ್ಲು ಚಪ್ಪರದ ನೇರದಲ್ಲಿ ಪಶ್ಚಿಮ ದಿಕ್ಕಿಗೆ ಸಾಗಿರುವ ರಸ್ತೆಯಲ್ಲಿ ಸರಿಸುಮಾರು 1 ½ ಕಿ.ಮೀ ಸಾಗಿದರೆ ಶ್ರೀ ದೇವಿಯ ಭವ್ಯ ಮಂದಿರ ನದಿ ತಟದಲ್ಲಿ ರಾರಾಜಿಸುತ್ತದೆ.