Drop Down Menus CSS Drop Down Menu #
>> Namaskaram..!! Welcome to Namma-Naadu.blogspot.com >> ಓದುಗ ಬಂದುಗಳಿಗೆ ಹೃದಯಪೂರ್ವಕ ನಮಸ್ಕಾರ!! ನಮ್ಮ-ನಾಡು ಅಂತರ್ಜಾಲ ಪುಟ ವೀಕ್ಷಕರು ನಮ್ಮನ್ನು ಇಲ್ಲಿಯವರೆಗೆ ಪ್ರೋತ್ಸಾಹಿಸಿ, ಅಭಿನಂದಿಸಿದ್ದೀರಿ. ಮುಂದೆಯೂ ಕೂಡಾ ಇದೇ ರೀತಿಯಲ್ಲಿ ನಮ್ಮೊಂದಿಗೆ ಜೊತೆಯಾಗಿದ್ದು, ನಮ್ಮ-ನಾಡಿನ ಸೊಗಡನ್ನು ಸಾರೋಣ... ಧನ್ಯವಾದಗಳೊಂದಿಗೆ : ರಾಘವ್ ಕೋಟೇಶ್ವರ. >> ನಮ್ಮ ಮುಂದಿನ ಲೇಕನಗಳು : • ಶ್ರೀ ಚಿಕ್ಕಮ್ಮ ದೇವಸ್ಥಾನ, ಚಿಕನ್ಸಾಲ್,ಕುಂದಾಪುರ • ಶ್ರೀ ಪಂಚದುರ್ಗಾಪರಮೇಶ್ವರೀ ದೇವಸ್ಥಾನ,ಮಠದಬೆಟ್ಟು. ಕೋಟೇಶ್ವರ. >> ಇನ್ನೂ ಹಲವಾರು ದೇವಾಲಯ, ದೈವಾಲಯಗಳ ಮಾಹಿತಿಗಾಗಿ ನಿರೀಕ್ಷಿಸಿ..' >> ಪ್ರಕಟವಾದ ಹೊಸ ಲೇಖನಗಳು : •   ಶ್ರೀ ಅಬ್ಬಗ-ದಾರಗ ದೇವಸ್ಥಾನ, ಮಣಿಕಲ್ಲು   •   ಶ್ರೀ ಕನ್ನಿಕಾ ದುರ್ಗಾ, ಜಪ್ತಿ  • ಶ್ರೀ ಮಾರಿಯಮ್ಮ, ಕಾಪು.....

Showing posts with label Sri Kukke Subramanya. Show all posts
Showing posts with label Sri Kukke Subramanya. Show all posts

Sri Kukke Subramanya Swamy

ಶ್ರೀ ಕುಕ್ಕೆ ಸುಬ್ರಹ್ಮಣ್ಯ ದೇವಸ್ಥಾನ, ಸುಬ್ರಹ್ಮಣ್ಯ, ದ.ಕ.
Shree Kukke Subramanya Temple, Subramanya, D.K

