Drop Down Menus CSS Drop Down Menu #
>> Namaskaram..!! Welcome to Namma-Naadu.blogspot.com >> ಓದುಗ ಬಂದುಗಳಿಗೆ ಹೃದಯಪೂರ್ವಕ ನಮಸ್ಕಾರ!! ನಮ್ಮ-ನಾಡು ಅಂತರ್ಜಾಲ ಪುಟ ವೀಕ್ಷಕರು ನಮ್ಮನ್ನು ಇಲ್ಲಿಯವರೆಗೆ ಪ್ರೋತ್ಸಾಹಿಸಿ, ಅಭಿನಂದಿಸಿದ್ದೀರಿ. ಮುಂದೆಯೂ ಕೂಡಾ ಇದೇ ರೀತಿಯಲ್ಲಿ ನಮ್ಮೊಂದಿಗೆ ಜೊತೆಯಾಗಿದ್ದು, ನಮ್ಮ-ನಾಡಿನ ಸೊಗಡನ್ನು ಸಾರೋಣ... ಧನ್ಯವಾದಗಳೊಂದಿಗೆ : ರಾಘವ್ ಕೋಟೇಶ್ವರ. >> ನಮ್ಮ ಮುಂದಿನ ಲೇಕನಗಳು : • ಶ್ರೀ ಚಿಕ್ಕಮ್ಮ ದೇವಸ್ಥಾನ, ಚಿಕನ್ಸಾಲ್,ಕುಂದಾಪುರ • ಶ್ರೀ ಪಂಚದುರ್ಗಾಪರಮೇಶ್ವರೀ ದೇವಸ್ಥಾನ,ಮಠದಬೆಟ್ಟು. ಕೋಟೇಶ್ವರ. >> ಇನ್ನೂ ಹಲವಾರು ದೇವಾಲಯ, ದೈವಾಲಯಗಳ ಮಾಹಿತಿಗಾಗಿ ನಿರೀಕ್ಷಿಸಿ..' >> ಪ್ರಕಟವಾದ ಹೊಸ ಲೇಖನಗಳು : •   ಶ್ರೀ ಅಬ್ಬಗ-ದಾರಗ ದೇವಸ್ಥಾನ, ಮಣಿಕಲ್ಲು   •   ಶ್ರೀ ಕನ್ನಿಕಾ ದುರ್ಗಾ, ಜಪ್ತಿ  • ಶ್ರೀ ಮಾರಿಯಮ್ಮ, ಕಾಪು.....

ಶ್ರೀ ನಾಗಕನ್ನಿಕಾ ದುರ್ಗಾಪರಮೇಶ್ವರೀ ಅಮ್ಮನವರ ದೇವಸ್ಥಾನ, ಅರಸಮ್ಮನಕಾನು, ಶೇಡಿಮನೆ.
Shree Nagakannika Durgaparameshwari Temple, ArasammanaKaanu

