Drop Down Menus CSS Drop Down Menu #
>> Namaskaram..!! Welcome to Namma-Naadu.blogspot.com >> ಓದುಗ ಬಂದುಗಳಿಗೆ ಹೃದಯಪೂರ್ವಕ ನಮಸ್ಕಾರ!! ನಮ್ಮ-ನಾಡು ಅಂತರ್ಜಾಲ ಪುಟ ವೀಕ್ಷಕರು ನಮ್ಮನ್ನು ಇಲ್ಲಿಯವರೆಗೆ ಪ್ರೋತ್ಸಾಹಿಸಿ, ಅಭಿನಂದಿಸಿದ್ದೀರಿ. ಮುಂದೆಯೂ ಕೂಡಾ ಇದೇ ರೀತಿಯಲ್ಲಿ ನಮ್ಮೊಂದಿಗೆ ಜೊತೆಯಾಗಿದ್ದು, ನಮ್ಮ-ನಾಡಿನ ಸೊಗಡನ್ನು ಸಾರೋಣ... ಧನ್ಯವಾದಗಳೊಂದಿಗೆ : ರಾಘವ್ ಕೋಟೇಶ್ವರ. >> ನಮ್ಮ ಮುಂದಿನ ಲೇಕನಗಳು : • ಶ್ರೀ ಚಿಕ್ಕಮ್ಮ ದೇವಸ್ಥಾನ, ಚಿಕನ್ಸಾಲ್,ಕುಂದಾಪುರ • ಶ್ರೀ ಪಂಚದುರ್ಗಾಪರಮೇಶ್ವರೀ ದೇವಸ್ಥಾನ,ಮಠದಬೆಟ್ಟು. ಕೋಟೇಶ್ವರ. >> ಇನ್ನೂ ಹಲವಾರು ದೇವಾಲಯ, ದೈವಾಲಯಗಳ ಮಾಹಿತಿಗಾಗಿ ನಿರೀಕ್ಷಿಸಿ..' >> ಪ್ರಕಟವಾದ ಹೊಸ ಲೇಖನಗಳು : •   ಶ್ರೀ ಅಬ್ಬಗ-ದಾರಗ ದೇವಸ್ಥಾನ, ಮಣಿಕಲ್ಲು   •   ಶ್ರೀ ಕನ್ನಿಕಾ ದುರ್ಗಾ, ಜಪ್ತಿ  • ಶ್ರೀ ಮಾರಿಯಮ್ಮ, ಕಾಪು.....

Showing posts with label Sri Kotilingeshwra temple.. Show all posts
Showing posts with label Sri Kotilingeshwra temple.. Show all posts

Sri Koteshwara Kotilingeshwra

ಶ್ರೀ ಕೋಟೇಶ್ವರ ಕೋಟಿಲಿಂಗೇಶ್ವರ ದೇವಸ್ಥಾನ, ಕೋಟೇಶ್ವರ
Sri Koteshwara Kotilingeshwara Temple, Koteshwara


