Drop Down Menus CSS Drop Down Menu #
>> Namaskaram..!! Welcome to Namma-Naadu.blogspot.com >> ಓದುಗ ಬಂದುಗಳಿಗೆ ಹೃದಯಪೂರ್ವಕ ನಮಸ್ಕಾರ!! ನಮ್ಮ-ನಾಡು ಅಂತರ್ಜಾಲ ಪುಟ ವೀಕ್ಷಕರು ನಮ್ಮನ್ನು ಇಲ್ಲಿಯವರೆಗೆ ಪ್ರೋತ್ಸಾಹಿಸಿ, ಅಭಿನಂದಿಸಿದ್ದೀರಿ. ಮುಂದೆಯೂ ಕೂಡಾ ಇದೇ ರೀತಿಯಲ್ಲಿ ನಮ್ಮೊಂದಿಗೆ ಜೊತೆಯಾಗಿದ್ದು, ನಮ್ಮ-ನಾಡಿನ ಸೊಗಡನ್ನು ಸಾರೋಣ... ಧನ್ಯವಾದಗಳೊಂದಿಗೆ : ರಾಘವ್ ಕೋಟೇಶ್ವರ. >> ನಮ್ಮ ಮುಂದಿನ ಲೇಕನಗಳು : • ಶ್ರೀ ಚಿಕ್ಕಮ್ಮ ದೇವಸ್ಥಾನ, ಚಿಕನ್ಸಾಲ್,ಕುಂದಾಪುರ • ಶ್ರೀ ಪಂಚದುರ್ಗಾಪರಮೇಶ್ವರೀ ದೇವಸ್ಥಾನ,ಮಠದಬೆಟ್ಟು. ಕೋಟೇಶ್ವರ. >> ಇನ್ನೂ ಹಲವಾರು ದೇವಾಲಯ, ದೈವಾಲಯಗಳ ಮಾಹಿತಿಗಾಗಿ ನಿರೀಕ್ಷಿಸಿ..' >> ಪ್ರಕಟವಾದ ಹೊಸ ಲೇಖನಗಳು : •   ಶ್ರೀ ಅಬ್ಬಗ-ದಾರಗ ದೇವಸ್ಥಾನ, ಮಣಿಕಲ್ಲು   •   ಶ್ರೀ ಕನ್ನಿಕಾ ದುರ್ಗಾ, ಜಪ್ತಿ  • ಶ್ರೀ ಮಾರಿಯಮ್ಮ, ಕಾಪು.....

Ullooru Sri Karthikeya Subramanya Swamy Temple, Kandavara
ಉಳ್ಳೂರು ಶ್ರೀ ಕಾರ್ತಿಕೇಯ ಸುಬ್ರಹ್ಮಣ್ಯ ಸ್ವಾಮೀ ದೇವಸ್ಥಾನ, ಕಂದಾವರ