Shree Nagakannika Durgaparameshwari

ಕುಂದಾಪುರ ತಾಲೂಕಿನ ಶೇಡಿಮನೆ(Shedimane) ಪ್ರಕೃತಿಯ ಸೆರಗನ್ನು ಹಾಸಿಕೊಂಡು ವಿಶ್ರಮಿಸುತ್ತಿರುವ ಪ್ರಕೃತೀದೇವಿಯ ಅರಮನೆಯಂತೆ ಪ್ರಕೃತಿದೇವಿಯ ಆರಾಧಕರಿಗೆ ಕಂಡುಬರುತ್ತದೆ. ಸುತ್ತಲೂ ಹಚ್ಚ-ಹಸಿರಿನ ಕಾನನ, ಅದರ ಮದ್ಯೆ ಪಂಚನಾಗಕನ್ಯೆಯರ ಪರಮ ಪವಿತ್ರ ಕ್ಷೇತ್ರಗಳಲ್ಲಿ ಮೊದಲನೆಯ ಪುಣ್ಯ ಕ್ಷೇತ್ರವೇ ಅರಸಮ್ಮನಕಾನು ಶ್ರೀ ನಾಗಕನ್ನಿಕಾ ದುರ್ಗಾಪರಮೇಶ್ವರೀ ಅಮ್ಮನವರ ದೇವಸ್ಥಾನ. ಇಲ್ಲಿ ದೇವಿ ಶಿವನರಸಿ ಪಾರ್ವತಿಯು ನಾಗಕನ್ಯೆಯರ ಜೊತೆಗೆ ನೆಲೆಸಿ ಶ್ರೀ ನಾಗಕನ್ನಿಕಾ ದುರ್ಗಾಪರಮೇಶ್ವರೀ(Nagakannika Durgaparameshwari) ಎಂದು ನಾಮಾಂಕಿತಳಾಗಿದ್ದಾಳೆ. ಶಂಕಚೂಡನ(Shankachooda) ಪಂಚಕುವರಿಯರಲ್ಲಿ ಹಿರಿಯ ಮಗಳೆ 'ದೇವರತಿ'.(Devarathi) ಇವಳು ನೆಲೆಸಿ ನಿಂದ ಪುಣ್ಯಧಾಮವೇ 'ಅರಸಮ್ಮನಕಾನು'(Arasammanakaanu) ಎಂದು ಪ್ರಸಿದ್ಧಿಯನ್ನು ಹೊಂದಿದೆ.

ನಾಗಲೋಕದ ಶ್ರೀ ಶಂಕಚೂಡನೆಂಬ ನಾಗರಾಜನಿಗೆ ವರಪ್ರಸಾದದಿಂದ ಜನಿಸಿದ ದೇವರತಿ, ನಾಗರತಿ, ಚಾರುರತಿ, ಮಂದರತಿ ಮತ್ತು ನೀಲರತಿ ಎಂಬ ಐದು ಜನ ಹೆಣ್ಣುಮಕ್ಕಳು ಮಹೇಶ್ವರನ ಮಗ ಸುಬ್ರಮಣ್ಯಸ್ವಾಮಿಯನ್ನು(Subramanya Swamy) ವಿವಾಹವಾಗುವ ಹಂಬಲದಿಂದ, ಸುಬ್ರಮಣ್ಯಸ್ವಾಮಿಯನ್ನು ಕಾಣಲು ಕೈಲಾಸಕ್ಕೆ ತೆರಳಿ ಅಲ್ಲಿಯ ದ್ವಾರಪಾಲಕ ನಂದಿಯ(Nandikeshwara) ಶಾಪದಿಂದಾಗಿ ಸರ್ಪರೂಪದಲ್ಲಿ ಭೂಲೋಕ ಸಹ್ಯಾದ್ರಿಪರತ್ವದ ಕಾಡ್ಗಿಚ್ಚಿನಲ್ಲಿಸಿಕ್ಕು ಪರಿತಪಿಸುತ್ತಿದ್ದರು. ವ್ಯಾಘ್ರವಾದ ಮಹರ್ಷಿಗಳು ಸಹ್ಯಾದ್ರಿ ಪರತ್ವದ ಬಳಿ ಸಂಚರಿಸುವಾಗ ಅವರನ್ನು ನೋಡಿದ ನಾಗಕನ್ಯೆಯರು ಅವಸರವಾಗಿ ಓಡಾಡಿದಾಗ ಉಂಟಾದ ತರಗಿಲೆಯ ಶಬ್ದಕ್ಕೆ ಹೌಹಾರಿದ ಮಹರ್ಷಿಗಳಿಂದ, ಗತಿ ಕುಂಟಿತವಾಗಿ ಬಿದಿರು ಮಳೆಗೆ ಶೀಮಿತವಾಗಿರುವಂತಹ ಶಾಪಕ್ಕೆ ಆ ನಾಗಕನ್ಯೆಯರು ಗುರಿಯಾಗುತ್ತಾರೆ. ರಾಜಪುರುಷನೊಬ್ಬನಿಂದ ಶಾಪ ವಿಮೋಚನೆಯಾಗುವದೆಂದು ಮಹರ್ಷಿಗಳು ಹರಸಿದಂತೆ ಆವಂತಿಯ ರಾಜ ದೇವವರ್ಮನು ರಾಜ್ಯಬ್ರಷ್ಠನಾಗಿ ವೇಷ ಮರೆಸಿಕೊಂಡು ಸಹ್ಯಾದ್ರಿ ಪರ್ವತದಲ್ಲಿ ತಿರುಗಿದಾಗ ಕಾಡ್ಗಿಚ್ಚಿನಲ್ಲಿ ಬೆಂದು ಹೋಗುತ್ತಿರುವ ಐದು ಸರ್ಪಗಳನ್ನು ಉಳಿಸಿ ಅವುಗಳನ್ನು ಒಂದು ಬಟ್ಟೆಯಲ್ಲಿ ಸುತ್ತಿಕೊಂಡು ಪಶ್ಚಿಮಾಭಿಮುಖವಾಗಿ ಹೋಗುತ್ತಿರುವಾಗ ಆ ಸರ್ಪಗಳು ಒಂದೊಂದಾಗಿ ಹುತ್ತದಲ್ಲಿ ಸೇರಿದವು. ಹೀಗೆ ಶಾಪಕ್ಕೊಳಗಾದ ಪಂಚನಾಗಕನ್ನಿಕೆಯರು ತಮ್ಮ-ತಮ್ಮ ಸಾನ್ನಿಧ್ಯದ ಹುತ್ತದಲ್ಲಿ ನೆಲೆಸಿದರೆ, ಅವರೊಂದಿಗೆ ಜಗಾದಾದಿ ವಂದ್ಯಳಾದ ಪಾರ್ವತಿ ದೇವಿಯು ಶ್ರೀ ದುರ್ಗಾಪರಮೇಶ್ವರೀಯಾಗಿ ನೆಲೆಸಿ, ನಾಗಕ್ಷೇತ್ರವನ್ನು ಶಕ್ತಿಕ್ಷೇತ್ರವಾಗಿ ಮಾಡಿದ್ದಾಳೆ.