Sri Kukke Subrahmanya Swamy


ರಶುರಾಮನು ನಿರ್ಮಿಸಿದ ಏಳು ಪವಿತ್ರ ಸಪ್ತ ಮುಕ್ತಿ ಕ್ಷೇತ್ರಗಳಲ್ಲಿ ಶ್ರೀ ಕುಕ್ಕೆ ಸುಬ್ರಹ್ಮಣ್ಯ ಕ್ಷೇತ್ರ ವು ಕೂಡಾ ಒಂದಾಗಿದೆ. ಈ ಕ್ಷೇತ್ರವು ಇಂದು ಅತ್ಯಂತ ಪವಿತ್ರ ಮತ್ತು ಪ್ರಸಿದ್ದ ಯಾತ್ರಾ ಸ್ಥಳವಾಗಿ ರೂಪುಗೊಂಡಿದೆ. ಇಂದು ಈ ಯಾತ್ರಾ ಸ್ಥಳವನ್ನು ದೇಶದ ಮೂಲೆ-ಮೂಲೆಯಿಂದಲೂ ಜನರು ಬಂದು ಸಂದರ್ಶಿಸುವಂತ ಪವಾಡಗಳು ಇಲ್ಲಿ ನಡೆಯುತ್ತದೆ. ಕುಕ್ಕೆ ಸುಬ್ರಹ್ಮಣ್ಯ ಕ್ಷೇತ್ರವು ಕರ್ನಾಟಕದ ಅತ್ಯಂತ ಶ್ರೀಮಂತ ದೇವಾಯಗಳಲ್ಲಿ ಒಂದಾಗಿದೆ ಹಾಗೂ ಇತ್ತೀಚಿನ ಅಂಕಿ-ಅಂಶಗಳ ಪ್ರಕಾರ ಕುಕ್ಕೆಯು ಮೊದಲನೆಯ ಸ್ಥಾನವನ್ನು ಅಲಂಕರಿಸಿದೆ. ನಂತರದ ಸ್ಥಾನವನ್ನು ಕೊಲ್ಲೂರು ಮೂಕಾಂಬಿಕಾ ದೇವಾಲಯವು ಪಡೆದಿದೆ.
Temple Gopuram
ಹೀಗೆ ಪರಮಪವಿತ್ರ ಕ್ಷೇತ್ರವೂ, ಪರಶುರಾಮ ಸೃಷ್ಠಿಯ ಕ್ಷೇತ್ರವು, ಸರ್ಪದೋಷ ನಿವಾರಣಾ ಕ್ಷೇತ್ರವೂ ಆಗಿ ಸಕಲ ಬಾದೆ ಕಳೆಯುವ ಮಹಾನ್ ಕ್ಷೇತ್ರವಾಗಿ ರೂಪುಗೊಂಡು ಇಂದು ಅತ್ಯಂತ ಸುಸಜ್ಜಿತ ದೇವಾಲಯಗಳ ಪೈಕಿ ಒಂದೆನಿಸಿಕೊಂಡಿದೆ. ಈ ದೇವಾಲಯದಲ್ಲಿ ಅನ್ನದಾನ ನಿತ್ಯವೂ ನಡೆಯುತ್ತದೆ. ಅಲ್ಲದೆ ವಸತಿ ವ್ಯವಸ್ಥೆ ಕೂಡಾ ಇದೆ. ಉತ್ತಮ ಸೌಕರ್ಯಗಳನ್ನು ಭಕ್ತಾಧಿಗಳಿಗೆ ನೀಡಲಾಗುತ್ತಿದೆ.
ಶ್ರೀ ದೇವಾಲಯದಲ್ಲಿ ಆಶ್ಲೇಷ ಬಲಿ, ನಾಗಪ್ರತಿಷ್ಠೆ ಮುಂತಾದವುಗಳು ಹೆಚ್ಚು-ಹೆಚ್ಚಾಗಿ ನಡೆಯುತ್ತಿದೆ. ಇಂದು ದೇಶದ ಮೂಲೆ-ಮೂಲೆಯಿಂದಲೂ ಇಲ್ಲಿಗೆ ಜನರು ಬಂದು ಅನೇಕ ಸೇವೆಗಳನ್ನು ನಡೆಸುತ್ತಾರೆ.

Aadhi Subramanya
ಕ್ಷೇತ್ರದ ಇತಿಹಾಸ : ಒಂದು ಪುರಾಣದ ಪ್ರಕಾರ ಸ್ಕಂದನು ತಾರಕಾಸುರ, ಶೂರಪದ್ಮಾಸುರ ಮತ್ತು ಕ್ರೂರ ರಕ್ಕಸಾದಿಗಳನ್ನು ಕೊಂದ ನಂತರ ಶಿವನ ಅಣತಿಯಂತೆ ಕುಮಾತ ಪರ್ವತಕ್ಕೆ ಬಂದು ನೆಲೆಸುತ್ತಾನೆ. ಸ್ಕಂದನು ತನ್ನ ಆಯುಧವನ್ನು ತೊಳೆದ ನದಿಯೆ ಇಂದು ಕುಮಾರಧಾರ ಎಂದು ಪ್ರಸಿದ್ದಿಯನ್ನು ಪಡೆದಿದೆ. ಹೀಗೆ ಇಂದ್ರಾದಿಗಳು ಕುಮಾರನಿಗೆ ಪುಷ್ಪವೃಷ್ಠಿಯನ್ನು ಗೈದು ಮುಂದೆ ಇಂದ್ರನು ತನ್ನ ಮಗಳನ್ನು ದೇವಸೇನಾಪತಿಯಾದ ಕುಮಾರನಿಗೆ ಮಧುವೆ ಮಾಡಿಕೊಡುತ್ತಾನೆ. ಈ ಶುಭ ವಿವಾಹವು ಕುಮಾರಪರ್ವತದಲ್ಲಿ ಮಾರ್ಗಶಿರ್ಷ ಶುದ್ದ ಷಷ್ಠಿಯಂದು ನಡೆಯುತ್ತದೆ. ಈ ಮಧುವೆಯಲ್ಲಿ ತ್ರೀಮೂರ್ತಿಗಳು ತ್ರಿಶಕ್ತಿಗಳು ಹಾಗೂ ದೇವಾನುದೇವತೆಗಳು ಪಾಲ್ಗೊಂಡಿದ್ದರು. ಮುಂದೆ ಹಲವಾರು ಪವಿತ್ರ ನದಿಗಳ ನೀರು ಮತ್ತು ಸ್ವರ್ಣ ಜಲದಿಂದ ಕುಮಾರನಿಗೆ ಅಭಿಷೇಕ ಮಾಡಲಾಯಿತು. ಈ ಜಲವೆ ಮುಂದೆ ಕುಮಾರಧಾರನದಿಯಲ್ಲಿ ಲೀನವಾಗಿ ಪವಿತ್ರ ನದಿಯಾಯಿತು.
ಹೀಗೆ ಕುಕ್ಕೆಯಲ್ಲಿ ನೆಲೆಸಿದ ಸುಬ್ರಹ್ಮಣ್ಯನು ಅಲ್ಲಿನ ಒಡೆಯನಾದ. ನಂತರ ಶಿವನ ಪರಮಭಕ್ತನಾದ ಸರ್ಪರಾಜ ವಾಸುಕಿಯು ಗರುಡನ ದಾಳಿಯಿಂದ ತಪ್ಪಿಸಿಕೊಳ್ಳಲು ಕುಕ್ಕೆಯ ಬಿಲದ್ವಾರದಲ್ಲಿ ತಪಸ್ಸನ್ನು ಮಾಡುತ್ತಾನೆ. ಹೀಗೆ ತಪಸ್ಸಿಗೆ ಒಲಿದ ಪರಮೇಶ್ವರ ಅಭಯವನ್ನು ನೀಡಿ ನನ್ನ ಕುವರ ಸ್ಕಂದನು ನಿನ್ನ ರಕ್ಷಣೆಯನ್ನು ಮಾಡುತ್ತಾನೆ ಎಂದು ಹೇಳಿ ಅದೃಶ್ಯನಾಗುತ್ತಾನೆ. ಮುಂದೆ ಶ್ರೀ ಸ್ಕಂದನು ವಾಸುಕಿಯು ನೆಲೆಸಿದ ಸ್ಥಳದಲ್ಲಿ ನೆಲೆಸಿ ವಾಸುಕಿಯನ್ನು ರಕ್ಷಿಸುತ್ತಾನೆ. ಹೀಗೆ ನಾಗನಿಗೆ ಸಲ್ಲುವ ಪೂಜಾದಿಗಳು ಸುಬ್ರಹ್ಮಣ್ಯನಿಗೂ ಕೂಡಾ ಸಲ್ಲುತ್ತದೆ. ಸುಬ್ರಹ್ಮಣ್ಯನು ಸರ್ಪಗಳ ಒಡೆಯನಾದ ಕಾರಣ ನಾಗಗಳು ಸುಬ್ರಹ್ಮಣ್ಯನ ಜೊತೆಗೆ ಪೂಜಾದಿಗಳನ್ನು ಸಲ್ಲಿಸಿದಾಗ ಬೇಗನೆ ಸಂಪ್ರೀತಿಗೊಳ್ಳುತ್ತವೆ.