Sri Kotilingeshwara
ಶ್ರೀ ಕೋಟಿಲಿಂಗೇಶ್ವರ ದೇವರು 
ಶ್ರೀ ಕೋಟೇಶ್ವರ ಕೋಟಿಲಿಂಗೇಶ್ವರ ದೇವರು

ಶ್ರೀ ಕ್ಷೇತ್ರ ಕೋಟೇಶ್ವರವು ಪರಮ ಪವಿತ್ರ ಕ್ಷೇತ್ರಗಳಲ್ಲಿ ಒಂದಾಗಿದ್ದು ಸಪ್ತ ಪವಿತ್ರ ಸಪ್ತ ಕ್ಷೇತ್ರಗಳಲ್ಲಿ ಮುಖ್ಯವಾದುದಾಗಿದೆ.   ಇಲ್ಲಿ ಶ್ರೀ ಕೋಟಿಲಿಂಗೇಶ್ವರನು ನೆಲೆಸಿ ಈ ತಾಣವು ಪರಮ ಪವಿತ್ರ ಎನಿಸಿಕೊಂಡು ಇಂದು ಜಗತ್ತಿನಲ್ಲಿ ಮೆರೆಯುತ್ತಿದೆ. ನಮ್ಮ ಕೋಟೇಶ್ವರ ಬ್ಲಾಗ್ ವೀಕ್ಷಕರಿಗೆ ಮೊದಲ ವಂದನೆಗಳು. ನಮ್ಮ ನಾಡು ನುಡಿಯ ಬಗ್ಗೆ ನಮಗೆ ಇರುವ ಪ್ರೀತಿ, ಹೆಮ್ಮೆ ಮತ್ತು ಸಂಸ್ಕೃತಿಯನ್ನು ಪ್ರಪಂಚದಾದ್ಯಂತ ಹಬ್ಬುವಂತೆ ಮಾಡುವವುದು ನನ್ನ ಉದ್ದೇಶ. ಅದಕ್ಕಾಗಿ ನಾನು ನಮ್ಮ ಊರಿನ ಪ್ರಮುಖ ಶಕ್ತಿ ಕೇಂದ್ರಗಳು, ನಮ್ಮ ಊರಿನ ಯಾತ್ರ ಸ್ಥಳಗಳು ಹಾಗೂ ಸುಂದರ ತಾಣಗಳ ಮಾಹಿತಿಯನ್ನು ನೀಡಬಯಸಿ ಈ ಬ್ಲಾಗ್ ನಿರ್ಮಾಣ ಮಾಡಿದ್ದೇನೆ. ನಮ್ಮ ಸಂದರ 'ಕೋಟೇಶ್ವರ' ವು ಪರಾತನ ಕಾಲದಿಂದಲೂ ರಾಜ-ಮಹಾರಾಜರು ಆಳಿ-ಮೆರೆದ ನಾಡು. ಐತಿಹಾಸಿಕ ಸಾಂಸ್ಕೃತಿಕ ಮತ್ತು ಎಲ್ಲಾ ರೀತಿಯಿಂದಲೂ ಗುರುತಿಸಿಕೊಂಡಿರುವ 'ಕೋಟಿಲಿಂಗನ' ಬೀಡು. ಈ ಊರು ಪುರಾತನ ಕಾಲದಲ್ಲಿ 'ಧ್ವಜಪುರ' ಎಂಬ ನಾಮದಿಂದ ಪ್ರಸಿಧ್ದಿಯನ್ನು ಹೊಂದಿದ ಪರಶಿವನು ನೆಲೆಸಿ ಪಾವನಗೊಳಿಸಿದ ಭವ್ಯ ತಾಣ. ಪರಶಿವನು ಇಲ್ಲಿ ನೆಲೆಸಿರುವ ಬಗ್ಗೆ ಕೆಲವಾರು ಗ್ರಂಥ ಉಲ್ಲೇಖಗಳೂ ಕೂಡಾ ಇವೆ. ಅನಾದಿ ಕಾಲದಲ್ಲಿ 'ಕೋಟಿ ಋಷಿಗಳು' ಒಂದಾಗಿ ಈ ಪುಣ್ಯಭೂಮಿಯಲ್ಲಿ ತಪವನ್ನಾಚರಿಸಿ ಶ್ರೀ ಪರಶಿವನನ್ನು ಒಲಿಸಿಕೊಂಡಂತ ಪುಣ್ಯ ತಾಣ, 'ಕೋಟಿ ಋಷಿಗಳು' ತಪಗೈದ ಕಾರಣದಿಂದ ಈ ಪುಣ್ಯ ತಾಣದಲ್ಲಿ ಪರಶಿವನು 'ಕೋಟಿಲಿಂಗೇಶ್ವರ' ನಾಗಿ ನೆಲೆಯಾದನು ಎಂದು ಪ್ರತಿತಿ.
Koteshwara Temple
ರಶಿವನು ಪಾರ್ವತಿ ಸಮೇತನಾಗಿ ಸಕಲ ದೇವಾನುದೇವತೆಗಳೊಡನೆ ನೆಲೆಸಿರುವ ಪರಮಪವಿತ್ರ ಪುಣ್ಯಸ್ಥಳವೇ ಈ ಪುಣ್ಯ ಭೂಮಿ 'ಕೋಟೇಶ್ವರ'. ಹೀಗೆ ಈ ಪುಣ್ಯಭೂಮಿಯ ಬಗ್ಗೆ ಇನ್ನೂ ಹಲವಾರು ಪ್ರತೀತಿಯೂ ಪ್ರಚಲಿತವಿದೆ. ಒಮ್ಮೆ ಸತ್ಯಯುಗದಲ್ಲಿ ಬ್ರಹ್ಮದೇವನ ತಪಸ್ಸಿಗೆ ಒಲೊದು ಮೈದೋರಿ ಈ ಭೂಮಿಯಲ್ಲಿ ನಿಂದನೆಂದು ಪ್ರತಿತಿ. ಹೀಗೆ ಬ್ರಹ್ಮದೇವ  ತಪಸ್ಸನ್ನು ಆಚರಿಸಿದ ಸ್ಥಳ ದೇವಾಲಯದ ಎಡಭಾಗಕ್ಕೆ ಇರುವ ಬೃಹತ್ 'ಅಶ್ವತ್ಥ' ವೃಕ್ಷವೆಂದು ಪುರಾಣಗಳು ಸಾರುತ್ದೆ. ಅಂತೆ ಬ್ರಹ್ಮದೇವನ ಕಮಂಡಲದಿಂದ ಅಲ್ಲೇ ಪಕ್ಕದಲ್ಲೆ ಕೋಟಿ ಪುಣ್ಯವನ್ನು ನೀಡುವ 'ಕೋಟಿ ತೀರ್ಥ' ಪುಷ್ಕರಣಿಯನ್ನು ನಿಮರ್ಿಸಿದ್ದ ಎಂಬುದು ಪ್ರತಿತಿಯಿದೆ. ಹೀಗೆ ಈ ಪುಷ್ಕಕರಣಿಯನ್ನು ಪಾಂಡವರು ರಾತ್ರಿಯಲ್ಲಿ ಆರಂಭಿಸಿ ಬೆಳಗಾಗುವ ಮುನ್ನ ಮಾಡಿ ಮುಗಿಸಿದರೆಂದು ಇನ್ನೊಂದು ಉಲ್ಲೇಖವಾಗಿದೆ.