ಹೀಗೆ 'ದೇವರತಿ' ನೆಲೆಸಿ ನಿಂತ ಈ ಪುಣ್ಯಧಾಮದಲ್ಲಿ ಆದಿಶಕ್ತಿ ಶಿವಸತಿ ಶ್ರೀ ದುರ್ಗಾಪರಮೇಶ್ವರೀ ನೆಲೆಸಿನಿಂದು ಭಕ್ತರನ್ನು ಪೊರೆಯುತ್ತಾ, ಮಹಿಮೆಯನ್ನು ತೋರುತ್ತಾ ಮಂದಸ್ಮಿತೆಯಾಗಿ ನಿಂದಿದ್ದಾಳೆ. ಅರಸಮ್ಮನಕಾನಿನ ದುರ್ಗೆಯ ಮೂರ್ತಿಯು ಉತ್ಸವ ಮೂರ್ತಿಯನ್ನು ಹೋಲುತ್ತದೆ. ಬೃಹದಾಕಾರದ ಹುತ್ತದ ಮುಂದೆ ದೇವಿಯ ಬಿಂಬವನ್ನು ಇಟ್ಟು ಪೂಜಿಸಲಾಗುತ್ತದೆ. ಹುತ್ತವು ಸರಿಸುಮಾರು 10 ಅಡಿಗಳಷ್ಟು ಎತ್ತರವಿದೆ. ದೇವಿಯ ಬಿಂಬ ಚಿಕ್ಕದಾದರೂ, ಮಹಿಮೆ ಅಪಾರ.