Shree Karthikeya, Ullooru

ಕುಂದಾಪುರ ತಾಲೂಕಿನ ಕಂದಾವರ(Kandavara) ಶ್ರೀ ಕಾರ್ತಿಕೇಯ ಸುಬ್ರಹ್ಮಣ್ಯ ದೇವಸ್ಥಾನವು(Ullooru Shree Karthikeya Subramanya Temple, Kandavara) ತಾಲೂಕಿನ ಪುರಾತನ ಸ್ಕಂದ ಕ್ಷೇತ್ರಗಳಲ್ಲಿ ಮಹತ್ತರ ಸ್ಥಾನವನ್ನು ಪಡೆದಿದೆ. ಹಲವಾರು ವರ್ಷಗಳ ಇತಿಹಾಸ ಇವರುವ ಈ ದೇವಾಲಯವು ಇಂದು ಪುನರ್ ನಿರ್ಮಾಣಗೊಂಡು ಸುಂದರ ಶಿಲಾದೇಗುಲವಾಗಿ ಕಂಗೊಳಿಸುತ್ತಿದೆ. 2014ನೇಯ ಇಸವಿಯಲ್ಲಿ ಶ್ರೀ ದೇವಳವು ಜೀರ್ಣೋದ್ಧಾರಗೊಂಡು ಹೊಸ ಕಳೆಯೊಂದಿಗೆ, ಭಕ್ತಿರಸವನ್ನು ಸ್ಫುರಣಗೊಳಿಸುತ್ತಿದೆ.
ಉಳ್ಳೂರು(ಕಂದಾವರ) ದೇವಾಲಯದ ಇತಿಹಾಸವನ್ನು ವಿಶ್ಲೇಷಣೆ ಮಾಡಿದಾಗ ಈ ದೇವಾಲಯವು ಸುಮಾರು 9ನೇ ಶತಮಾನಕ್ಕೆ ಸಂಬಂದಿಸಿದ್ದು ಎಂಬುದು ತಿಳಿದು ಬರುತ್ತದೆ. ಶ್ರೀ ಉಳ್ಳೂರು ಸುಬ್ರಹ್ಮಣ್ಯ ಸ್ವಾಮಿ ವಿಶ್ವಾಮಿತ್ರ ಗೋತ್ರದ ಉಡುಪರಿಗೂ(Udupa) ಮತ್ತು ಹೆಬ್ಬಾರರಿಗೂ(Hebbar) ಕುಲದೇವರಾಗಿಯೂ ಪೂಜಿಸಲ್ಪಡುತ್ತಾನೆ. ಅಲ್ಲದೇ ಕಾಲಾಂತರದಲ್ಲಿ ಆದ ವೃತ್ತಿಭೇದದಿಂದ ಬಹಳಷ್ಟು ಜನರಿಗೆ ಕುಲನಾಮದಲ್ಲಿ ಅಡಿಗ, ಆಚಾರ್ಯ, ಬಲ್ಲಾಳ, ತಂತ್ರಿ, ಸೋಮಯಾಜಿ, ಉಪಾದ್ಯಾಯ, ಭಾಗವತ, ಐತಾಳ ಹೀಗೆ ಬಹಳಷ್ಟು ಬದಲಾವಣೆಗಳಾದರೂ ಕೂಡಾ ಶ್ರೀ ಕಾರ್ತಿಕೇಯ ಸುಬ್ರಹ್ಮಣ್ಯ ಸ್ವಾಮೀಯು ಕುಲದೇವರಾಗಿರುತ್ತಾನೆ. ಹಿಂದೆ ಶ್ರೀ ಕ್ಷೇತ್ರವು ಸ್ಕಂದಪುರ(Skandapura) ಎಂಬುದಾಗಿಯೂ, ಇಂದು ಕಂದಾವರ ಎಂದು ಆಡುನುಡಿಗಳ ಮೂಲಕ ಬದಲಾವಣೆಗೊಂಡು ಕರೆಯಲ್ಪಡುತ್ತಿದೆ. ಶ್ರೀ ಸ್ಕಂದನು ನೆಲೆಸಿ ನಿಂತ ಪುಣ್ಯಭೂಮಿಯು ಮುಂದೆ 'ಸ್ಕಂದಪುರ' ಎಂದೂ, ಕಾಲಕಳೆದಂತೆ 'ಕಂದಾವರ' ಎಂತಲೂ ಪ್ರಸಿದ್ಧಿಯನ್ನು ಪಡೆಯಿತು ಎಂದು ಇತಿಹಾಸದಿಂದ ತಿಳಿದುಬರುತ್ತದೆ. ಶ್ರೀ ಸ್ವಾಮಿಯ ಮೂರ್ತಿಯು ಸುಮಾರು 1ಮೀಟರ್ ಎತ್ತರದ ಸಾಲಿಗ್ರಾಮ ಶಿಲೆಯಿಂದ ಮಾಡಲಾಗಿದ್ದು ನಿಂತ ಬಂಗಿಯಲ್ಲಿ ಶ್ರೀ ಸ್ವಾಮಿಯು ಕಂಗೊಳಿಸುತ್ತಾನೆ. ಒಂದು ಕರದಲ್ಲಿ ಆಯುಧವನ್ನು ಧರಿಸಿ ಬಾಲಕುಮಾರನಂತೆ ಕಂಡುಬರುತ್ತಾನೆ.

ಹೀಗೆ ಶ್ರೀ ಸ್ವಾಮಿಯ ಬಗ್ಗೆ ಪುರಾಣದಲ್ಲಿ ಹಲವಾರು ಉಲ್ಲೇಖಗಳು ಕಂಡುಬರುತ್ತದೆ. ತಾರಕಾಸುರನ ವಧೆಗಾಗಿ ಕುಮಾರನ ಜನ್ಮವಾಯಿತು. ಪಾರ್ವತೀ-ಪರಮೇಶ್ವರನ ಕುವರನಾಗಿ ಜನಿಸಿ, ಕೃತ್ತಿಕೇಯರ ಹಾಲುಂಡ ಕಾರಣದಿಂದ ಇವನಿಗೆ 'ಶ್ರೀ ಕಾರ್ತಿಕೇಯ ಸ್ವಾಮೀ' ಎಂದು ಹೆಸರು ಬರುತ್ತದೆ. ಅಂತೆಯೇ ದೇವಸೇನಾಪತಿಯಾಗಿ ನೆಮಕಗೊಂಡು ದೇವತೆಗಳ ರಕ್ಷಕನಾಗುತ್ತಾನೆ.