ಹೀಗೆ ಈ ದೇವಾಲಯ ಪರಿಪೂರ್ಣವಾಗಿ ಬೃಹತ್ ಕಲ್ಲುಗಳಿಂದ ಮಾಡಲ್ಪಟ್ಟಿದೆ. ವಿಚಿತ್ರ, ವಿಸ್ಮಯ ರೀತಿಯಲ್ಲಿ ಬೃಹದಾಕಾರದ ಕಲ್ಲಿನಿಂದ ಈ ದೇವಾಲಯ ನಿಮರ್ಿತವಾಗಿದೆ. ಈ ದೇವಾಲಯದ ಪ್ರದಾನ ದೇವತೆಯು 'ಶ್ರೀ ಕೋಟಿಲಿಂಗೇಶ್ವರ' ನು ಪ್ರಜ್ವಲಿತ ಸೂರ್ಯನಂತೆ ಕಂಗೊಳಿಸುತ್ತಾನೆ. ದೇವನು ಇಲ್ಲಿ ಗರ್ಭಗ್ರಹದ ಮದ್ಯೆ ಪುಟ್ಟದಾದ ಬಾವಿಯಲ್ಲಿ 'ಕೋಟಿಲಿಂಗ' ದ ರೂಪದಲ್ಲಿ ನೆಲೆಸಿ ಸರ್ವರನ್ನೂ ಕಾಯುತ್ತಾ ಇದ್ದಾನೆ. ಈ ಚಿಕ್ಕಬಾವಿಯಲ್ಲಿ 'ರುದ್ರಾಕ್ಷಿ' ಯನ್ನು ಹೋಲುವ ಪುಟ್ಟ-ಪುಟ್ಟ ಲಿಂಗಗಳು ಇವೆ. ಹಾಗೇ ಇಲ್ಲಿ ಪಂಚಲೋಹದ ಪರಶಿವನ ಮೂರ್ತಿ ಈ ಕೋಟಿಲಿಂಗದ ಮೇಲಿಂದ ಭಕ್ತರಿಗೆ 'ಕೋಟಿಲಿಂಗೇಶ್ವರ' ನಾಗಿ ಕಂಗೊಳಿಸುತ್ತಾನೆ. ಹೀಗೆ ರುದ್ರಾಭಿಷೇಕ ಪ್ರಿಯ ರುದ್ರನಿಗೆ ಅನುಗಾಲವು ರುದ್ರಾಭಿಷೇಕ ನಡೆಯುತ್ತಿರುತ್ತದೆ.