Parivara Deavthe
ಹೀಗೆ ಈ ಕ್ಷೇತ್ರ ನಾಗಕ್ಷೇತ್ರವೆಂದು ಪ್ರಸಿದ್ದಿ ಪಡೆದಿದೆ. ಇಲ್ಲಿ ಆದಿಸುಬ್ರಹ್ಮಣ್ಯ ಮತ್ತು ಕುಕ್ಕೆ ಸುಬ್ರಹ್ಮಣ್ಯ ಎಂದು 2 ಮುಖ್ಯ ದೇವಾಲಯಗಳು ಇವೆ. ಶ್ರೀ ಕ್ಷೇತ್ರದಲ್ಲಿ ಸುಬ್ರಹ್ಮಣ್ಯನೊಂದಿಗೆ ಹಲವಾರು ಪರಿವಾರ ದೇವತೆಗಳು ನೆಲೆಸಿದ್ದಾರೆ. ಶ್ರೀ ಸ್ವಾಮಿಯೊಂದಿಗೆ ವಾಸುಕಿ, ಉಮಾಮಹೇಶ್ವರ, ಕಾಳಬೈರವ, ಸಂಪುಟ ನರಸಿಂಹ, ಹುಲಿಗೆಮ್ಮ ಹಾಗೂ ಇನ್ನಿತರ ದೇವರು ಮತ್ತು ದೈವಗಳು ನೆಲೆಯಾಗಿವೆ.
ಶ್ರೀ ಕ್ಷೇತ್ರವು ಸಂತಾನ ಭಾಗ್ಯವನ್ನು ಕರುಣಿಸುವ ಮಹಾನ್ ಕ್ಷೇತ್ರವೆಂದು ಪ್ರಸಿದ್ದಿಯನ್ನು ಪಡೆದಿದೆ. ಕ್ಷೇತ್ರದಲ್ಲಿ ಇತ್ತೀಚಿನ ದಿನದಲ್ಲಿ ಬಹಳ ಅಭಿವೃದ್ದಿಯನ್ನು ಕಂಡಿದೆ. ಶ್ರೀ ಕ್ಷೇತ್ರಕ್ಕೆ ಬರುವ ಭಕ್ತಾದಿಗಳು ಧರ್ಮಸ್ಥಳವನ್ನು ಸಂದರ್ಶಿಸಿಸಿ ನಂತರ ಕುಕ್ಕೆಗೆ ಬರಬಹುದು.

“ಸರ್ವರಿಗೂ ಶ್ರೀ ಕುಕ್ಕೆಯ ದೇವನಾದ ಸುಬ್ರಹ್ಮಣ್ಯನು ಅನುಗ್ರಹಿಸಲಿ”