ಈ ರೀತಿಯಲ್ಲಿ ಕುಮಾರನು ಕಾರ್ತಿಕೇಯನಾಗಿ ಶ್ರೀ ಸುಬ್ರಹ್ಮಣ್ಯನಾಗಿ ಉಳ್ಳೂರಿನಲ್ಲಿ ನೆಲೆಸಿ ನಿಂದು, ಭಕ್ತರ ಪೊರೆವ ಕುಮಾರನಾಗಿದ್ದಾನೆ. ಈ ದೇವಾಲಯವು ಪೂರ್ವಾಭಿಮುಖವಾಗಿ ನಿರ್ಮಾಣಗೊಂಡಿದೆ. ಈ ದೇವಾಲಯದಲ್ಲಿ ಕುಮಾರನೊಂದಿಗೆ ವಿಘ್ನನಾಶಕ ವಿನಾಯನಕನ ಗುಡಿ ಹಾಗೂ ನಾಗದೇವರ ಗುಡಿಗಳು ಇವೆ. ಹಲವಾರು ಸಂಖ್ಯೆಗಳಲ್ಲಿ ದೇವಾಲಯದ ಹಿಂಬಾಗದಲ್ಲಿ ಅಂದರೆ ದೇವಾಲಯದ ಪ್ರದಕ್ಷಿಣಾ ಪಥದಲ್ಲಿ ಆಗ್ನೇಯದಲ್ಲಿ ಶ್ರೀ ಗಣೇಶನ ಗುಡಿಯಾದರೆ, ನೈರುತ್ಯದಲ್ಲಿ ಪೂರ್ವಾಭಿಮುಖವಾಗಿ ನಾಗಸಾನ್ನಿಧ್ಯವಿದೆ. ಇಲ್ಲಿ ಹಲವಾರು ನಾಗರಕಲ್ಲುಗಳನ್ನು ನಾವು ಕಾಣಬಹುದು. ಇಲ್ಲಿ ಸಂತಾನ ಭಾಗ್ಯಕ್ಕಾಗಿ ವಿಶೇಷ ಹರಿಕೆಗಳನ್ನು ಹೇಳಿಕೊಳ್ಳಲಾಗುತ್ತದೆ. ಶ್ರೀ ಸುಬ್ರಹ್ಮಣ್ಯ ಸ್ವಾಮೀಯು ಕುಜದೋಷ ನಿವಾರಕನೂ ಆಗಿರುವುದರಿಂದ ಕಂಕಣ ಭಾಗ್ಯವನ್ನು ನೀಡಿ ಹರಸುತ್ತಾನೆ. ದೇವಾಲಯವು ವಿಶಾಲವಾಗಿದ್ದು ಒಳ ಪ್ರಕಾರವಲ್ಲದೆ, ಹೊರಪ್ರಕಾರ ಕೂಡಾ ಇದೆ. ಇಲ್ಲಿ ದೇವಾಲಯಕ್ಕೆ ಸಂಬಂಧಿಸಿದ ಕಾರ್ಯಕ್ರಮಗಳು ನಡೆಯುತ್ತದೆ ಅಲ್ಲದೇ ಸುಸಜ್ಜಿತವಾಗ ಜಾಗವೂ ಕೂಡಾ ಇದೆ. ಇಲ್ಲಿ ಗಣೇಶೋತ್ಸವವು ಈ ದೇವಾಲಯದಲ್ಲೇ ನಡೆಯುತ್ತದೆ. ದೇವಾಲಯದ ಈಶಾನ್ಯಭಾಗದಲ್ಲಿ ಸುಂದರ ಪುಷ್ಕರಣಿ ಇದ್ದು ಅದನ್ನು ಕೂಡಾ ಇತ್ತೀಚೆಗೆ ನವೀಕರಣಗೊಳಿಸಲಾಗಿದ್ದು, ಈ ಪುಷ್ಕರಣಿಯನ್ನು ಕಂಡರೆ ನಮ್ಮ ಮನಸ್ಸು ಪುಳಕಿತವಾಗುತ್ತದೆ.