ಹೀಗೆ ಈ ಪರಮಪವಿತ್ರ ಕ್ಷೇತ್ರ ಸರ್ವದೇವತೆಗಳ ನೆಲೆವೀಡು ಆಗಿದೆ ಎಂದರೆ ತಪ್ಪಾಗಲಾರದು. ಪರಶಿವನೊಂದಿಗೆ ಆದಿಶಕ್ತಿ ರೂಪಿಣಿಯಾದ ಸರ್ವಮಂಗಳೆ ಶಿವನ ಎಡದಲ್ಲಿ ದಕ್ಷಿಣಕ್ಕೆ ಮುಖಮಾಡಿ ಕುಳಿತು ಸರ್ವರ ಅಭಿಷ್ಟವನ್ನು ಈಡೇರಿಸುತ್ತಾ ಇದ್ದಾಳೆ. ಇವಳ ಪುಟ್ಟ ವಿಗ್ರಹ ಅತೀ ಸುಂದರ ಮನೋಹರವಾಗಿದೆ.
Kotitheertha - koteshwara
ಹೀಗೆ ಪರಶಿವನನಿಗೆ ಎಡದಲ್ಲಿ ಶಿವನಿಗೆ ಮುಖಮಾಡಿ ಬ್ರಹತ್ ನಂದಿಯು ಕುಳಿತು ಜ್ಞಾನವನ್ನು ಬೆಳಗುತ್ತಾದ್ದಾನೆ. ಪಾರ್ವತಿ ಪರಶಿವನ ಪ್ರೀತಿ ಪುತ್ರ ವಿಘ್ನನಾಶಕನಾದ ಶಿವನ ಬಲಭಾಗದಲ್ಲಿ 'ಮೂಲೆಗಣಪತಿ' ಎಂಬ ನಾಮದಿಂದ ಕ್ಷೇತ್ರದ ಕಾರಣಿಕ ಶಕ್ತಿಯಾಗಿ ನೆಲೆಸಿದ್ದಾನೆ. ಈ ದೇವ ಕಳೆದು ಹೋದ ಅಮೂಲ್ಯ ವಸ್ತುಗಳನ್ನು ಯಾವ ಮೂಲೆಯಲ್ಲಿದ್ದರೂ ಮರಳಿಕೊಡುತ್ತಾನೆ ಎಂಬುದು ಪ್ರತಿತಿ.
ಹೀಗೆ ನಾವು ಪ್ರದಕ್ಷಿಣಾ ಪಥದಲ್ಲಿ ಸಾಗಿದಂತೆ ಮೊದಲಿಗೆ 'ಸಪ್ತಮಾತೃಕೆ' ಯರು ಒಡಗೂಡಿ ಕುಳಿತು, ಇವರೊಡನೆ ಭೂತಗಣಗಳ ನಾಯಕ 'ವೀರಭದ್ರ' ಮತ್ತು ಮಹಾಗಣಪತಿಯೂ ಕೂಡಾ ನೆಲೆಸಿದ್ದಾರೆ. ಮುಂದೆ ಹೆಜ್ಜೆಯಿಟ್ಟು ಸಾಗಿದಂತೆ ದೇವಾಲಯದ ಹಿಂಬಾಗದಲ್ಲಿ 'ಶ್ರೀ ಸುಬ್ರಹ್ಮಣ್ಯ ಸ್ವಾಮಿ' ನೆಲೆಸಿ ನಿಂದಿದ್ದಾನೆ. ಅದೇ ಪಥದಲ್ಲಿ ನಡೆದಾಗ 'ಜ್ಯೇಷ್ಠ ಲಕ್ಷ್ಮಿ' ನೆಲೆಸಿದ್ದಾಳೆ. ಮುಂದೆ ಸಾಗಿದಂತೆ 'ಮಹಿಷಾಸುರ ಮದರ್ಿನಿಯು' ವಿರಾಜಮಾನಳಾಗಿ ನಿಂದಿದ್ದಾಳೆ. ಅದೇ ರೀತಿ ವೆಂಕಟರಮಣ, ತಾಂಡವೇಶ್ವರ ಕೂಡಾ ಒಳ ಪ್ರಾಕಾರಗಳಲ್ಲಿ ನೆಲೆಸಿ ನಿಂದಿದ್ದಾರೆ.
ಹೊರ ಪ್ರಕಾರದಲ್ಲಿ 'ಆದಿಗಣಪತಿ', 'ಮುಖ್ಯಪ್ರಾಣ', 'ಮಹಾವಿಷ್ಣು', 'ಗೋಪಾಲಕೃಷ್ಣ' ರು ನೆಲೆಸಿ ನಿಂದು ಭಕ್ತರ ಪೊರೆಯುತ್ತಾ ನಿಂದಿದ್ದಾರೆ. ಅದೇ ರೀತಿ ಇಲ್ಲಿ ಆಕರ್ಷಣೆಗಳ್ಲಿ 'ತಟ್ಟಿರಾಯ'ಗಳು ಬಹಳ ಆಕರ್ಷಣೀಯವಾಗಿವೆ.