ಅದೇ ತೆರನಾಗಿ ಆದಿಮಾಯೆ ಶಿವೆ ದುರ್ಗೆ ನೆಲೆಸಿ ನಿಂದ ಈ ತಾಣದಲ್ಲಿ ಗೆಂಡಸೇವೆಯು(Kenda Seve) ಅತ್ಯಂತ ವಿಶೇಷವಾಗಿದೆ. ಸಾವಿರಾರು ಜನರು ಸೇರಿ ಅಮ್ಮನವರ ಕೆಂಡ ಸೇವೆಯಲ್ಲಿ ಪಾಲ್ಗೊಂಡು ಕೃತಾರ್ಥರಾಗುತ್ತಾರೆ. ಮರಕ ಸಂಕ್ರಮಣದ ದಿವಸ ಇಲ್ಲಿ ಕೆಂಡೋತ್ಸವವು ಅದ್ದೂರಿಯಾಗಿ ನಡೆಯುತ್ತದೆ.

ಶ್ರೀ ಕ್ಷೇತ್ರವು ವೀರೇಂದ್ರ ಹೆಗ್ಗಡೆಯವರು ಮತ್ತು ಊರವರ ಸಹಕಾರದಿಂದ ಪುನರ್ ನಿರ್ಮಾಣಗೊಂಡಿದ್ದು ದೇವಾಲಯವು ಸುಂದರವಾಗಿ ಕಂಗೊಳಿಸುತ್ತಿದೆ. ಶ್ರೀ ಕ್ಷೇತ್ರದಲ್ಲಿ ಹಲವಾರು ಪರಿವಾರ ದೈವಗಳನ್ನು ಕಾಣಬಹುದು. ಕಲ್ಕುಡ, ಸತ್ಯದೇವತೆ, ಶಿವರಾಯ ಮುಂತಾದ ಪ್ರಮುಖ ದೈವಗಳಿಗೆ ಪ್ರತೀ ವರ್ಷ ಸಿರಿಸಿಂಗಾರ ನೇಮವು ನಡೆಯುತ್ತದೆ. ಶ್ರೀ ದೇವಿಯೊಂದಿಗೆ ಇರುವ ನಾಗಕನ್ನಿಕೆಯಿಂದ ನಾಗದೋಷವೂ ಕೂಡಾ ನಿವಾರಣೆಯಾಗುತ್ತದೆ. ನೀವು ಕೂಡಾ ಒಮ್ಮೆ ಶ್ರೀ ಆದಿಶಕ್ತಿ ದುರ್ಗೆಯು ನಾಗಕನ್ನಿಕೆಯರ ಶಾಪಕಳೆಯಲು ಬಂದ ಈ ಪುಣ್ಯ ಕ್ಷೇತ್ರವನ್ನು ಕಂಡು ಪುನೀತರಾಗಿ.




ವಿಳಾಸ :-
ಶ್ರೀ ನಾಗಕನ್ನಿಕಾ ದುರ್ಗಾಪರಮೇಶ್ವರೀ ದೇವಸ್ಥಾನ,

ಅರಸಮ್ಮನಕಾನು, ಶೇಡಿಮನೆ,

ಕುಂದಾಪುರ ತಾಲೂಕು, ಉಡುಪಿ ಜಿಲ್ಲೆ ||



ದಾರಿಯ ವಿವರ : ಕುಂದಾಪುರದಿಂದ ಹಾಲಾಡಿ-ಗೊಳಿಯಂಗಡಿ ಮಾರ್ಗವಾಗಿ ಸಾಗುವಾಗ ಶೇಡಿಮನೆಯಿಂದ ಕೆಲದೂರದಲ್ಲಿ ದಟ್ಟಕಾನನದ ಮದ್ಯದಲ್ಲಿ ಶ್ರೀ ದೇವಿಯ ಮಂದಿರವಿದೆ. ಬಸ್ಸುಗಳ ಸಂಖ್ಯೆ ವಿರಳವಾದರೂ, ಸ್ವಂತ ವಾಹನವಿದ್ದರೆ ಉತ್ತಮ. ಹತ್ತಿರದಲ್ಲಿಯೇ ಇನ್ನಿತರ ದೇವಾಲಯಗಳನ್ನು ಕೂಡಾ ವೀಕ್ಷಣೆ ಮಾಡಲು ಅನುಕೂಲವಾಗುತ್ತದೆ.