ಶ್ರೀ ಸ್ವಾಮಿಗೆ ಇಲ್ಲಿ ವರ್ಷಂಪ್ರತೀ ಜಾತ್ರೋತ್ಸವ ನಡೆಯುತ್ತದೆ. ಅಂದು ಊರ-ಪರವೂರ ಭಕ್ತಾದಿಗಳು ಇಲ್ಲಿಗೆ ಬಂದು ಶ್ರೀ ಸ್ವಾಮೀಯ ದರುಶನ ಪಡೆದು ಸೇವೆಯಲ್ಲಿ ಪಾಲ್ಗೊಂಡು ಪುನೀತರಾಗುತ್ತಾರೆ. ಇಲ್ಲಿ ದೇವಾಲಯದ ಹೊರಪ್ರಕಾರದಲ್ಲಿ ಪುರಾತನ ನಾಗದೇವರ ಕಲ್ಲುಗಳನ್ನು ಕಾಣಬಹುದು. ಹಲವಾರು ಶತಮಾನಗಳ ಹಿಂದೆ ಇಲ್ಲಿಂದ ಕೊಂಡು ಹೋಗಿ ಪುನಃ ಇಲ್ಲಿಗೆ ತಂದೊಪ್ಪಿಸಿದಂತ ಶ್ರೀ ನಾಗರ ಕಲ್ಲು ಅದಾಗಿದೆ. ದೇವಾಲಯದ ಮುಂಭಾಗದಲ್ಲಿ ಸುಂದರವಾದ ಮುಖಮಂಟಪವಿದ್ದು ಭಕ್ತರನ್ನು ಭಕ್ತಿಯ ಉನ್ಮಾದಕ್ಕೆ ಕೊಂಡೊಯ್ಯುವ ಶಿಲ್ಪಕಲೆ ಅದರಲ್ಲಿ ಅರಳಿ ನಿಂತಿದೆ. ಸದಾ ಹಸಿರಿನ ತರುಲತೆಗಳ ಮಧ್ಯೆ ಕಂಗೊಳಿಸುವ ಶ್ರೀ ಕಾರ್ತಿಕೇಯ ಸುಬ್ರಹ್ಮಣ್ಯ ಸ್ವಾಮೀಯ ದರುಶನವನ್ನು ಒಮ್ಮೆ ಮಾಡಿ, ಶ್ರೀ ಸ್ವಾಮಿಯ ಕೃಪೆಗೆ ಪಾತ್ರರಾಗಿ. ಸ್ವಾಮಿಯ ಪುಟ್ಟ ಪಾದಗಳಿಗೆ ನಮಿಸಿ, ನಮ್ಮ ಜನುಮ ಪಾವನಗೊಳಿಸಿಕೊಳ್ಳೋಣ.



ವಿಳಾಸ :-

ಶ್ರೀ ಕಾರ್ತಿಕೇಯ ಸುಬ್ರಹ್ಮಣ್ಯ ದೇವಸ್ಥಾನ,

ಉಳ್ಳೂರು(ಕಂದಾವರ), ಕುಂದಾಪುರ ತಾಲೂಕು||

ದಾರಿಯ ವಿವರ : ಕುಂದಾಪುರ ಬಸ್ರೂರು ಮೂರುಕೈಯಿಂದ ನೇರವಾಗಿ ಮೂಡ್ಲಕಟ್ಟೆಯ ಇಂಜಿನಿಯರಿಂಗ್ ಕಾಲೇಜು ರಸ್ತೆಯಲ್ಲಿ ಸಾಗಿ, ಅಲ್ಲಿಂದ ಸರಿಸುಮಾರು 4ಕಿ.ಮೀ ಸಾಗಿದರೇ ಶ್ರೀ ಸ್ವಾಮಿಯ ದೇವಾಲಯವನ್ನು ತಲುಪಬಹುದು. ಅಲ್ಲದೇ ಕೋಟೇಶ್ವರ-ಹಾಲಾಡಿ ರಸ್ತೆಯಲ್ಲಿ ಸಾಗಿ, ಸಳ್ವಾಡಿಯಲ್ಲಿ ಉತ್ತರಕ್ಕೆ ಸಾಗುವ ಡಾಮರು ರಸ್ತೆಯಲ್ಲಿ ಸಾಗಿದರೆ ಶ್ರೀ ದೇವಳವನ್ನು ತಲುಪಬಹುದು.