ಕೋಟಿತೀರ್ಶಿಥ ಶಿಲ್ಪ ಕಲಾ ವೈಭವ- Koteshwara
ಹಾಗೆ ಇಲ್ಲಿನ ಪುಷ್ಕರಣಿಯ ಕಲ್ಲುಗಳ ಮೇಲೆ ಅನೇಕ ಪ್ರಾಣಿ-ಪಕ್ಷಿಗಳ ಕೆತ್ತನೆಗಳೂ ಕೂಡಾ ಕಂಡು ಬರುತ್ತದೆ. ಅದರಲ್ಲಿ ನವಿಲು, ಮೊಸಳೆ, ಆಮೆ ಹಾಗೆ ಶಿವಲಿಂಗವೂ ಕೂಡಾ ಇದೆ. ಶಿವಲಿಂಗ ಇರುವ ಸ್ಥಳದಲ್ಲಿ ಪುಟ್ಟ ಗುಡಿಯನ್ನು ನಿರ್ಮಿಸಿದ್ದಾರೆ. ಹಾಗೆ ಅಲ್ಲೇ ಪಕ್ಕದಲ್ಲಿ ಪ್ರಸನಃ ಗಣಪತಿಯ ಗುಡಿಯು ಇದೆ. ಇಲ್ಲಿ "ಕೊಡಿ ಹಬ್ಬದ" ದಿನ ಈ ಕೋಟಿ ತೀರ್ಥದಲ್ಲಿ ಸ್ನಾನ ಮಾಡಿ ನಂತರ ಇಲ್ಲಿ ಗಣಪತಿಯನ್ನು ಮೊದಲು ವಂದಿಸುವುದು ರೂಢಿ. ಇಲ್ಲಿ "ಕೊಡಿ ಹಬ್ಬ" ವು ಅತ್ಯಂತ ಪ್ರಸಿದ್ದವಾದ ಹಬ್ಬವಾಗಿದೆ.
ಇಲ್ಲಿನ ಹಬ್ಬವು ಕಾರ್ತಿಕ ಮಾಸ ಹುಣ್ಣಿಮೆಯ ದಿನ ವಿಜೃಂಭಣೆಯಿಂದ ನಡೆಯುತ್ತದೆ. ನೀವೂ ಒಮ್ಮೆ ಈ ಪರಮ ಪವಿತ್ರ ಶ್ರೀ ಕೋಟಿಲಿಂಗೇಶ್ವರನ ಕ್ಷೇತ್ರಕ್ಕೆ ಬನ್ನಿ, ಸಕಲ ದೇವಾನುದೇವತೆಗಳ ಅನುಗ್ರಹಕ್ಕೆ ಪಾತ್ರರಾಗಿ.
ಮಾರ್ಗ ವಿವರ: ಶ್ರೀ ಕ್ಷೇತ್ರಕ್ಕೆ ಉಡುಪಿಯಿಂದ ಹಲವಾರು ಬಸ್ಸಿನ ವ್ಯವಸ್ಥೆಗಳು ಇವೆ. ಉಡುಪಿಯಿಂದ ಉತ್ತರಕ್ಕೆ ಸುಮಾರು 30ಕಿ.ಮಿ ಹಾಗೂ ಕುಂದಾಪುರದಿಂದ ಸುಮಾರು 4 ಕಿ.ಮಿ ದಕ್ಷಿಣಕ್ಕೆ ರಾಷ್ಟ್ರೀಯ ಹೆದ್ದಾರಿ 17 ರಲ್ಲಿ ಈ ಪರಮ ಪವಿತ್ರ ಕ್ಷೇತ್ರವಿದೆ.

ಹೆಚ್ಚಿನ ಮಾಹಿತಿಗೆ :-
ವಿಳಾಸ: ಶ್ರೀ ಕೋಟಿಲಿಂಗೇಶ್ವರ ದೇವಸ್ಥಾನ,
ಕೋಟೇಶ್ವರ-576 222
ಕುಂದಾಪುರ-ತಾ|| ಉಡುಪಿ-ಜಿ||
ಕರ್ನಾಟಕ.
ದೂರವಾಣಿ : (not displayed)